ಚಳ್ಳಕೆರೆ (ಅ.16) : ತಾಲೂಕಿನಾದ್ಯಂತ ಚಿತ್ತಾ ಮಳೆಯ ಆರ್ಭಟ ಜೋರಾಗಿದ್ದು, ಅಜ್ಜಯ್ಯನಗುಡಿ ಕೆರೆ ಕೋಡಿಬಿದ್ದಿದೆ. ಕರೇಕಲ್ ಕೆರೆಯಲ್ಲೂ ಸಹ ನೀರಿನ ಪ್ರಮಾಣ ಹೆಚ್ಚಿದೆ. ಕೆರೆ ಕೋಡಿಯ ನೀರು ರಹಿಂನಗರ, ಚಳ್ಳಕೆರೆ ದೇವಸ್ಥಾನ, ಪಾವಗಡ ರಸ್ತೆಯ ಮೂಲಕ ನಗರಂಗೆರೆ ಕೆರೆ ಸೇರಲಿದ್ದು, ಪಾವಗಡರಸ್ತೆಯಲ್ಲಿ ವಾಹನ ಸವಾರರು ಪ್ರಯಾಸದಿಂದಲೇ ಹಳ್ಳ ದಾಟುತ್ತಿದ್ದರೆ, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಲೀಡರ್‌ಶಿಪ್ ಎಲ್ಲಿದೆ?: ಸಿದ್ದರಾಮಯ್ಯ
ಶನಿವಾರ ಬೆಳಗ್ಗೆಯೇ ನೀರು ಹೆಚ್ಚಾಗಿ ಹರಿದ ಕಾರಣ ಎರಡ್ಮೂರು ಬೈಕ್ ಸವಾರರು ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸಂದರ್ಭದಲ್ಲಿ ದಡದಲ್ಲಿದ್ದ ಸಾರ್ವಜನಿಕರು ಹಳ್ಳಕ್ಕೆ ಬಿದ್ದ ಮೂರು ಜನರನ್ನು ಪಾರು ಮಾಡಿದ್ದಾರೆ. ಚಿತ್ರಯ್ಯನಹಟ್ಟಿಯ ವೃದ್ಧನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾ ಅಲ್ಲಿನ ಯುವಕರು ರಕ್ಷಿಸಿದ್ದಾರೆ. ಪಾವಗಡ ರಸ್ತೆಯಲ್ಲಿ ಹಳ್ಳದ ನೀರಿನಿಂದ ಅಪಾಯವಿದ್ದರೂ ಸಾರ್ವಜನಿಕರಿಗೆ ಎಚ್ಚರಿಕೆ ಕೊಡಲು ಪೊಲೀಸರಾಗಲಿ, ನಗರಸಭೆಯಾಗಲಿ ಯಾರೂ ಮುಂಜಾಗೃತೆ ವಹಿಸಿಲ್ಲ. ಸಾರ್ವಜನಿಕರೇ ಮಧ್ಯಾಹ್ನದಿಂದ ಸಂಜೆವರೆಗೂ ವಾಹನ ಸವಾರರಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಪತ್ರಿಕೆಗೆ ಮಾಹಿತಿ ನೀಡಿರುವ ವಾಣಿಜ್ಯೋದ್ಯಮಿ ಎಂ.ಎಸ್.ಮಾರುತೇಶ್, ಕಳೆದ ಎರಡು ತಿಂಗಳಲ್ಲಿ ಒಟ್ಟು ಮೂರ್ನಾಲ್ಕು ಬಾರಿ ಈ ಹಳ್ಳ ತುಂಬಿ ಹರಿದಿದ್ದು, ಕಡೆಯ ಪಕ್ಷ ಸರ್ಕಾರ ಕೂಡಲೇ ಈ ಭಾಗದಲ್ಲಿ ಸೇತುವೆ ನಿರ್ಮಿಸಬೇಕು. ಹಳ್ಳದಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಿದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವೆಂದಿದ್ದಾರೆ. ಇಲ್ಲಿನ ನಿವಾಸಿಗಳಾದ ಶಿವು, ಚಂದ್ರು, ರಾಘವೇಂದ್ರಶೆಟ್ಟಿ, ರಂಗ, ರಮೇಶ್, ನಾಗರಾಜು, ಹನುಮಂತಪ್ಪ ಮುಂತಾದವರು ಸಹ ಸೇತುವೆ ನಿರ್ಮಾಣಕ್ಕೆ ಒತ್ತು ನೀಡಬೇಕು. ಶಾಸಕರಾದ ಟಿ.ರಘುಮೂರ್ತಿಯವರು ಈ ಬಗ್ಗೆ ತುರ್ತು ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ, ಕಾಂಗ್ರೆಸ್‌ಗೆ ಬಿಜೆಪಿ ಠಕ್ಕರ್..!
ನಿರಂತರ ಮಳೆಯಿಂದ ಚಳ್ಳಕೆರೆಯಿಂದ ದುಗ್ಗಾವರಕ್ಕೆ ಹೋಗುವ ಡಾಂಬರ್ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪ್ರಾಣಾಪಾಯವಾಗುವ ಸಂಭವಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶನಿವಾರ ಬೆಳಗ್ಗೆ ಬಿದ್ದ ಮಳೆಯಿಂದ ತಳಕು ಹೋಬಳಿ ದೊಡ್ಡಬಾದಿಹಳ್ಳಿಯ ಅಶೋಕ್ ಎಂಬುವವರ ಮನೆ ಬಾಗಶಃ ಕುಸಿದು ನಷ್ಟಸಂಭವಿಸಿದೆ, ಮನ್ನೆಕೋಟೆಯ ತಿಪ್ಪೇಸ್ವಾಮಿ, ದುರುಗೇಶ್ ಎಂಬುವವರ ಮನೆ ಕುಸಿದಿವೆ.