
ತಂದೆ ರಾಜ್ಯರಾಜಕಾರಣದ ಶಾಸಕ, ಸಚಿವರಾಗಿ, ಸಭಾಪತಿಗಳಾಗಿ ಹುದ್ದೆ ಅಲಂಕರಿಸಿದ್ದರೂ, ಅವರ ಮಗನನ್ನು ರಾಜಕೀಯಕ್ಕೆ ತರಲೂ ಬಯಸಿಲ್ಲವಂತೆ, ಕಾರಣ ಮಗ ಐಎಎಸ್ ಅಧಿಕಾರಿಯಾಗಲಿ ಎಂಬ ಕನಸಿಗೆ. ಆದರೆ ವಿಧಿಯಾಟವೇ ಬೇರೆಯಾಗಿರತ್ತು. ಮಗನ ಭವಿಷ್ಯ ಅದೇ ದಾರಿಯಲ್ಲಿ ಸಾಗಿದರೂ, ಎದುರಾದ ಕಥೆ ರೋಚಕ ಹುಟ್ಟಿಸುವಂಥದ್ದು. ಅಷ್ಟಕ್ಕೂ ಒಬ್ಬ ರಾಜಕಾರಣಿ ಮಗ, ಐಎಎಸ್ ಹಾದಿ ಮೊಟಕುಗೊಳಿಸಿದ್ದೇಕೆ? ಪ್ರಿಲಿಮ್ಸ್ ಆದ ಮೇಲೆ ಆಗಿದ್ದೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಹೌದು ಬೇರೆ ಯಾರೂ ಅಲ್ಲ, ಹಿರಿಯ ರಾಜಕಾರಣಿ, ಶಾಸಕ, ಸಚಿವರಾಗಿ, ಕೊನೆಗೆ ಸಭಾಪತಿ ಹುದ್ದೆ ಅಲಂಕರಿಸಿದ್ದ ಕೆ.ಬಿ.ಕೋಳಿವಾಡ ಅವರ ಮಗ ಪ್ರಸ್ತುತ ರಾಣೆಬೆನ್ನೂರಿನ ಶಾಸಕ ಪ್ರಕಾಶ ಕೋಳಿವಾಡ. ಇವರ ವಿದ್ಯಾಭ್ಯಾಸ ನೋಡಿದರೆ, ಇಂಜಿನಿಯರ್ ಪದವಿ ಹಾಗೂ ಎಂಬಿಎ ಮುಗಿಸಿದ ಪ್ರಕಾಶ ಕೋಳಿವಾಡ ಬದುಕು ಕಂಡಿದ್ದು, ಮುಂದೆ ಬೇರೆನೇ ಇದೆ. ಅದರಲ್ಲೂ ಅವರ ಮುಂದಿನ ಜರ್ನಿ ಸ್ಟ್ರಾರ್ಟ್ ಆಗಿದ್ದು ಹೈದರಾಬಾದ್ನಲ್ಲಿ. ಅಷ್ಟಕ್ಕೂ ಅವರು ಹೈದರಾಬಾದ್ನಲ್ಲಿ ಮಾಡಿದ್ದೇನು?
