ಮೊದಲ ಬಾರಿಗೆ 43 ಡಿಗ್ರಿ ದಾಟಿದ ಉಷ್ಣಾಂಶ ಬಿಸಿಲು, ಯಾದಗಿರಿಯಲ್ಲಿ ಮತ್ತಷ್ಟುಶಿಶುಗಳು ಅಸ್ವಸ್ಥ

By Kannadaprabha News  |  First Published May 22, 2023, 1:15 PM IST

ಶುಕ್ರವಾರ 45.4 ಹಾಗೂ ಶನಿವಾರ 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡಿದ್ದ ಯಾದಗಿರಿಯಲ್ಲಿ ಭಾನುವಾರ 43 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಉಷ್ಣಾಂಶ ಕಂಡಿರುವ ಯಾದಗಿರಿಗರ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ.


ಯಾದಗಿರಿ (ಮೇ.22) : ಶುಕ್ರವಾರ 45.4 ಹಾಗೂ ಶನಿವಾರ 44.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡಿದ್ದ ಯಾದಗಿರಿಯಲ್ಲಿ ಭಾನುವಾರ 43 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಉಷ್ಣಾಂಶ ಕಂಡಿರುವ ಯಾದಗಿರಿಗರ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ. ಇನ್ನೆರಡು ದಿನಗಳಲ್ಲಿ 46 ರಿಂದ 47 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂಬ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.

ವಾತಾವರಣವನ್ನು ಸಹಜ ಸ್ಥಿತಿಗೆ ತರಲು, ಬಿಸಿಲು ಹೆಚ್ಚಿರುವ ಮತ್ತು ಬಿಸಿಹವೆ ಬೀಸುತ್ತಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳ ಮೇಲೆ, ಪ್ರಮುಖ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸಿಂಪರಣೆ ಮಾಡಲಾಗುತ್ತಿದೆ. ಈ ಮಧ್ಯೆ, ಬಿಸಿಲು ಜಾಸ್ತಿಯಾಗಿ ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗಿ)ಗೊಂಡ ನವಜಾತ ಶಿಶುಗಳು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ ಎಂದು ಯಾದಗಿರಿಯ ಮಕ್ಕಳ ತಜ್ಞ ಡಾ.ಸಚಿನ್‌ ತಿಳಿಸಿದ್ದಾರೆ.

Latest Videos

undefined

ಯಾದಗಿರಿ: ಚಿಕುನ್ ಗುನ್ಯಾ ಖಾಯಿಲೆಗೆ ಹಾಸಿಗೆ ಹಿಡಿದ ಇಡೀ ಗ್ರಾಮ, ಅಧಿಕಾರಿಗಳ ನಿರ್ಲಕ್ಷ್ಯ!

ಕಲ್ಯಾಣ ಕರ್ನಾಟಕ ಧಗಧಗ:

ಇದೇ ವೇಳೆ, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ 41.8, ಕೊಪ್ಪಳದಲ್ಲಿ 41.4, ವಿಜಯಪುರದಲ್ಲಿ 41.1, ರಾಯಚೂರಿನಲ್ಲಿ 41.0 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಕಲ್ಯಾಣ ಕರ್ನಾಟಕದ ನಗರಗಳು ಧಗಧಗಿಸುತ್ತಿವೆ. ಕೊಪ್ಪಳದಲ್ಲಿ ಶೇ.90ರಷ್ಟುಎಳೆನೀರು ಅಂಗಡಿಗಳು ಬಂದ್‌ ಆಗಿದ್ದು, ಏಳೆನೀರೊಂದರ ಬೆಲೆ 40ರೂ. ದಾಟಿದೆ. ಕಾರಣ ಕೇಳಿದರೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಂಡ್ಯ, ಮೈಸೂರು ಭಾಗದಿಂದ ಎಳೆನೀರು ಬರುತ್ತಿತ್ತು. ಆದರೆ, ಈ ಬಾರಿ ಆ ಭಾಗದಿಂದ ಎಳೆನೀರು ಬರುತ್ತಿಲ್ಲ. ಸ್ಥಳೀಯವಾಗಿ ದೊರೆಯುವ ಎಳೆನೀರು ತೀರಾ ಕಡಿಮೆ ಇದೆ. ಈ ಬಾರಿ ಅತಿಯಾದ ಬಿಸಿಲಿನಿಂದ ಎಳೆನೀರು ಇಳುವರಿಯಲ್ಲಿ ಭಾರಿ ಇಳಿಕೆಯಾಗಿದೆ. ಹೀಗಾಗಿ, ಎಳೆನೀರೇ ಸಿಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.

ಯಾದಗಿರಿಯಲ್ಲಿ ದಾಖಲೆಯ ಬಿಸಿಲು: ಕರ್ನಾಟಕದಲ್ಲೇ ಅತ್ಯಧಿಕ 45.6 ಡಿಗ್ರಿ ತಾಪ..!

ಜೊತೆಗೆ, ಈ ಭಾಗದಲ್ಲಿ ಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ಮನೆಯಿಂದ ಆಚೆ ಯಾರೂ ಬರುತ್ತಿಲ್ಲ. ರಸ್ತೆಗಳು ಬಿಕೋ ಎನ್ನುತ್ತವೆ. ಮಾರುಕಟ್ಟೆಸ್ತಬ್ಧವಾಗುತ್ತದೆ. ಕುಡಿಯುವ ನೀರು ಇಟ್ಟಲ್ಲಿಯೇ ಬಿಸಿಯಾಗುತ್ತದೆ. ಸಿಂಟೆಕ್ಸ್‌ನಲ್ಲಿಯ ನೀರು ಸಹ ಕಾಯುತ್ತದೆ. ಸೋಲಾರ್‌ ಅಳವಡಿಸಿದಂತೆ ನಲ್ಲಿಯಲ್ಲಿ ಬಿಸಿ ನೀರು ಬರುತ್ತದೆ ಎನ್ನುತ್ತಾರೆ ನಿವಾಸಿಗಳು.

click me!