Srirangapatna Jamia Masjid Row; ದಶಕಗಳ ಹಿಂದಿನ ಪುಸ್ತಕದಲ್ಲಿ ಟಿಪ್ಪು ಕೆಡವಿರುವ ಉಲ್ಲೇಖ

By Suvarna News  |  First Published Jun 6, 2022, 4:55 PM IST
  • ಭುಗಿಲೆದ್ದ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ.
  • ಮಂದಿರ VS ಮಸೀದಿ ಫೈಟ್‌ನಲ್ಲಿ ದಿನಕ್ಕೊಂದು ತಿರುವು.
  • ಮಂದಿರ ಕೆಡವಿ ವಿಗ್ರಹ ಎಸೆದಿದ್ದನಾ ಟಿಪ್ಪು.?
  • ಹಲವು ದಶಕಗಳ ಹಿಂದೆ ರಚಿಸಲ್ಪಟ್ಟ ಪುಸ್ತಕದಲ್ಲಿ ಉಲ್ಲೇಖ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಜೂ.6): ಶ್ರೀರಂಗಪಟ್ಟಣ (Srirangapatna ) ಜಾಮಿಯಾ ಮಸೀದಿ (Jamia Masjid ) ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮಸೀದಿ (mosque) ವಿಡಿಯೋ ಸರ್ವೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಹೋರಾಟ ಬೆನ್ನಲ್ಲೇ ಹಲವು ಸಾಕ್ಷ್ಯಾಧಾರಗಳು ಹೊರ ಬೀಳುತ್ತಿದೆ. ಇದೀಗ ಹಲವು ದಶಕಗಳ ಹಿಂದೆ ರಚನೆಯಾದ ಮೂಡಲ ಬಾಗಿಲು ಶ್ರೀ ಆಂಜನೇಯ ಸ್ವಾಮಿ (sri anjaneya swamy) ಸುಪ್ರಭಾತ ಪುಸ್ತಕದಲ್ಲಿ ದೇವಾಲಯದ ಚರಿತ್ರೆ ಕುರಿತು ಬರೆಯಲಾಗಿದೆ.

Tap to resize

Latest Videos

ಮಂದಿರ ಕೆಡವಿದ ಟಿಪ್ಪು ಮೂಲ ವಿಗ್ರಹ ಎಸೆದ ಬಗ್ಗೆ ಉಲ್ಲೇಖ:  ವಿದ್ವಾನ್ ಬಾಲಗಣಪತಿಭಟ್ಟರು ಬರೆದಿರುವ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಸುಪ್ರಭಾತ ಪುಸ್ತಕದಲ್ಲಿ ಹಲವು ವಿಚಾರಗಳನ್ನ ಬರೆಯಲಾಗಿದೆ. ಟಿಪ್ಪು ಕಾಲದಲ್ಲಿ (Tipu Sultan ) ಆಂಜನೇಯಸ್ವಾಮಿ ದೇವಾಲಯ (Anjaneya Mandir) ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎನ್ನಲಾಗಿದೆ. 

ಮಸೀದಿ ಕೆಡವಿದ ಬಳಿಕ ಮೂಲ ವಿಗ್ರಹವನ್ನ ವೆಲ್ಲೆಸ್ಲಿ ಬ್ರಿಡ್ಜ್‌ನ ಪೂರ್ವ ಭಾಗದಲ್ಲಿ ಹಾಕಲಾಗಿತ್ತು ಎಂದು ಹೇಳಿದ್ದಾರೆ. ಮಂದಿರ ಕೆಡವಿದ ಸಂಧರ್ಭದಲ್ಲಿ ಗರ್ಭಗುಡಿಯಲ್ಲಿದ್ದ ಏಳು ಕೊಪ್ಪರಿಕೆ ಹಣ, ಚಿನ್ನಾಭರಣ ದೋಚಲಾಯಿತು ಆ ಹಣದಿಂದಲೇ ಮಸೀದಿ ಕಟ್ಟಲಾಗಿದೆ ಅಂತಲೂ ಬರೆಯಲಾಗಿದೆ. ಮತ್ತೊಂದು ಪ್ರಮುಖ ಅಂಶವನ್ನ ಆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು ದೇವಾಲಯ ಕೆಡವಿದ ನಂತರ ಪರಮ ಹನುಮ ಭಕ್ತರು ಮತ್ತು ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈ ಕತ್ತರಿಸಲಾಯಿತು ಎಂದು ಬರೆದಿದ್ದಾರೆ.

UDUPI; ನೀರಿಗೆ ಬಿದ್ದ ಬ್ರಹ್ಮಾವರ ತಹಶೀಲ್ದಾರ್, ಕ್ಷಿಪ್ರ ಕಾರ್ಯಾಚರಣೆಯಿಂದ ರಕ್ಷಣೆ

ಹಿಂದೂಗಳ ಹೋರಾಟಕ್ಕೆ ಸಾಕ್ಷ್ಯವಾಗುತ್ತ ದಶಕಗಳ ಹಿಂದಿನ ಪುಸ್ತಕ: ಮಸೀದಿ ಜಾಗದಲ್ಲಿ ಹನುಮ ಮಂದಿರವಿತ್ತು ಅದು ಮರಳಿ ಹಿಂದೂಗಳಿಗೆ ವಾಪಾಸ್ ಸಿಗಬೇಕು. ಆ ಕಟ್ಟಡ ವಿಡಿಯೋ ಸರ್ವೆ ಆಗಬೇಕು. ಮಸೀದಿಯಲ್ಲಿ ನಡೆಯುತ್ತಿರುವ ಅಕ್ರಮ ಮದರಸ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಹೋರಾಟ ಆರಂಭಿಸಿವೆ. ಈಗಾಗಲೇ ಭಜರಂಗಸೇನೆ ಲೀಗಲ್ ನೋಟೀಸ್ ಜಾರಿ ಮಾಡಿದೆ. ಹಲವು ಸಂಘಟನೆಗಳು ದಾಖಲಾತಿ ಸಂಗ್ರಹಿಸಿ ಕಾನೂನು ಹೋರಾಟಕ್ಕೆ ಸಿದ್ದತೆ ನಡೆಸುತ್ತಿವೆ.

