ಅಬ್ಬರಿಸಿ ಬೊಬ್ಬಿರಿಯುತ್ತಿರೋ ಮಹಾ ಮಳೆಗೆ ಬೆಳಗಾವಿ ಜನತೆ ತತ್ತರ

By Web DeskFirst Published Aug 4, 2019, 10:22 PM IST
Highlights

ಎತ್ತ ನೋಡಿದ್ರೂ ನೀರು.. ನೀರು.. ನೀರು.. ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರೋ ಕುಂಭದ್ರೋಣ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿ ಅಕ್ಷರಶಃ ನಲುಗಿ ಹೋಗಿದೆ.. ಜನ ಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದಿಂದ ರೈತರ ಜಮೀನು ಸಂಪೂರ್ಣ ಜಲಾವೃತವಾಗಿವೆ.

ಬೆಳಗಾವಿ, [ಆ.04]: ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಮಹಾಮಳೆ ಆರ್ಭಟದಿಂದ ಗಡಿ ಜಿಲ್ಲೆ ಬೆಳಗಾವಿ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೃಷ್ಣಾ ನದಿ ತೀರದ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ರೆ. ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿದೆ.. 

ಬೆಳಗಾವಿ, ಚಿಕ್ಕೋಡಿಯ ಹಲವು ಗ್ರಾಮಗಳು ಜಲಾವೃತವಾಗಿದ್ದು, NDRF ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ನೆರೆ ಸಂತ್ರಸ್ತರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಭಾರೀ ಮಳೆ : ಶಾಲಾ - ಕಾಲೇಜುಗಳಿಗೆ ರಜೆ

ಚಿಕ್ಕೋಡಿಯಲ್ಲಿ ಪ್ರವಾಹ ಹೆಚ್ಚಾಗ್ತಿದ್ದಂತೆ, ಮುಂಜಾಗ್ರತಾ ಕ್ರಮ ಕೈಗೊಂಡಿರುವುದರ ಬಗ್ಗೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಅಪಾಯದಂಚಿನಲ್ಲಿರುವ ಗ್ರಾಮದ ಜನರನ್ನ ಬೇರೆಡೆ ಸ್ಥಳಾಂತರ ಮಾಡುವ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದರು.

ಬೆಳಗಾವಿ: ಮಳೆ ಏಟಿಗೆ ಭೂಕುಸಿತ, ಕರ್ನಾಟಕ-ಗೋವಾ ರೈಲು ಸಂಚಾರಕ್ಕೆ ಅಡಚಣೆ

ಒಟ್ಟಾರೆ ಮಹಾ ಮಳೆಯ ಆರ್ಭಟದಿಂದ ಪ್ರವಾಹದ ಹೊಡೆತಕ್ಕೆ ಬೆಳಗಾವಿ ಜಿಲ್ಲೆಯ ಜನ ನಲುಗಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನದಿ ಪಾತ್ರದ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗ್ತಿದೆ. ಅಲ್ಲದೇ ನೆರೆ ಸಂತ್ರಸ್ತರಿಗಾಗಿ ಹೆಚ್ಚಿನ ಗಂಜಿ ಕೇಂದ್ರ ತೆರೆಯುವ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

click me!