ಮೂನ್ಸೂಚನೆ: ಮುಂದಿನ 24  ಗಂಟೆಯಲ್ಲಿ ಕರ್ನಾಟಕದ ಇಲ್ಲೆಲ್ಲ ಭಾರಿ ಮಳೆ

Published : Jul 04, 2019, 04:22 PM ISTUpdated : Jul 04, 2019, 07:36 PM IST
ಮೂನ್ಸೂಚನೆ: ಮುಂದಿನ 24  ಗಂಟೆಯಲ್ಲಿ ಕರ್ನಾಟಕದ ಇಲ್ಲೆಲ್ಲ ಭಾರಿ ಮಳೆ

ಸಾರಾಂಶ

ಮುಂಗಾರು ಮಳೆ  ರಾಜ್ಯದಲ್ಲಿ ನಿಧಾನವಾಗಿ ಚುರುಕಾಗುತ್ತಿದೆ. ಕಳೆದ ಸಾರಿ ಭೀಕರ ಮಳೆಗೆ ಸಿಕ್ಕಿ ಸಂಕಷ್ಟ ಅನುಭವಿಸಿದ್ದ ಕೊಡಗು ಈ ಸಾರಿಯೂ ಮಳೆ ಪಡೆದುಕೊಳ್ಳುತ್ತಿದೆ.

ಬೆಂಗಳೂರು(ಜು.04)  ಕೊಡಗಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ಬುಧವಾರ ದಿನವಿಡೀ ಮಳೆ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ದುಬಾರೆ ಪ್ರವಾಸಿ ಕೇಂದ್ರದಲ್ಲಿ ಜು. 5 ರಿಂದ ರಾಫ್ಟಿಂಗ್ ಕ್ರೀಡೆಗೆ ಅವಕಾಶ ನೀಡಲಾಗಿದೆ.  ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಕುಶಾಲನಗರದಲ್ಲಿ ಮಳೆಗಾಗಿ ಪೂಜೆ ಸಹ ಸಲ್ಲಿಸಲಾಗಿದೆ. ಚೇನಂಡ ಕುಟುಂಬದವರು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮಡಿಕೇರಿ ನಗರದಲ್ಲಿ ಪರಿಹಾರ ವಿತರಣೆ ಮಾಡಿದ್ದಾರೆ. ಕೊಡಗಿನ ವಿರಾಜಪೇಟೆ, ಬಿರುನಾಣಿಯಲ್ಲಿ  ಅತ್ಯಧಿಕ 124 ಮಿಮೀ  ಮಳೆಯಾಗಿದೆ.

ಉದ್ಘಾಟನೆ ಆದರೂ ಪ್ರವಾಸಿಗರ ಉಪಯೋಗಕ್ಕಿಲ್ಲ ‘ಕೆನೋಪಿ ವಾಕ್‌’!

ಕೊಲ್ಲೂರು, ಬಾಳೆಹೊನ್ನೂರು, ಕೊಟ್ಟಿಗೆಹಾರ, ಜಯಪುರ, ಗೆರುಸೊಪ್ಪಾ, ಕದ್ರಾ, ತಾಳಗುಪ್ಪ, ಕಾರವಾರ, ಭಟ್ಕಳ, ಕಿರವತ್ತಿ, ಕಳಸ, ಕೊಪ್ಪ, ಶೃಂಗೇರಿ ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳು ಮಳೆ ಪಡೆದುಕೊಂಡಿವೆ.

ಈ ವರ್ಷ ಮಾನ್ಸೂನ್ ತಡವಾಗಿದ್ದು ಯಾಕೆ?

ಮುಂದಿನ 24  ಗಂಟೆಯಲ್ಲಿ ಭಾರೀ ಮಳೆ:  ಮುಂದಿನ ಒಂದು ದಿನದ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು  ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!