ಈ ನಡುವೆ ಮೂಡಲ ಬಾಗಿಲು ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ಪ್ರತಿಗಳು ಲಭ್ಯವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಯಾವ ರೀತಿ ಕಾನೂನು ಹೋರಾಟ ನಡೆಸಬಹುದು ಎಂಬ ಬಗ್ಗೆ ಹಿಂದೂ ಮುಖಂಡರು ಚಿಂತನೆ ನಡೆಸಿದ್ದಾರೆ. ಆದ್ರೆ ಪುಸ್ತಕದಲ್ಲಿ ಹಲವು ಕಾಲ್ಪನಿಕ ಎನಿಸುವ ವಿಚಾರಗಳನ್ನು ಬರೆಯಲಾಗಿದ್ದು ಐತಿಹಾಸಿಕ ದಾಖಲೆಗಳಲ್ಲದ ಕಾಲ್ಪನಿಕ ಎನಿಸುವ ದಾಖಲೆಗಳನ್ನ ಎಷ್ಟರಮಟ್ಟಿಗೆ ಪರಿಗಣಿಸಲಾಗುತ್ತದೆ ಎಂಬುದನ್ನ ಕಾದು ನೋಡಬೇಕು.

ಮಸೀದಿ ಹೋರಾಟ ನಿನ್ನೆ ಮೊನ್ನೆಯದಲ್ಲ, 20 ವರ್ಷಗಳ ಹಿಂದಿನದು: ಜಾಮಿಯಾ ಮಸೀದಿ ಹೋರಾಟ ನಿನ್ನೆ ಮೊನ್ನೆಯದು. ಇಷ್ಟು ದಿನಗಳು ಇಲ್ಲ ವಿವಾದವನ್ನ ಈಗ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡ್ತಿದ್ದಾರೆ ಅಂತ ಕೆಲವರು ಆರೋಪಿಸಿದ ಬೆನ್ನಲ್ಲೇ ಮಸೀದಿ ಹೋರಾಟ 20 ವರ್ಷಗಳ ಹಿಂದಯೇ ಆರಂಭವಾಗಿತ್ತು ಎಂಬ ವಿಚಾರ ಬಯಲಾಗಿದೆ.

TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!

2004 ಜುಲೈ 1ರಂದೇ ಮೈಸೂರಿನ ವಕೀಲ ಕೇಶವಮೂರ್ತಿ ಮೂಲಕ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ, ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ಲೀಗಲ್ ನೋಟೀಸ್ ನೀಡಲಾಗಿದೆ. ಅಂದಿನ ಭಜರಂಗದಳ ಜಿಲ್ಲಾ ಸಂಯೋಜಕರಾಗಿದ್ದ ಗಿರೀಶ್ ಹಾಗೂ ಭಾಸ್ಕರ್ ಎಂಬುವರು ಮೊದಲ ಬಾರಿಗೆ ಕಾನೂನು ಹೋರಾಟ ಆರಂಭಿಸಿದ್ದರು. 

20 ವರ್ಷದ ಹಿಂದೆ ಮಸೀದಿಯಲ್ಲಿ ಹಿಂದೂ ದೇಗುಲದ ಕುರುಹು ಮುಚ್ಚಲು ಪ್ರಯತ್ನ ನಡೆದಾಗ ಕಾನೂನು ಸಮರ ಆರಂಭವಾಗಿತ್ತು ಅಂತ ಗಿರೀಶ್ ಹೇಳಿದ್ರು. ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿ ಕುರುಹು ಮುಚ್ಚುವ ಪ್ರಯತ್ನ ನಡೆದಿತ್ತು. ಅಂದು ನಾವು ಹೋರಾಟ ನಡೆಸಿ ತಡೆಹಿಡಿದಿದ್ದೆವು. ವಕೀಲರಾದ ಕೇಶವಮೂರ್ತಿ ಮೂಲಕ ಲೀಗಲ್ ನೋಟೀಸ್ ನೀಡಲಾಗಿತ್ತು. ಅಕ್ರಮ ಮದರಸ, ದೇವಾಲಯ ಕುರುಹು ನಾಶ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಮಸೀದಿಯೊಳಗಿನ ಮದರಸ ನಿಲ್ಲಿಸುವುದಾಗಿ ಅಧಿಕಾರಿಗಳಯ ಹೇಳಿದ್ರು. ಆದರೆ ಆಗ ಅಧಿಕಾರದಲ್ಲಿದ್ದ ಧರ್ಮಸಿಂಗ್ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ಅಂದು ಹಿಂದೂ ಸಂಘಟನೆ ಸದೃಢವಾಗಿಲ್ಲದ ಕಾರಣಕ್ಕೆ ಕಾನೂನು ಹೋರಾಟ ನಿಂತಿತ್ತು. ಈಗ ಮತ್ತೆ ಆರಂಭಗೊಂಡಿದೆ ನನ್ನ ಬೆಂಬಲವೂ ಈ ಹೋರಾಟಕ್ಕೆ ಇದೆ ಎಂದರು.

click me!