Bengaluru Rains: ಬೆಂಗ್ಳೂರಲ್ಲಿ ಮುಂದುವರಿದ ಮಳೆ: ಧರೆಗುರುಳಿದ ಮರಗಳು..!

Published : May 10, 2022, 08:46 AM IST
Bengaluru Rains: ಬೆಂಗ್ಳೂರಲ್ಲಿ ಮುಂದುವರಿದ ಮಳೆ: ಧರೆಗುರುಳಿದ ಮರಗಳು..!

ಸಾರಾಂಶ

*   ಮನೆ ಮೇಲ್ಛಾವಣಿಗೆ ಹಾನಿ, ಮುರಿದು ಬಿದ್ದ ವಿದ್ಯುತ್‌ ಕಂಬಗಳು *   ರೈತರ ಬೆಳೆಗಳು ನೀರಿಗೆ ಬಲಿ, ಅಪಾರ ನಷ್ಟ *  ಮಳೆ-ಗಾಳಿಗೆ ಪಪ್ಪಾಯಿ ಬೆಳೆ ನಾಶ

ಬೆಂಗಳೂರು(ಮೇ.10):  ರಾಜಧಾನಿ ಬೆಂಗಳೂರಿನಲ್ಲಿ(Bengaluru) ಸೋಮವಾರವೂ ಮಳೆ(Rain) ಸುರಿದಿದ್ದು, ರಾಜರಾಜೇಶ್ವರಿ ನಗರ, ಮೆಜೆಸ್ಟಿಕ್‌, ಯಲಹಂಕ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಆರ್‌.ಆರ್‌.ನಗರ, ಯಲಹಂಕ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಅರಮನೆ ರಸ್ತೆ, ಶಿವಾನಂದ ವೃತ್ತ, ಮೆಜೆಸ್ಟಿಕ್‌, ಮಲ್ಲೇಶ್ವರ, ಅನಂದ್‌ ರಾವ್‌ ವೃತ್ತ ಸೇರಿದಂತೆ ಮೊದಲಾದ ಕಡೆ ಸಾಧಾರಣ ಮಳೆಯಾಗಿದ್ದು, ಮಾರುತಿ ಸೇವಾ ನಗರದಲ್ಲಿ ಎರಡು, ಚಂದ್ರಾಲೇಔಟ್‌ ಸೇರಿದಂತೆ ನಗರದ ವಿವಿಧೆಡೆ ಐದಾರು ಮರ ಹಾಗೂ ಮರದ ಕೊಂಬೆ ಧರೆಗುರುಳಿದ ವರದಿಯಾಗಿದೆ. ನಗರದಲ್ಲಿ ಸರಾಸರಿ 0.4 ಮಿ.ಮೀ. ಮಳೆಯಾದ ವರದಿಯಾಗಿದೆ.

ಬಿರುಗಾಳಿ ಸಹಿತ ಭಾರೀ ಮಳೆಗೆ ನೆಲಕ್ಕುರುಳಿದ ತೆಂಗಿನ ಮರಗಳು

ಕೆ.ಆರ್‌.ಪೇಟೆ:  ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ತೆಂಗಿನ ಮರಗಳು ನೆಲಕ್ಕುರುಳಿದ್ದು, ಮನೆ ಮೇಲ್ಛಾವಣಿ ಹಾರಿ ಹೋಗಿವೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆ ಭಾನುವಾರ ತಾಲೂಕಿನಾದ್ಯಂತ ಜರುಗಿದೆ.

ಒಡಿಶಾ ಕರಾವಳಿಯತ್ತ ಅಸಾನಿ ಚಂಡಮಾರುತ: ಹಲವು ರಾಜ್ಯಗಳಲ್ಲಿ ಭಾರೀ ಗಾಳಿ-ಮಳೆಯಾಗುವ ಎಚ್ಚರಿಕೆ!

ತಾಲೂಕಿನ ಅಂಚನಹಳ್ಳಿಯಲ್ಲಿ ಗಾಳಿ, ಮಳೆಗೆ ರೈತರಾದ ಚಿಕ್ಕವೀರಪ್ಪ, ಹೀರಾಜಮ್ಮರಿಗೆ ಸೇರಿದ ಸುಮಾರು ನೂರಕ್ಕೂ ಹೆಚ್ಚಿನ ತೆಂಗಿನ ಮರಗಳು ನೆಲಕಚ್ಚಿವೆ. ಐಚನಹಳ್ಳಿ ಗ್ರಾಮದಲ್ಲಿ ಸಣ್ಣಬೋರೇಗೌಡ, ಭೈರ, ಗಿರೀಶ್‌, ನವೀನ್‌ ಸೇರಿದಂತೆ ಸುಮಾರು ಏಳು ಮನೆಗಳ ಮೇಲ್ಛಾವಣಿ ಹಾರಿಹೋಗಿದೆ. ಅಲ್ಲದೇ, ಸುಮಾರು 150ಕ್ಕೂ ಹೆಚ್ಚಿನ ತೆಂಗಿನ ಮರಗಳು ನೆಕ್ಕುರುಳಿವೆ.

