ಉರಿ ಬಿಸಿಲಿನಿಂದ ಕಾವೇರುತ್ತಿದ್ದ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಕೆಲ ಕಾಲ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ವಾತಾವರಣ ತಂಪಾಗಿತ್ತು.
ಮಡಿಕೇರಿ(ಏ.23): ಉರಿ ಬಿಸಿಲಿನಿಂದ ಕಾವೇರುತ್ತಿದ್ದ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಕೆಲ ಕಾಲ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ವಾತಾವರಣ ತಂಪಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ನಾಪೋಕ್ಲು, ಸುಂಟಿಕೊಪ್ಪ, ಸಿದ್ದಾಪುರ, ಚೆಟ್ಟಳ್ಳಿ, ಮಾದಾಪುರ, ಕಡಗದಾಳು, ಮರಗೋಡು ಮತ್ತಿತರ ಕಡೆಗಳಲ್ಲಿ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆ ಸುರಿದಿದೆ.
ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!
ಉರಿ ಬಿಸಿಲಿನಿಂದಾಗಿ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗಲಾರಂಭಿಸಿತ್ತು. ಆದರೆ ಈಗ ಕೆಲವೆಡೆಗಳಲ್ಲಿ ಮಳೆಯಾಗಿರುವುದರಿಂದ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಮುಸ್ಲಿಮರಲ್ಲಿ ಭರವಸೆ ಮೂಡಿಸಿತಂತೆ ಮೋದಿಯ ಆ ಮಾತು, ಪ್ರಧಾನಿಗೆ ಮೆಚ್ಚುಗೆ ಪತ್ರ
ಸುಂಟಿಕೊಪ್ಪ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಭಾನುವಾರ ಹಾಗೂ ಬುಧವಾರ ಅಪರಾಹ್ನ 2.30ರ ಸಂದರ್ಭ ಮೋಡ ಕವಿದು ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಸೊರಗಿದ್ದ ಜನತೆ ಮಳೆಯಿಂದ ನಿಟ್ಟುಸಿರು ಬಿಡುವಂತಾಯಿತು.