ಇಂಜಿನಿಯರ್ ಹಾಗೂ ಎಂಬಿಎ ಪದವಿ ಮುಗಿಸಿದ ಪ್ರಕಾಶ ಕೋಳಿವಾಡ ತಂದೆ ಆಸೆಯಂತೆ, ಯುಪಿಎಸ್ಸಿ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಆದರೆ ಪ್ರಾರಂಭದಲ್ಲಿ ಪ್ರಿಲಿಮ್ಸ್ ಪಾಸಾದ ಅವರು, ಮೇನ್ಸ್ನಲ್ಲಿ ಅನುತ್ತೀರ್ಣರಾದರು. ಅಷ್ಟೇ ಅಲ್ಲ ಇದಾದ ಮೇಲೆ ಏವಿಯೇಷನ್ ಬ್ಯುಸಿನೆಸ್ ಪ್ರಾರಂಭಿಸಿದರು. ತಂದನಂತರ ಅವರು ಸಂದರ್ಶನ ಹಾಗೂ ವಿವಧ ಸಂಧರ್ಭದಲ್ಲಿ ಎದುರಾದ ಘಟನೆ ರಾಜಕೀಯಕ್ಕೆ ಎಳೆದು ತಂದಿತು ಎಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಕೊನೆಗೆ ತಂದೆಯ ಅನಾರೋಗ್ಯ, ಹಾಗೂ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬರಲೇಬೇಕಾದ ಅನಿವಾರ್ಯ, ಅನಿಶ್ಚಿತತೆ ಎಂಬ ಸನ್ನಿವೇಶಗಳು ನನ್ನನ್ನು ರಾಜಕೀಯಕ್ಕೆ ತಂದು ನಿಲ್ಲಿಸಿದವು. ಅಲ್ಲದೇ ಕಾರ್ಯಕರ್ತರ ಒತ್ತಾಯವೂ ಹೆಚ್ಚಿತ್ತು ಎನ್ನುವುದನ್ನು ಸಂದರ್ಶನೊವೊಂದರಲ್ಲಿ ಈಗಾಗಲೇ ನೀಡಿದ ಅವರ ಹೇಳಿಕೆಗಳನ್ನೇ ಗಮನಿಸಬಹುದು ಅಲ್ವಾ? ಅಲ್ಲದೇ ರಾಜಕೀಯದಿಂದ ದೂರ ಉಳಿಯಬೇಕು ಎಂದವನ ಬದುಕು ಕಡೆಗೆ ಬಂದು ನಿಂತದ್ದು ರಾಜಕೀಯದಲ್ಲೇ ಅಲ್ವಾ?
ಈ ರಾಜಕೀಯಕ್ಕೆ ನನ್ನನ್ನು ತರಬಾರದು ಎಂಬ ಕಾರಣ, ಈ ರಾಜಕೀಯ ಪಟ್ಟು, ಅದರಲ್ಲಿನ ಒಳ--ಹೊರ ಹರಿವಿನ ಲೆಕ್ಕಾಚಾರ ಹಾಕು ಜ್ಞಾನ ಇನ್ನು ಕಡಿಮೆ. ಆದ್ದರಿಂದ ನಾನೂ ಈ ರಾಜಕೀಯಕ್ಕೆ ಹೊಸಬ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲಿದೇ ಕಾರಣದಿಂದ ತಂದೆಯಿಂದ ಕಲಿತ ರಾಜಕೀಯ ಪಾಠವೂ ಕಡಿಮೆ ಎಂದು ಹೇಳಿಕೊಂಡಿದ್ದಾರೆ. ಈ ಬದುಕು ಏನನ್ನೋ ಅರಿಸಿ ಕೊನೆಗೆ ಎಲ್ಲಿಗೋ ಬಂದು ನಿಂತು ಬಿಡುತ್ತದೆ ಎನ್ನುವುದಕ್ಕೆ ಇದು ತೆರೆದಿಟ್ಟ ಸಾಕ್ಷಿಯಾಗಿದೆ. ಇಷ್ಟೆಲ್ಲ ವಿದ್ಯಾಭ್ಯಾಸ್ ಮಾಡಿದ ಜ್ಞಾನವಿದ್ದರೂ ಅದೇ ಭಾಗದ ಅಂದರೆ, ಹಾವೇರಿ, ಧಾರವಾಡ ಗದಗ ಭಾಗದ ವಿದ್ಯಾರ್ಥಿಗಳು ಕೆಪಿಎಸ್ಸಿ ಹಗರಣದ ವಿರುದ್ಧ ಮೌನವಹಿಸಿದ್ದು ವಿಷಾಧಕರ ಸಂಗತಿ.