ರೈತರು(Farmers) ಸಂಗ್ರಹಿಸಿ ಇಟ್ಟಿದ್ದ ಭತ್ತ, ರಾಗಿ, ಹುರುಳಿಕಾಳು ಸೇರಿದಂತೆ ಹಲವು ಧಾನ್ಯಗಳು ಮಳೆ ನೀರಿಗೆ ಬಲಿಯಾಗಿವೆ. ಗ್ರಾಮದಲ್ಲಿ ಬಿರುಗಾಳಿಗೆ ಸುಮಾರು 4-5 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಹಲವು ಗ್ರಾಮಗಳಿಗೆ(Villages) ಕತ್ತಲು ಆವರಿಸುವ ಲಕ್ಷಣಗಳು ಗೋಚರಿಸಿವೆ. ಮದ್ದಿಕ್ಯಾಚಮನಹಳ್ಳಿ ಗ್ರಾಮದ ಬಡ ರೈತ ಶೇಷಾಚಾರಿಯವರಿಗೆ ಸೇರಿದ ಮನೆಯು ಮಳೆಗೆ ಕುಸಿದು ಬಿದ್ದು ಹಾನಿಯುಂಟಾಗಿದೆ.

ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಶ್ವೇತಾ ಕೋಂ ಕೃಷ್ಣೇಗೌಡರಿಗೆ ಸೇರಿದ ಮನೆಯ ಮೆಲ್ಛಾವಣಿ ಸಂಪೂರ್ಣವಾಗಿ ಬಿರುಗಾಳಿಗೆ ಹಾರಿಹೋಗಿದೆ. ಮಳೆ ನೀರು ಮನೆಯೊಳಗೆ ತುಂಬಿಕೊಂಡು ಪರದಾಡುವಂತಾಗಿದೆ. ರಾತ್ರಿ ಪೂರಾ ಮನೆಯ ಒಳಗೆ ಮಲಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

Karnataka Rains: ಕರ್ನಾಟಕದ ಹಲವು ಜಿಲ್ಲೆಯಲ್ಲಿ ಭಾರೀ ಮಳೆ: 2 ಬಲಿ

ತಾಲೂಕು ಆಡಳಿತ ಕೂಡಲೇ ಮಳೆಹಾನಿಯಿಂದ ಕಂಗಾಲಾಗಿರುವ ಕುಟುಂಬಗಳಿಗೆ ಭೇಟಿ ನೀಡುವ ಮೂಲಕ ಪರಿಶೀಲಿಸಿ ಹಾನಿಯಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆ ಕಂಗಾಲಾಗಿರುವ ರೈತರುಗಳು ಆಗ್ರಹಿಸಿದ್ದಾರೆ. ವಿಷಯ ತಿಳಿದ ತಹಸೀಲ್ದಾರ್‌ ಎಂ.ವಿ.ರೂಪ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮಳೆಹಾನಿಯಿಂದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

ಮಳೆ-ಗಾಳಿಗೆ ಪಪ್ಪಾಯಿ ಬೆಳೆ ನಾಶ

ಬಳ್ಳಾರಿ:  ನಗರದಲ್ಲಿ ಸಂಜೆ ಸುರಿದ ಮಳೆ ಹಾಗೂ ಗಾಳಿಯಿಂದ ಸುಮಾರು 30ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಕೌಲ್‌ ಬಜಾರ್‌ ಪ್ರದೇಶದ ಕಾರೊಂದರ ಮೇಲೆ ಮರ ಬಿದ್ದಿದ್ದು ಯಾವುದೇ ಹಾನಿಯಾಗಿಲ್ಲ. ತೀವ್ರವಾಗಿ ಬೀಸಿದ ಗಾಳಿಗೆ ನಗರದಲ್ಲಿ 60ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಾಗಿವೆ. ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಪಪ್ಬಾಯಿ ಬೆಳೆಗೆ ಹಾನಿಯಾಗಿದೆ. ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಖಚಿತವಾಗಿಲ್ಲ. ಮಳೆ ಗಾಳಿಯಿಂದ ಇಡೀ ನಗರದಲ್ಲಿ ವಿದ್ಯುತ್‌(Electricity) ವ್ಯತ್ಯಯವಾಗಿದೆ.
 

PREV
Read more Articles on
click me!

Recommended Stories

ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!
ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?