ಹಾಸನದ ಸಕಲೇಶಪುರ ತಾಲೂಕಿನಲ್ಲಿ ಕಳೆದೊಂದು ದಿನದಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜುಲೈ ಆರಂಭದಲ್ಲಿ ಸುರಿದ ಮಳೆ ಮತ್ತೊಂದಷ್ಟು ದಿನ ಮಾಯವಾಗಿತ್ತು. ಇದೀಗ ಉತ್ತಮ ಮಳೆಯಾಗಿದ್ದು, ಹೇಮಾವತಿಯಲ್ಲೂ ಒಳಹರಿವು ಹೆಚ್ಚಾಗಿದೆ.
ಹಾಸನ: ಸಕಲೇಶಪುರ ತಾಲೂಕಿನಲ್ಲಿ ಕಡಿಮೆಯಾಗಿದ್ದ ಮಳೆ ಪ್ರಮಾಣ ಕಳೆದ 24 ಗಂಟೆಯಲ್ಲಿ ಅಧಿಕಗೊಂಡಿದ್ದು ಇದರಿಂದ ತಾಲೂಕಿನಲ್ಲೆಡೆ ಉತ್ತಮ ಮಳೆಯಾಗುತ್ತಿದೆ.
ಮಲೆನಾಡಿನಲ್ಲಿ ಮುಂಗಾರು ಅಬ್ಬರ : ತುಂಬಿ ಹರಿಯುತ್ತಿರುವ ತುಂಗೆ, ಭದ್ರೆ
ಜುಲೈ ಮೊದಲವಾರದಲ್ಲಿ ಬಿದ್ದ ಮಳೆ ಎರಡನೇ ವಾರ ಮಳೆ ಕೈಕೊಟ್ಟಿತ್ತು. ಇದರಿಂದ ಬಹುತೇಕ ನದಿಗಳು, ಹಳ್ಳ,ಕೆರೆಗಳಲ್ಲಿ ನೀರಿನ ಹರಿವಿಕೆ ಪ್ರಮಾಣ ಬಹಳ ಕಡಿಮೆಯಾಗಿತ್ತು. ತಾಲೂಕಿನ ಜೀವನದಿ ಹೇಮಾವತಿಯಲ್ಲಿ ಸಹ ಒಳಹರಿವಿನ ಪ್ರಮಾಣ ಕಡಿಮೆಯಿದ್ದು ಶುಕ್ರವಾರ ಸುರಿದ ಉತ್ತಮ ಮಳೆಗೆ ಹೇಮಾವತಿ ನದಿಯಲ್ಲಿ ನೀರಿನ ಒಳಹರಿವಿನ ಮಟ್ಟತುಸು ಏರಿದೆ.
ಕೃಷಿ ಚಟುವಟಿಕೆಗಳು ಬಿರುಸು:
ಮಳೆಯಿಂದಾಗಿ ತಾಲೂಕಿನಲ್ಲಿ ಶೀತದ ವಾತಾವರಣ ಉಂಟಾಗಿದ್ದು ,ಕೃಷಿ ಚಟುವಟಿಕೆಗಳಲ್ಲಿ ತುಸು ಬಿರುಸು ಕಂಡು ಬಂದಿದೆ. ಹೆತ್ತೂರು, ಯಸಳೂರು ಹೋಬಳಿಯಲ್ಲಿ ಕಳೆದ ಒಂದು ರಾತ್ರಿಯಲ್ಲಿ 70ಮಿ.ಮೀಗೂ ಹೆಚ್ಚು ಮಳೆ ಬಿದ್ದಿದ್ದು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಗ್ರಾಮಗಳು ಕತ್ತಲೆಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