ಸರ್ವೆ ಮಾಡಿ ಸುಮ್ಮನಾದ‌ BBMP, ಬೆಂಗಳೂರಲ್ಲಿ ಶುರುವಾಯ್ತು ಶಿಥಿಲಾವಸ್ಥೆ ಕಟ್ಟಡದ ಟೆನ್ಷನ್

By Suvarna News  |  First Published Aug 9, 2022, 11:14 PM IST

ಮುಂದಿನ ತಿಂಗಳು ಭಾರೀ ಮಳೆ  ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಬೆಂಗಳೂರಲ್ಲಿ ಶಿಥಿಲಾವಸ್ಥೆ ಕಟ್ಟಡದ ಟೆಂನ್ಷನ್ ಬಿಬಿಎಂಪಿ ಅಧಿಕಾರಿಗಳಿಗೆ ಶುರುವಾಗಿದೆ. 


ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
 

ಬೆಂಗಳೂರು (ಆಗಸ್ಟ್ 09): ಬೆಂಗಳೂರಿನಲ್ಲಿ ಮಳೆಗಾಲ ಬಂತಂದ್ರೆ ಸಾಕು ಬಿಬಿಎಂಪಿಗೆ ಎಲ್ಲಿಲ್ಲಿದ ಟೆನ್ಶನ್ ಶುರುವಾಗುತ್ತೆ.ಕಳೆದ ವರುಷದ ಮಳೆಗಾಲ ಸಮಯದಲ್ಲಿ ಒಂದೊಂದಾಗಿ ಶಿಥಿಲಾವಸ್ಥೆ ಕಟ್ಟಡ ಬೀಳಲು ಆರಂಭವಾಯಿತು. ಇವುಗಳನ್ನು ತೆರೆವುಗೊಳಿಸಲು ಬಿಬಿಎಂಪಿ ಸರ್ವೆ ಕೂಡ ಮಾಡಿತು. ಆದರೆ ಕಟ್ಟಡದ ಮಾಲಿಕರಿಗೆ ನೋಟೀಸ್ ನೀಡಿತಾದ್ರೂ ಶಿಥಿಲಾವಸ್ಥೆ ಕಟ್ಟಡ ಬೀಳಿಸಲೇ ಇಲ್ಲ. 

Latest Videos

undefined

ಇದು ಬೆಂಗಳೂರಿಗರ ಮತ್ತಷ್ಟು ಆತಂಕಕ್ಕೆ‌ ಕಾರಣವಾಗಿದೆ. ಹೌದು, ಬೆಂಗಳೂರಲ್ಲಿ ಶಿಥಿಲಾವಸ್ಥೆ ಕಟ್ಟಡದ ಟೆಂನ್ಷನ್ ಬಿಬಿಎಂಪಿ ಅಧಿಕಾರಿಗಳಿಗೆ ಶುರುವಾಗಿದೆ.ಯಾಕೆಂದರೆ ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸತತ ಮಳೆಯಾಗುತ್ತಿದೆ. ಮುಂದಿನ ತಿಂಗಳು ವರುಣ ಬೊಬ್ಬರಿಯುವ ಎಲ್ಲ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಫ್ಲೆಕ್ಸ್‌, ಬ್ಯಾನರ್‌ ಹಾಕಿದ್ರೆ ಕ್ರಿಮಿನಲ್‌ ಕೇಸ್‌: BBMP Commissioner ಖಡಕ್ ಸೂಚನೆ

