Chitradurgaದಲ್ಲಿ ವರುಣನ ಆರ್ಭಟ, ರಾತ್ರಿ ಸುರಿದ ಮಳೆಗೆ ಜನ ಹೈರಾಣ

By Suvarna News  |  First Published Jun 6, 2022, 5:15 PM IST
  • ಚಿತ್ರದುರ್ಗ ಜಿಲ್ಲೆಯಾದ್ಯಂತ ತಡರಾತ್ರಿ‌ ವರಣುನ ಆರ್ಭಟ.
  • ಮಳೆರಾಯನ ಆಗಮನದಿಂದ ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು.
  • ಮಳೆಯ ಅಬ್ಬರಕ್ಕೆ‌ ಮನೆಗಳಿಗೆ ನುಗ್ಗಿದ ಬೀರು ಇಡೀ ರಾತ್ರಿ ಜಾಗರಣೆ ಮಾಡಿರೋ ಜನರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂ.7): ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ಚಿತ್ರದುರ್ಗ (chitradurga ) ಜಿಲ್ಲೆಯಾದ್ಯಂತ ಶುರುವಾದ ಮಳೆರಾಯನ (Rain) ಆರ್ಭಟ ಇಡೀ ರಾತ್ರಿಯೂ ಬಿಟ್ಟು ಬಿಡದೇ ಅಬ್ಬರಿಸಿರೋ ಹಿನ್ನೆಲೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಅದ್ರಲ್ಲಂತೂ ಜಿಲ್ಲೆಯ ಚಳ್ಳಕೆರೆ, ಹಿರಿಯೂರು ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅಲ್ಲಿನ ಜನರ ಗೋಳು ಕೇಳುವವರೇ ಯಾರು ಇಲ್ಲದಂತಾಗಿದೆ.

Latest Videos

undefined

ಚಳ್ಳಕೆರೆ ತಾಲ್ಲೂಕಿನಾದ್ಯಂತ ತಡರಾತ್ರಿ ಸುರಿದಿರೋ‌ ಮಳೆಗೆ ತಾಲ್ಲೂಕಿನ ದುರ್ಗಾವರ ಗ್ರಾಮದ ಬಳಿ ಇದ್ದ ಜಿಯೋ ಕಂಪನಿಯ ಟವರ್ ಕೂಟ ಗಾಳಿ ಸಮೇತ ಬಿರುಗಾಳಿ ಮಳೆಗೆ ನೆಲಕ್ಕುರುಳಿದೆ. ಪಕ್ಕದಲ್ಲೇ ಇದ್ದ ಹಲವು ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಮೇಲಾಗಿ, ಟವರ್ ಪಕ್ಕದಲ್ಲಿ ಇದ್ದ ಗೂಡಂಗಡಿ ಮೇಲೆ ಉರುಳಿ ಬಿದ್ದಿದ್ದು ತಡರಾತ್ರಿ ಆಗಿರೋದ್ರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

SRIRANGAPATNA JAMIA MASJID ROW; ದಶಕಗಳ ಹಿಂದಿನ ಪುಸ್ತಕದಲ್ಲಿ ಟಿಪ್ಪು ಕೆಡವಿರುವ ಉಲ್ಲೇಖ

ಇನ್ನೂ ಗೂಡಂಗಡಿಯ ಮೇಲೆ ಟವರ್ ಬಿದ್ದಿರೋ ಪರಿಣಾಮ ಸಂಪೂರ್ಣ ಜಖಂ ಆಗಿದ್ದು ಸಾವಿರಾರು ರೂ ಮೌಲ್ಯದ ಪೀಠೋಪಕರಣಗಳು ಹಾಗೂ ವಸ್ತುಗಳು ನಾಶವಾಗಿವೆ. ಇಷ್ಟೆಲ್ಲಾ ಘಟನೆಯ ಮಾಹಿತಿ  ತಿಳಿದ ಕೂಡಲೇ ಬೆಳಗ್ಗೆ ಚಳ್ಳಕೆರೆ ತಹಶಿಲ್ದಾರ್ ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಅಂತಾರೆ ಗ್ರಾಮಸ್ಥರು.

