ರಸ್ತೆಯಲ್ಲೇ ಲಾರಿ ಇಂಟರ್‌ ಲಾಕ್‌: ತಪ್ಪಿದ ಭಾರಿ ಅನಾಹುತ

By Web Desk  |  First Published Sep 27, 2019, 1:40 PM IST

ಜಲ್ಲಿ ಪುಡಿ ತುಂಬಿದ ಲಾರಿಯೊಂದು ಕಾರಿಗೆ ಜಾಗ ನೀಡಲು ರಸ್ತೆಯ ಪಕ್ಕದಲ್ಲಿ ಹಾಕಿರುವ ಇಂಟರ್‌ ಲಾಕ್‌ ಮೇಲೆ ಹೋದಾಗ ಕುಸಿತ| ಲಾರಿಯ ಚಕ್ರವು ಇಂಟರ್‌ ಲಾಕ್‌ ಸಮೇತ 2 ಅಡಿ ಕುಸಿದು ವಾಲಿ ನಿಂತ ಲಾರಿ| ಲಾರಿ ವಾಲಿ ನಿಂತ ರಸ್ತೆಯ ಪಕ್ಕದಲ್ಲೇ ಶಾಲೆಗಳಿವೆ| ಲಾರಿ ಉರುಳಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು | 


ನರಸಿಂಹರಾಜಪುರ:(ಸೆ.27) ಪಟ್ಟಣ ಪಂಚಾಯಿತಿ ಪಕ್ಕದಲ್ಲಿರುವ ರಸ್ತೆಯಲ್ಲಿ ಸಾಗುತ್ತಿದ್ದ ಜಲ್ಲಿ ಪುಡಿ ತುಂಬಿದ ಲಾರಿಯೊಂದು ಕಾರಿಗೆ ಜಾಗ ನೀಡಲು ರಸ್ತೆಯ ಪಕ್ಕದಲ್ಲಿ ಹಾಕಿರುವ ಇಂಟರ್‌ ಲ್ಯಾಕ್‌ ಮೇಲೆ ಲಾರಿ ಹೋದಾಗ ಲಾರಿಯ ಚಕ್ರವು ಇಂಟರ್‌ ಲಾಕ್‌ ಸಮೇತ 2 ಅಡಿ ಕುಸಿದು ಲಾರಿ ವಾಲಿ ನಿಂತ ಘಟನೆ ಗುರುವಾರ ನಡೆದಿದೆ. 

ಲಾರಿ ವಾಲಿ ನಿಂತ ರಸ್ತೆಯ ಪಕ್ಕದಲ್ಲೇ ಕರ್ನಾಟಕ ಪಬ್ಲಿಕ್‌ ಶಾಲೆ, ಸ್ಪಂದನ ಶಾಲೆ ಇದ್ದು ಲಾರಿ ಉರುಳಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. 

Tap to resize

Latest Videos

ಇದೇ ಜಾಗದಲ್ಲಿ ಕೆಲವು ದಿನಗಳ ಹಿಂದೆ ವಿದ್ಯುತ್‌ ಕಂಬ ಬದಲಾಯಿಸುವಾಗ ಇಂಟರ್‌ ಲಾಕ್‌ ತೆಗೆದು ವಿದ್ಯುತ್‌ ಕಂಬ ಕಿತ್ತು ಮತ್ತೆ ಮಣ್ಣು ತುಂಬಿಸಲಾಗಿತ್ತು.ನಂತರ ಇಂಟರ್‌ ಲಾಕ್‌ ಹಾಕಲಾಗಿತ್ತು. ಮತ್ತೆ ಕುಡಿಯುವ ನೀರಿನ ಸಮಸ್ಯೆ ಬಂದಾಗ ಮತ್ತೆ ಇಂಟರ್‌ ಲಾಕ್‌ ತೆಗೆದು ಗುಂಡಿ ಮಾಡಿ ಪೈಪ್‌ ಸರಿಮಾಡಿ ಇಂಟರ್‌ ಲ್ಯಾಕ್‌ ಹಾಕಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮಳೆಗಾಲವಾಗಿದ್ದರಿಂದ ಮಣ್ಣು ಗಟ್ಟಿಯಾಗದೆ ಇಂಟರ್‌ ಲಾಕ್‌ ಹಾಕಿರುವುದರಿಂದ ಇದರ ಮೇಲೆ ವಾಹನ ಹೋದಾಗ ಕುಸಿತ ಕಂಡಿದೆ. ಇನ್ನಷ್ಟುಅಪಘಾತವಾಗುವ ಮುಂಚೆ ವೈಜ್ಞಾನಿಕವಾಗಿ ಇಂಟರ್‌ ಲಾಕ್‌ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 
 

click me!