ಮಂಗಳೂರು : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ

Published : Aug 04, 2019, 08:00 PM ISTUpdated : Aug 04, 2019, 08:13 PM IST
ಮಂಗಳೂರು : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕ

ಸಾರಾಂಶ

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಜಿಗಿದಿದ್ದಾರೆ ಎನ್ನಲಾದ ಸೇತುವೆಯಿಂದಲೇ ಭಾನುವಾರ ಯುವಕನೊಬ್ಬ ನದಿಗೆ ಹಾರಿದ್ದಾನೆ.

ಮಂಗಳೂರು[ಆ. 04]  ನೇತ್ರಾವತಿ ಸೇತುವೆಯಿಂದ ಯುವಕನೊಬ್ಬ ಭಾನುವಾರ ನದಿಗೆ ಹಾರಿದ್ದಾನೆ. ಮಂಗಳೂರಿನಿಂದ ಉಳ್ಳಾಲ ಬಳಿ ಹೋಗುವಾಗ ಸಿಗುವ ಸೇತುವೆಯಿಂದ ಯುವಕ ಜಂಪ್ ಮಾಡಿದ್ದು ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಚಿಕ್ಕಮಗಳೂರಿನ ಗಿರೀಶ್ [32] ನದಿಯಿಂದ ಜಿಗಿದಿದ್ದು ರಕ್ಷಣೆ ಮಾಡಲಾಗಿದೆ.  ಮಂಗಳೂರಿನ ಊರ್ವ ಸ್ಟೋರ್ ನಲ್ಲಿ ಯುವಕ ವಾಸವಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಯುವಕ ಚೇತರಿಸಿಕೊಳ್ಳುತ್ತಿದ್ದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಇವರ ಕಿರುಕುಳದಿಂದಲೇ ಕಾಫಿ ಡೇ ಕಿಂಗ್ ಸಿದ್ಧಾರ್ಥ ಆತ್ಮಹತ್ಯೆ’

ಜೆಪ್ಪು ಬಳಿಯಿರುವ ನೇತ್ರಾವತಿ ಸೇತುವೆಯಿಂದ ಯುವಕ ಕೆಳಕ್ಕೆ ಹಾರಿದ್ದಾನೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