ಇದರಿಂದ ಬಿಬಿಎಂಪಿಗೆ ಮತ್ತೆ ಕಟ್ಟಡದ ಟೆಂನ್ಷನ್ ಶುರುವಾಗಿದೆ. ಕಳೆದ ವರ್ಷ ಶಿಥಿಲಾವಸ್ಥೆ ಕಟ್ಟಡಗಳು ಬಿದ್ದು ನರಕ ದರ್ಶನ ಮಾಡಿಸಿತ್ತು. ದಿನಕ್ಕೊಂದು ಕಟ್ಟಡ ಉರುಳಿ ಆತಂಕ ಸೃಷ್ಟಿಯಾಗಿತ್ತು. ಈ ಬಾರಿಯೂ ಮತ್ತದೇ ಆತಂಕ ಎದುರಾಗಿದೆ. ಆ ವೇಳೆ ಶಿಥಿಲಾವಸ್ಥೆ ಕಟ್ಟಡ ತೆರವಿನ ಬಗ್ಗೆ ಬಿಬಿಎಂಪಿಯೂ ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಡೇಂಜರ್ ಕಟ್ಟಡಗಳ ಸರ್ವೇ ನಡೆದಿದ್ದರೂ ಅವುಗಳನ್ನು ತೆರವು ಮಾಡದ ಪಾಲಿಕೆ ನಿರ್ಲಕ್ಷ್ಯ ವಹಿಸಿತ್ತು. ಇದರ ಪರಿಣಾಮ ಈ ಬಾರಿಯ ಮಳೆಗಾಲಕ್ಕೂ ಮೊದಲೇ ಕೆಲವು ಕಡೆ ನೆರಕ್ಕುರುಳುತ್ತಿವೆ. ಈಗಾಗಲೇ ಕಾಟನ್ ಪೇಟೆಯಲ್ಲಿ ಒಂದು, ಸಂಪಂಗಿರಾಮನಗರದಲ್ಲಿ ಮನೆ ಗೋಡೆ ಕುಸಿತಗೊಂಡಿದೆ. ಇನ್ನಷ್ಟು ಶಿಥಿಲಾವಸ್ಥೆ ಕಟ್ಟಡಗಳು ಬೀಳುವ ಸಾಧ್ಯತೆಯಿದೆ. ಹಾಗಾದ್ರೆ ಸರ್ವೆಯಲ್ಲಿ ಪತ್ತೆಯಾಗಿರುವ ಶಿಥಿಲ ಕಟ್ಟಡಗಳ ವಿವರ ನೋಡೊದಾದ್ರೆ.

ಸರ್ವೆಯಲ್ಲಿ ಪತ್ತೆಯಾಗಿರುವ ಶಿಥಿಲ ಕಟ್ಟಡಗಳ ವಿವರ
ವಲಯ - 2018ರ ಸರ್ವೆ -ಹೊಸ ಸರ್ವೆ
ದಕ್ಷಿಣ ವಲಯ -33-103
ಪಶ್ಚಿಮ ವಲಯ -34-95
ಪೂರ್ವ ವಲಯ -46-67
ಮಹದೇವಪುರ -3-24
ರಾಜ ರಾಜೇಶ್ವರಿ ನಗರ- 1-11
ಬೊಮ್ಮನಹಳ್ಳಿ- 0-9
ಯಲಹಂಕ    -60-84
ದಾಸರಹಳ್ಳಿ - 8-4
ಒಟ್ಟು -ಚ185ಚ- 404
2018ರಲ್ಲಿ ಒಂದು ಬಾರಿ, ಕಳೆದ ವರ್ಷ ಮತ್ತೊಂದು ಬಾರಿ ಬಿಬಿಎಂಪಿ ಬೆಂಗಳೂರಿನಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸರ್ವೆ ಮಾಡಿಸಿತ್ತು. ಆದರೆ ಶಿಥಿಲಾವಸ್ಥೆ ಕಟ್ಟಡಗಳ ಮಾಲಿಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗಿತ್ತು. ಬಿಬಿಎಂಪಿ ಅಧಿಕಾರಿಗಳ ಶಿಥಿಲ ಕಟ್ಟಡ ತೆರವಿಗೆ ವಿಳಂಬ ಧೋರಣೆಯಿಂದ ಯಮಸ್ವರೂಪಿ ಶಿಥಿಲ ಕಟ್ಟಡಗಳು ಬೆಂಗಳೂರಿಗೆ ಆಪತ್ತು, ಆತಂಕ ತಂದಿಟ್ಟಿದೆ. ಅಪಾಯ ಅಂಚಿನಲ್ಲಿರುವ ಕಟ್ಟಡಗಳ ಪಟ್ಟಿ ಸಿದ್ದಪಡಿಸಿ ಬಿಬಿಎಂಪಿ ಸೈಲೆಂಟ್ ಆಗಿರೋದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ಆಲ್ಲದೆ ಕಳೆದೊಂದು ವಾರದಿಂದ ರಾಜಧಾನಿಯಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಶಿಥಿಲ ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದೆ. ಬಹುತೇಕ ಕಟ್ಟಡಗಳನ್ನ ಗುರುತಿಸಿ ನೋಟೀಸ್ ನೀಡಿ ಸುಮ್ಮನೆ ಆಗಿರೋ ಅಧಿಕಾರಿಗಳು ಈಗಲಾದ್ರೂ ಎಚ್ಚೆತ್ತು ಕ್ರಮವಹಿಸಬೇಕಿದೆ. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಬಿಬಿಎಂಪಿ ಹೊಣೆಯಾಗಬೇಕಾಗುತ್ತದೆ.

click me!