ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದೆ. ಇದುವರೆಗೆ ದಿನಕ್ಕೊಂದೆರಡು ಬಾರಿ ಸುರಿಯುತಿದ್ದ ಮಳೆ ಬುಧವಾರ ದಿನವಿಡೀ ದಾರಾಕಾರವಾಗಿ ಸುರಿದಿದೆ. ಗಾಳಿಯ ಜೊತೆಗೆ ಮಿಂಚು ಗುಡುಗಿನ ಅರ್ಭಟವೂ ಜೋರಾಗಿತ್ತು.
ಉಡುಪಿ(ಜೂ.18): ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದೆ. ಇದುವರೆಗೆ ದಿನಕ್ಕೊಂದೆರಡು ಬಾರಿ ಸುರಿಯುತಿದ್ದ ಮಳೆ ಬುಧವಾರ ದಿನವಿಡೀ ದಾರಾಕಾರವಾಗಿ ಸುರಿದಿದೆ. ಗಾಳಿಯ ಜೊತೆಗೆ ಮಿಂಚು ಗುಡುಗಿನ ಅರ್ಭಟವೂ ಜೋರಾಗಿತ್ತು.
ಜಿಲ್ಲೆಯ ಬಹುತೇಕ ನದಿಗಳು ಈ ಒಂದು ವಾರದ ಮಳೆಯಿಂದ ತುಂಬಿವೆ, ಕೆರೆ ಬಾವಿಗಳಲ್ಲಿ ನೀುರು ಹೆಚ್ಚಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ರೈತರು ಭರದಿಂದ ಕೃಷಿ ಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
undefined
ಕುವೈತ್, ಯುಎಇ, ಮಸ್ಕತ್‌ನಿಂದ 422 ಮಂದಿ ಮಂಗಳೂರಿಗೆ
ಹವಮಾನ ಇಲಾಖೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಒಳ್ಳೆಯ ಮಳೆಯಾಗುವ ಮುನ್ಸೂಚನೆ ನೀಡಿದೆ, ಜೊತೆಗೆ ಮುಂಜಾಗ್ರತೆ ವಹಿಸುವಂತೆ ಹಳದಿ ಅಲರ್ಟ್ ಕೂಡ ಘೋಷಿಸಿದೆ. ಮಂಗಳವಾರ ರಾತ್ರಿ ಸುರಿದ ಗಾಳಿಮಳೆಗೆ ಕಾಪು ತಾಲೂಕಿನ ಪಡು ಗ್ರಾಮದಲ್ಲಿ 3 ಮನೆಗಳ ಹೆಂಚುಗಳು ಹಾರಿ ಹೋಗಿವೆ. ಇಲ್ಲಿನ ಭಾಸ್ರ್ಕ ಅವರ ಮನೆಗೆ 7,000 ರು., ಲಿಲತ ಅವರ ಮನೆಗೆ 7,000 ಮತ್ತು ಬೇಬಿ ಮಡಿವಾಳ್ತಿ ಅವರ ಮನೆಗೆ 5,000 ರು. ನಷ್ಟವಾಗಿದೆ.
ಅದೇ ರೀತಿ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ವಿಶ್ವನಾಥ ಕರಿಯ ಪೂಜಾರಿ ಅವರ ಮನೆಗೆ ಗಾಳಿಮಳೆಯಿಂದ ಭಾಗಶಃ ಹಾನಿ 10,000 ರು. ನಷ್ಟವಾಗಿದೆ. ಜಿಲ್ಲೆಯಲ್ಲಿ ಬುಧವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ 113.67ಮಿ.ಮೀ ಮಳೆ ದಾಖಲಾಗಿದೆ. ಅದರಲ್ಲಿ ಉಡುಪಿ ತಾಲೂಕಿನಲ್ಲಿ 121 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 120.00 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 100 ಮಿ.ಮೀ. ಮಳೆಯಾಗಿದೆ.