ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು. ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಬಾರಿ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ ಸುರಿದು ಅಪಾರ ನಷ್ಟವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆಗೆ ಮೂವರು ಮೃತಪಟ್ಟಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು .
ಚಿಕ್ಕಮಗಳೂರು ಆ.(10):ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿವೃಷ್ಟಿಯಿಂದ ಜೂನ್ನಿಂದ ಆಗಸ್ಟ್ವರೆಗೆ ಕೋಟ್ಯಾಂತರ ನಷ್ಟ ಸಂಭವಿಸಿದ್ದು ಮೂವರು ಬಲಿ ಆಗಿದ್ದಾರೆ. ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸರಣಿ ಅನಾಹುತಗಳು ಸೃಷ್ಟಿಯಾಗುತ್ತಿದೆ.
Chikkamagaluru; ಭಾರೀ ಮಳೆಗೆ ನೆಲಕ್ಕೆ ಉದುರುತ್ತಿರುವ ಕಾಫಿ ಬೀಜ
ವಾಡಿಕೆಕ್ಕಿಂತ ಶೇಕಾಡ 50ರಷ್ಷು ಮಳೆ ಜಾಸ್ತ ಆಗಿದ್ದು ಜನರು ತತ್ತರಿಸಿಹೋಗುವಂತೆ ಮಾಡಿದೆ. ಕಳಸ ತಾಲೂಕು ಹೊರನಾಡಿ(Horanadu)ನಲ್ಲಿ ವಿಜಯನಗರ(Vijayanagar) ಜಿಲ್ಲೆಯ ಹರಪ್ಪನಹಳ್ಳಿಯ 18 ವರ್ಷದ ಪ್ರಿಯಾಂಕ ಜಮೀನಿನಲ್ಲಿ ಕೆಲಸ ಮಾಡುವಾಗ ಮರಬಿದ್ದು ಸಾವನ್ನಪ್ಪಿದ್ದರೆ, ಹೊಸಪೇಟೆ(Hospete)ಯ 5 ವರ್ಷದ ಸುಪ್ರಿತ ಶಾಲೆಯಿಂದ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದು,ಎನ್ ಆರ್ ಪುರ(N.R.Pura)ದ ಸಾತ್ಕೋಳ(Satkola) ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ಕೊಚ್ಚಿ ಹೋದ ಪರಿಣಾಮ ಚಾಲಕ ಪ್ರಸನ್ನ (51) ಎಂಬುವವರು ಮೃತ ಪಟ್ಟಿದ್ದರು.ಈ ಮೂಲಕ ಮಳೆಯಿಂದ ಮೂವರು ಸಾವಪ್ಪಿದಂತಾಗಿದೆ.ಇಬ್ಬರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಳೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಕೋಟ್ಯಂತರ ನಷ್ಟ ಉಂಟಾಗಿದೆ. ಮಳೆಗೆ ಮೂರು ಜೀವಗಳು ಜೀವ ತೆತ್ತಿದ್ದರೆ, ಆರು ಜಾನುವಾರುಗಳು ಅಸುನೀಗಿದ್ದು, ರೈತರಿಗೆ 1.80 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.595 ಮನೆಗಳಿಗೆ ಧಕ್ಕೆಯಾಗಿದ್ದು 164 ಕೋಟಿ ರೂ. ನಷ್ಟ ಸಂಭವಿಸಿದೆ. 1494 ವಿದ್ಯುತ್ ಕಂಬಗಳು ಧರೆಗುರುಳಿದ್ದು ತೋಟಗಾರಿಕೆ ಮತ್ತು ಕೃಷಿ ಜಮೀನು ಸೇರಿದಂತೆ 3219.2 ಹೆಕ್ಟೇರ್ನಲ್ಲಿ ಬೆಳೆಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಒಟ್ಟು 1615 ಕಿ.ಮೀ. ರಸ್ತೆಗೆ ಹಾನಿಯಾಗಿ 129.24 ಕೋಟಿ ರೂ. ಹಾನಿಯಾಗಿದೆ.ಶಿಕ್ಷಣ ಇಲಾಖೆಯ 595 ಶಾಲೆಗಳು ಕಟ್ಟಡಗಳಿಗೆ ಹಾನಿಯಾಗುವ ಮೂಲಕ 21.85 ಕೋಟಿ ನಷ್ಟ ಉಂಟಾಗಿದ್ದರೆ 195 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿ 3.80 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Chikkamagaluru Rains; ಸರ್ಕಾರದ ನಡೆಯಿಂದ ಸಂತ್ರಸ್ಥರು ಬದುಕು ಬೀದಿಪಾಲು
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಶಾಲೆಗಳಂತೆ 100 ಶಾಲೆಗಳ ದುರಸ್ಥಿಗೆ ಸರ್ಕಾರ ಹಣ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ಮಳೆಯಿಂದ ಹಾನಿಯಾಗಿರುವ ಮನೆಗಳಲ್ಲಿ 403ಕ್ಕೆ ಪರಿಹಾರ ನೀಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಾರ್ಮಿಕರು ಕೂಲಿಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.ಜುಲೈ ಎರಡನೇ ವಾರ ಮತ್ತು ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿದೆ. 8 ದಿನಗಳಿಂದ ಚಿಕ್ಕಮಗಳೂರು ಮತ್ತು ಕಡೂರು ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.ಇದೇ ರೀತಿ ಮಳೆ ಅಬ್ಬರ ಮುಂದುವರೆದರೆ ಜನಜೀವನ ತೀವ್ರ ಅಸ್ತವ್ಯಸ್ತಗೊಳ್ಳಲಿದೆ.