ಮದುವೆ ಮನೆಯ ಸಂಭ್ರಮ ಕಸಿದುಕೊಂಡ ಮಹಾಮಳೆ, ಬೀದಿಗೆ ಬಂದ ಕುಟುಂಬ!

By Gowthami KFirst Published May 22, 2023, 4:45 PM IST
Highlights

ಹಾಸನ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಒಂದೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾದ್ರೆ. ಮತ್ತೊಂದೆಡೆ ಮದುವೆಯ ಸಂಭ್ರಮವನ್ನೂ ಕಸಿದುಕೊಂಡಿದೆ.

ಹಾಸನ (ಮೇ.22): ಹಾಸನ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಒಂದೆಡೆ ಮಳೆರಾಯನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾದ್ರೆ. ಮತ್ತೊಂದೆಡೆ ಮದುವೆಯ ಸಂಭ್ರಮವನ್ನೂ ಕಸಿದುಕೊಂಡಿದೆ. ಜಿಲ್ಲೆಯ ಹಲವು ಕಡೆ  ಬಿರುಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿಹೋಗಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರಿ ಅವಾಂತರ ತಪ್ಪಿದೆ. ಹಾಸನ ನಗರದ ಹೊರ ವಲಯ ದೇವೇಗೌಡ ನಗರದಲ್ಲಿ ಘಟನೆ ನಡೆದಿದ್ದು, ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಿದೆ.  ಅನೇಕ ಕುಟುಂಬಗಳು ಮನೆಯಿಂದ ಬೀದಿಗೆ ಬಿದ್ದಿದೆ. 

ಮದುವೆಯ ಸಂಭ್ರಮವನ್ನೂ ಕಸಿದುಕೊಂಡ ವರುಣ: ವರುಣನ ಆರ್ಭಟಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಮದುವೆಗೆಂದು ತಂದಿದ್ದ ಸಾವಿರಾರು ಬೆಲೆಯ ಸೀರೆ, ಬಟ್ಟೆ, ವಸ್ತುಗಳು ಬೀದಿಪಾಲಾಗಿದೆ. ಅಲ್ತಾಫ್ ಎಂಬುವರ ತಂಗಿ ಮದುವೆ ಜೂ.4 ರಂದು‌ ನಿಶ್ಚಯವಾಗಿತ್ತು. ಆದರೆ  ಮಳೆ‌ ಹಾನಿಯಿಂದ ಮದುವೆ ತಯಾರಿ ಮಾಡಲಾಗದೆ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ವಾಸಕ್ಕೂ  ಕುಟುಂಬ ಮನೆಯಿಲ್ಲದೆ ಪರದಾಡುತ್ತಿದೆ. ಶೀಘ್ರವಾಗಿ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ. ರಾತ್ರಿ ಆದ ಅವಘಡಕ್ಕೆ ಇಲ್ಲಿಯವರೆಗೂ ಯಾವ ಅಧಿಕಾರಿಗಳು ಕೂಡ ತಿರುಗಿಯೂ ನೋಡಿಲ್ಲ. ಜನಪ್ರತಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Bengaluru Danger: ಬೆಂಗಳೂರಲ್ಲಿವೆ 25 ಪ್ರವಾಹ ಪೀಡಿತ ಪ್ರದೇಶ: ಬಿಬಿಎಂಪಿ ಆಯುಕ್ತ ಮಾಹಿತಿ

ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾದ ಪರಿಣಾಮ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಲಿಕಲ್ಲು ಮಳೆಗೆ ಹೊಗೆಸೊಪ್ಪು ಬೆಳೆ ನೆಲಕಚ್ಚಿದೆ.

ಚಿಕ್ಕಮಗಳೂರಿನ ಭದ್ರಾ ಜಲಾಶಯ ಕಾಲುವೆ ನೀರಿನಲ್ಲಿ ಮುಳುಗಿ ಮೂವರ ಸಾವು

click me!