ಇಷ್ಟೇ ಅಲ್ಲದೇ ಹಿರಿಯೂರು ತಾಲ್ಲೂಕಿನ ಹಲವೆಡೆ ವರುಣನ ಅರ್ಭಟಕ್ಕೆ ಇಡೀ ರಾತ್ರಿ ಜನರು ನಿದ್ದೆಗೆಟ್ಟು ಜಾಗರಣೆ ಮಾಡಿದ್ದಾರೆ. ಯಾಕಪ್ಪ ಅಂದ್ರೆ ಹಿರಿಯೂರು ಪಟ್ಟಣದ ಸಿ.ಎಂ ಬಡಾವಣೆ, ದ್ವಾರಕಾ ಬಡಾವಣೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯ ನೀರು ಮನೆಗಳಿಗೆ ನುಗ್ಗಿರೋ ಪರಿಣಾಮ ಜನರು ಇಡೀ ರಾತ್ರಿ ನಿದ್ದೆಗೆಟ್ಟು ಕುಳಿತಿದ್ದಾರೆ. ಮಳೆಯ ಅವಾಂತರದಿಂದ ಇಷ್ಟೆಲ್ಲಾ ಅನಾಹುತ ಆಗ್ತಿದ್ರು ಅಧಿಕಾರಿಗಳು ಅತ್ತ ತಿರುಗಿ ನೋಡದೇ ನಿರ್ಲಕ್ಷ್ಯ ಮಾಡ್ತಿರೋದಕ್ಕೆ ಆಯಾ ಬಡಾವಣೆಯ ಜನರು ಅಧಿಕಾರಿಗಳು ಹಾಗೂ ಜನಪ್ರನಿಧಿಗಳ ವಿರುದ್ದ ಹಿಡಿಶಾಪ ಹಾಕ್ತಿದ್ದಾರೆ.

Udupi; ನೀರಿಗೆ ಬಿದ್ದ ಬ್ರಹ್ಮಾವರ ತಹಶೀಲ್ದಾರ್, ಕ್ಷಿಪ್ರ ಕಾರ್ಯಾಚರಣೆಯಿಂದ ರಕ್ಷಣೆ

ಇದರೊಟ್ಟಿಗೆ ಜಿಲ್ಲೆಯ ಹಲವೆಡೆ ವರುಣನ ಆಗಮನದಿಂದ ಬಹುತೇಕ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ಕೋಡಿ ಬಿದ್ದಿ ಹರಿಯುತ್ತಿರೋದಕ್ಕೆ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಹೊಸದುರ್ಗ ತಾಲ್ಲೂಕಿನ ಕಂಠಾಪುರ, ಬೆನಕಹಳ್ಳಿ, ಹಿರೇಹಳ್ಳ ಹೀಗೆ ಮುಂತಾದ ತಾಲ್ಲೂಕಿನ ಹಲವು ಹಳ್ಳಗಳು ಮಳೆಯ ಆರ್ಭಟಕ್ಕೆ ತುಂಬಿ ಹರಿಯುತ್ತಿರೋದಕ್ಕೆ ಮುಂಗಾರು ಬಿತ್ತನೆಗೂ ಸಹಾಯವಾಯ್ತು ಎಂದು ಸಂತಸ ಪಡ್ತಿದ್ದಾರೆ.

TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!

ಹೀಗೆ ಹಿರಿಯೂರು ತಾಲ್ಲೂಕಿನ ಗಾಂಧಿನಗರದ ಕೆರೆ ಕೂಡ ಕೋಡಿ ಬಿದ್ದ ಪರಿಣಾಮ ಅಪಾರ ಕಾತ್ರಿಕೇನಹಳ್ಳಿ ಬಳಿ ಈ ಭಾಗದ ರೈತರ ಜೀವನಾಡಿ,ಜಲಧಾರೆ ಆಗಿರೋ ವೇದಾವತಿ ನದಿ ಮೈ ದುಂಬಿ ಹರಿಯುತ್ತಿದೆ. ಒಂದ್ಕಡೆ ಮಳೆಯ ಆರ್ಭಟದಿಂದ ಕೆರೆ ಕಟ್ಟೆಗಳು ತುಂಬಿರೋದಕ್ಕೆ ರೈತರು ಖುಷಿ ಪಟ್ರೆ, ಮತ್ತೊಂದೆಡೆ ನಗರಗಳು ಹಾಗೂ ಹಳ್ಳಿಗಳಲ್ಲಿ ವಾಸವಿರೋ ಜನರು ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿ ಜನರ ಜೀವನ ಅಸ್ತವ್ಯಸ್ತ ಮಾಡಿದೆ.

click me!