ಕೆಲವು ದಿನಗಳಿಂದ ಜಿಲ್ಲಾದ್ಯಂತ ಕೆಲವೆಡೆ ಆಗುತ್ತಿದ್ದು, ಬುಧವಾರವೂ ಮುಂದುವರಿದಿತ್ತು. ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಕಡೂರು ತಾಲೂಕಿನ ಕೆಲವೆಡೆ ಮಳೆ ಬಂದಿದೆ.
ಚಿಕ್ಕಮಗಳೂರು(ಏ.23): ಕೆಲವು ದಿನಗಳಿಂದ ಜಿಲ್ಲಾದ್ಯಂತ ಕೆಲವೆಡೆ ಆಗುತ್ತಿದ್ದು, ಬುಧವಾರವೂ ಮುಂದುವರಿದಿತ್ತು. ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಕಡೂರು ತಾಲೂಕಿನ ಕೆಲವೆಡೆ ಮಳೆ ಬಂದಿದೆ.
ಎನ್.ಆರ್.ಪುರ ಪಟ್ಟಣದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದು, ಸಂಜೆಯ ವೇಳೆಗೆ ದಟ್ಟವಾದ ಮೋಡ, ಸಿಡಿಲಿನ ಆರ್ಭಟ ಇತ್ತಾದರೂ ಮಳೆ ಮಾತ್ರ ಬರಲಿಲ್ಲ. ಆದರೆ, ತಾಲೂಕಿನ ಬಾಳೆಹೊನ್ನೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!
ಕೊಪ್ಪ ಪಟ್ಟಣ ಸೇರಿದಂತೆ ನೇತಾಜಿನಗರ, ಕಾಚ್ಗಲ್, ಅಂದಗಾರು, ಜೋಗಿಸರ, ಹರಂದೂರು ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ತಾಲೂಕಿನ ಬಸರೀಕಟ್ಟೆ, ಜಯಪುರ, ಗಡಿಕಲ್ಲು, ಸಿದ್ದರಮಠ ಸೇರಿದಂತೆ ಸುತ್ತಮುತ್ತ ಮಳೆ ಬಂದಿತು.
ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ, ಹೊರನಾಡು ಪ್ರದೇಶದಲ್ಲಿ ಮಳೆ ಬಂದಿದೆ. ಚಿಕ್ಕಮಗಳೂರು ನಗರದಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಮಳೆ ಸಾಧಾರಣವಾಗಿ ಬಂದಿತು. ಅನಂತರ ಬಿಡುವು ಕೊಟ್ಟಿತು. ಸಂಜೆ 6.30ರ ವೇಳೆಗೆ ದಟ್ಟವಾದ ಮೋಡ, ಮಿಂಚಿನ ಅಬ್ಬರ ನೋಡಿದ ಜನರು ಭಾರಿ ಮಳೆ ಸುರಿಯಲಿದೆ ಎಂದು ಅಂದಾಜು ಮಾಡಿದ್ದರು. ಆದರೆ, ನಿರೀಕ್ಷೆ ಹುಸಿಯಾಯಿತು.
ಮುಸ್ಲಿಮರಲ್ಲಿ ಭರವಸೆ ಮೂಡಿಸಿತಂತೆ ಮೋದಿಯ ಆ ಮಾತು, ಪ್ರಧಾನಿಗೆ ಮೆಚ್ಚುಗೆ ಪತ್ರ
ಕಡೂರು ಪಟ್ಟಣ ಸೇರಿದಂತೆ ಆಸುಪಾಸಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ ಮೋಡ ಕವಿದ ವಾತಾವರಣ ಇತ್ತು. ಆದರೆ, ತಾಲೂಕಿನ ಎಸ್.ಬಿದರೆ, ನಿಡಘಟ್ಟ, ಲಿಂಗದಹಳ್ಳಿ ಭಾಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರಿ ಮಳೆ ಬಂದಿತು. ಆದರೆ, ಸಮೀಪದಲ್ಲಿರುವ ಸಖರಾಯಪಟ್ಟಣದಲ್ಲಿ ಮಳೆ ಬರಲಿಲ್ಲ.
ಶೃಂಗೇರಿ ತಾಲೂಕಿನ ಕೆಲವೆಡೆ ಮಳೆ ಬಂದಿದೆ. ತರೀಕೆರೆ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಬಿಸಿನ ಝಳ ಮುಂದುವರೆದಿದ್ದು, ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇತ್ತಾದರೂ ಮಳೆ ಬರಲಿಲ್ಲ.