ಧಾರವಾಡ: ಮತ್ತೆ 8 ಕೊರೋನಾ ಕೇಸ್‌ ಪತ್ತೆ

Kannadaprabha News   | Asianet News
Published : Jun 18, 2020, 07:32 AM IST
ಧಾರವಾಡ: ಮತ್ತೆ 8 ಕೊರೋನಾ ಕೇಸ್‌ ಪತ್ತೆ

ಸಾರಾಂಶ

ಜೂ. 11ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕು ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಒಬ್ಬರಿಗೆ ಹಾಗೂ ಜೂ. 14ರಂದು ಧಾರವಾಡ ಕಟ್ಟಿಚಾಳನಲ್ಲಿ ದೃಢಪಟ್ಟ 30 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದ 7 ಜನರಿಗೆ ಬುಧವಾರ ಸೋಂಕು ದೃಢ

ಧಾರವಾಡ(ಜೂ.18): ಜಿಲ್ಲೆ​ಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಹರ​ಡು​ತ್ತಿ​ದ್ದು, ಬುಧವಾರ ಮತ್ತೆ 8 ಪ್ರಕರಣಗಳು ಪತ್ತೆಯಾಗಿವೆ.

ಜೂ. 11ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕು ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಒಬ್ಬರಿಗೆ ಹಾಗೂ ಜೂ. 14ರಂದು ಧಾರವಾಡ ಕಟ್ಟಿಚಾಳನಲ್ಲಿ ದೃಢಪಟ್ಟ 30 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದ 7 ಜನರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಕ್ಸಕ್‌, ಕೊರೋನಾ ರೋಗಿ ಡಿಸ್ಚಾರ್ಜ್‌

ಮೊರಬ ಗ್ರಾಮದ ವ್ಯಕ್ತಿ ಸಂಪರ್ಕ ಹೊಂದಿದ್ದ 55 ವರ್ಷದ ಪುರುಷ, ಧಾರವಾಡ ಕಟ್ಟಿಚಾಳ ಸಂಪರ್ಕ ಹೊಂದಿದ್ದ 59 ವರ್ಷದ ಪುರುಷ, 5 ವರ್ಷದ ಬಾಲಕಿ, 30 ವರ್ಷದ ಮಹಿಳೆ, 10 ವರ್ಷದ ಬಾಲಕಿ, 4 ವರ್ಷದ ಬಾಲಕ, 34 ವರ್ಷದ ಪುರುಷ ಹಾಗೂ 33 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 171ಕ್ಕೆ ಏರಿಕೆಯಾಗಿದ್ದು, 51 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!