ಹಾಡು ಬಾ ಕೋಗಿಲೆ ಅಂತಿದೆ ಹಾಸನ, ಹಾಡೋಕೆ ನೀವು ರೆಡೀನಾ..?

By Kannadaprabha NewsFirst Published Jul 28, 2019, 10:52 AM IST
Highlights

ಹಾಸನದ ಚನ್ನರಾಯಪಟ್ಟಣದಲ್ಲಿ ಹಾಡು ಬಾ ಕೋಗಿಲೆ ಸಿಂಗಿಂಗ್ ಆಡಿಷನ್ ನಡೆಯಲಿದೆ. ಜು.31ರಂದು ಬೆಳಗ್ಗೆ 9ಘಂಟೆಗೆ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕಿನ ಪ್ರತಿಭೆಗಳಿಗಾಗಿ 6ರಿಂದ 14ವರ್ಷ, 15ರಿಂದ 30ವರ್ಷ, ಮತ್ತು 31ವರ್ಷ ಮೇಲ್ಪಟ್ಟವರು ಹೀಗೆ ಮೂರು ವಿಭಾಗಗಳಲ್ಲಿ ಆಡಿಷನ್‌ ನಡೆಯಲಿದೆ. 

ಹಾಸನ(ಜು.28): ಜಿಲ್ಲೆಯ ಸಂಗೀತ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ವೇದಿಕೆ ಸೃಷ್ಟಿಸಿ, ಅತ್ಯುತ್ತಮ ಗಾಯಕರನ್ನಾಗಿಸಿ ನಗದು ಬಹುಮಾನದೊಂದಿಗೆ ಅವರನ್ನು ಹಾಸನ ಸ್ಟಾರ್‌ ಸಿಂಗರ್‌ ಎಂಬ ಬಿರುದಿನೊಂದಿಗೆ ಅಭಿನಂದಿಸುವ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ರೈತ ಘಟಕದ ರಾಜಾಧ್ಯಕ್ಷ ಎಚ್‌.ಎನ್‌.ಲವಣ್ಣ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ, ಹಾಸನ ವೈಷ್ಣವಿ ಚಾರಿಟಬಲ್‌ ಟ್ರಸ್ಟ್‌ ಮತ್ತು ಲಯನ್ಸ್‌ ಕ್ಲಬ್‌ ಚನ್ನರಾಯಪಟ್ಟಣ ಇವರುಗಳ ಸಹಯೋಗದಲ್ಲಿ ಜಿಲ್ಲೆಯ ಪ್ರತಿಭೆಗಳನ್ನು ಗುರ್ತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಡು ಬಾ ಕೋಗಿಲೆ ಸಿಂಗಿಂಗ್‌ ಆಡಿಷನ್‌ನ್ನು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಎಂ ಡಿ ಪಲ್ಲವಿಗೆ ರಾಷ್ಟ್ರ ಪ್ರಶಸ್ತಿ ಗರಿ

ಗೆದ್ದವರಿಗೆ ನಗದು ಸಹಿತ ಬಿರುದು:

ಪಟ್ಟಣದಲ್ಲಿ ಜು.31ರಂದು ಬೆಳಗ್ಗೆ 9ಘಂಟೆಗೆ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕಿನ ಪ್ರತಿಭೆಗಳಿಗಾಗಿ 6ರಿಂದ 14ವರ್ಷ, 15ರಿಂದ 30ವರ್ಷ, ಮತ್ತು 31ವರ್ಷ ಮೇಲ್ಪಟ್ಟವರು ಹೀಗೆ ಮೂರು ವಿಭಾಗಗಳಲ್ಲಿ ಆಡಿಷನ್‌ ನಡೆಯಲಿದೆ. ಇಲ್ಲಿ ಆಯ್ಕೆಯಾದವರು ಆ.17ರಂದು ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಆಡಿಷನ್‌ ಮೂಲಕ ಆಯ್ಕೆಯಾದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನದ ಜೊತೆಗೆ ಸ್ಟಾರ್‌ ಸಿಂಗರ್‌ ಆಫ್‌ ಹಾಸನ ಎಂದು ಬಿರುದು ನೀಡಲಾಗುತ್ತದೆ ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಲೂಕಿನ ಪ್ರತಿಭೆಗಳು ಆಡಿಷನ್‌ನಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ಜು.28ರಿಂದ 30ರೊಳಗೆ ಬಾಗೂರು ರಸ್ತೆ, ವಿಜಯಲಕ್ಷ್ಮೀ ಕಾಂಪ್ಲೇಕ್ಸ್‌ನಲ್ಲಿರುವ ಡಿಟಿಡಿಸಿ ಕೋರಿಯರ್‌ನಲ್ಲಿ ನೊಂದಾಯಿಸಿಕೊಳ್ಳುವಂತೆ ಅಯೋಜಕರು ತಿಳಿಸಿದ್ದಾರೆ.

ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ತಾ.ಅಧ್ಯಕ್ಷ ಎಚ್‌.ಬಿ.ಕೃಷ್ಣೇಗೌಡ, ಉಪಾಧ್ಯಕ್ಷ ಎಸ್‌.ಎನ್‌.ಶಿವಣ್ಣ, ಮಹಿಳಾ ಘಟಕದ ತಾ.ಅಧ್ಯಕ್ಷೆ ಶೋಭಾರವಿ, ಜಿಲ್ಲಾ ಗೌರವಾಧ್ಯಕ್ಷೆ ಪದ್ಮಬಸವರಾಜ್‌, ಇದ್ದರು.

click me!