ನೀನ್ಯಾವ ಸೀಮೆ ತೋತಪ್ಪ ನಾಯಕ ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು(ಏ.23): ನೀನ್ಯಾವ ಸೀಮೆ ತೋತಪ್ಪ ನಾಯಕ ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಪರ್ಮಿಷನ್ ತೆಗೆದುಕೊಂಡು ಹೋಗಬೇಕಂದ್ರೆ ನೀನೇನು ಮಹಮದ್ ಆಲಿ ಜಿನ್ನಾನಾ ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಕೊರೋನಾ ಸೋಂಕಿತರ ಅನುಮತಿ ಪಡೆದು ಅವರ ಮನೆಗಳಿಗೆ ಹೋಗಬೇಕಾಗಿತ್ತು ಎಂದು ಜಮೀರ್ ಅಹಮದ್ ನೀಡಿದ ಹೇಳಿಕೆಗೆ ಸಚಿವರು ಬುಧವಾರ ಈ ರೀತಿ ತಿರುಗೇಟು ನೀಡಿದರು. ಜಿನ್ನಾ ಪಾಕಿಸ್ತಾನ ಹುಟ್ಸಿದ್ದು. ಪಾದರಾಯನಪುರ ಜಮೀರ್ ಫಾದರ್ ಪ್ರಾಪರ್ಟಿನಾ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!
ನೀನ್ಯಾವ ಸೀಮೆ ತೋತಪ್ಪ ನಾಯಕ ಎಂದು ಪ್ರಶ್ನಿಸಿದ ಸಿ.ಟಿ.ರವಿ, ನಾನು ಬಂದಾಗಲೇ ಜಮೀರ್ ವಿಧಾನಸಭೆಗೆ ಬಂದದ್ದು, ಜಮೀರ್‌ಗೆ ಒಂದು ಕಾನೂನು, ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ, 224 ಶಾಸಕರಲ್ಲಿ ನೀನೂ ಒಬ್ಬ. ಫಾದರ್ ಪ್ರಾಪರ್ಟಿ ಆದ್ರು ದೇಶದೊಳಗಿದ್ದಾಗ ಕಾನೂನಿಗೆ ಬದ್ಧರಾಗಿರಬೇಕು ಎಂದು ಹೇಳಿದರು.