Bengaluru: ಭಾರೀ ಮಳೆಗೆ ಇಡೀ ನೆಲಮಂಗಲ ಜಲಾವೃತ: ಪ್ರವಾಹದ ಪರಿಸ್ಥಿತಿ ನಿರ್ಮಾಣ

By Govindaraj S  |  First Published May 20, 2022, 3:15 AM IST

ಪ್ರಕೃತಿ ವಿಸ್ಮಯವೋ ಅಥವಾ ಮನುಷ್ಯ ಮಾಡಿರೋ ತಪ್ಪೋ ಗೊತ್ತಿಲ್ಲ. ಬೇಸಿಗೆಯಲ್ಲೂ ರಾಜ್ಯಾದ್ಯಂತ ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಗುಡುಗು, ಮಿಂಚು, ಸಿಡಿಲು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಎಲ್ಲಾ ಕೆರೆಗಳು ಕೂಡ ಕೋಡಿ ಹೋಗುತ್ತಿವೆ.


ವರದಿ: ಮಂಜುನಾಥ, ‌ಹೆಬ್ಬಗೋಡಿ, ಬೆಂಗಳೂರು

ನೆಲಮಂಗಲ (ಮೇ.20): ಪ್ರಕೃತಿ ವಿಸ್ಮಯವೋ ಅಥವಾ ಮನುಷ್ಯ ಮಾಡಿರೋ ತಪ್ಪೋ ಗೊತ್ತಿಲ್ಲ. ಬೇಸಿಗೆಯಲ್ಲೂ ರಾಜ್ಯಾದ್ಯಂತ (Karnataka) ಎಲ್ಲೆಡೆ ಭಾರಿ ಮಳೆಯಾಗುತ್ತಿದೆ (Rain). ಗುಡುಗು, ಮಿಂಚು, ಸಿಡಿಲು ಸಮೇತ ಧಾರಾಕಾರ ಮಳೆಯಾಗುತ್ತಿದೆ. ಎಲ್ಲಾ ಕೆರೆಗಳು ಕೂಡ ಕೋಡಿ ಹೋಗುತ್ತಿವೆ. ಇದೀಗ ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ನೆಲಮಂಗಲ (Nelamangala) ತಾಲ್ಲೂಕಿನಾದ್ಯಂತ ಭರ್ಜರಿ ಮಳೆಯಾಗುತ್ತಿದೆ. ಹಲವು ವರ್ಷಗಳಿಂದಲೂ ತುಂಬಿಲ್ಲದ ಕೆರೆಗಳಲ್ಲೂ (Lakes) ಕೂಡ ತುಂಬಿ ಕೋಡಿ ಹೋಗುತ್ತಿವೆ. ನೆಲಮಂಗಲ ತಾಲೂಕಿನ ಹಲವು ಭಾಗಗಳಲ್ಲಿ ಮನೆಗಳಿಗೆ, ಶಾಲೆಗಳಿಗೆ, ಅಂಗಡಿಗಳಿಗೆ, ಪೆಟ್ರೋಲ್ ಬಂಕ್‌ಗಳಿಗೆ  ಮಳೆ ನೀರು ನುಗ್ಗಿ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ಮೀನುಗಳು ಹರಿದು ಹೋಗುತ್ತಿವೆ. ತೋಟಗಳಿಗೆ ನೀರು ನುಗ್ಗಿ ಲಕ್ಷಾಂತರ ಹಣ ನಷ್ಟವಾಗಿದೆ. ಇದೊಂದು ರೀತಿಯಾಗಿ ಪ್ರವಾಹದ ಪರಿಸ್ಥಿತಿಯೇ ನಿರ್ಮಾಣವಾಗಿದೆ.

Tap to resize

Latest Videos

ಎತ್ತ ನೋಡಿದರೂ ತುಂಬಿ ಹರಿಯುತ್ತಿರುವ ನೀರು. ಇದು ನೆಲಮಂಗಲ ತಾಲ್ಲೂಕಿನ ಹಲವು ಭಾಗಗಳಲ್ಲಿ ಸುರಿದಂತಹ ಭಾರಿ ಮಳೆಯ ದೃಶ್ಯಗಳು. ಅದು ಜಲಪಾತದಂತೆ ಭೋರ್ಗರೆದು ಹರಿಯುತ್ತಿರುವ ನೀರು. ಆ ನೀರಿನಲ್ಲಿ ಲಕ್ಷಾಂತರ ಮೀನುಗಳು ಹರಿದು ಹೋಗುತ್ತಿರುವುದನ್ನ ನೋಡಿ ಸಂತಸ ಪಟ್ಟ ಸ್ಥಳೀಯರು. ಅದರಂತೆ ನೆಲಮಂಗಲ ತಾಲೂಕಿನ ನಿಂಬೇಹಳ್ಳಿ ಗ್ರಾಮದಲ್ಲಿ ಪಾಲಿ ಹೌಸ್‌ಗೆ ಮಳೆಯ ನೀರು ನುಗ್ಗಿ, ಸಂಪೂರ್ಣವಾಗಿ ಜಲಾವೃತವಾಗಿದ್ದು, ತೋಟಗಳಲ್ಲಿ ಮಳೆ ನೀರು ನುಗ್ಗಿ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣ ನಾಶವಾಗಿ ರೈತರಿಗೆ ಲಕ್ಷಾಂತ ರೂ ಗಳ ನಷ್ಟವಾಗಿ ಕಂಗಾಲಾಗಿದ್ದಾರೆ. ಹಾಗೆಯೇ ತ್ಯಾಮಗೊಂಡ್ಲು ಹೋಬಳಿ ಲಕ್ಕಪ್ಪನಹಳ್ಳಿಯಲ್ಲೂ ಭಾರಿ ಮಳೆಯಾಗಿದೆ.

Bengaluru Rains: ಶತಮಾನದ ದಾಖಲೆ ಮಳೆಗೆ ಬೆಂಗ್ಳೂರಲ್ಲಿ ತತ್ತರ

ಪುಟ್ಟ ಮಕ್ಕಳು ದಿನ ನಿತ್ಯ ಶಾಲೆಗೆ ಸಂಚರಿಸ್ತಾರೆ. ನೆಲಮಂಗಲ ತಾಲೂಕಿನ ಬಿದಲೂರು ಸರ್ಕಾರಿ ಶಾಲೆಯಲ್ಲೂ ನೀರು ನುಗ್ಗಿ ಪರಿಸ್ಥಿತಿ ಹದಗೆಟ್ಟಿತ್ತು. ಜೊತೆಗೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ಹೆಚ್.ಪಿ.ಪೆಟ್ರೋಲ್ ಬಂಕ್ ಬಳಿ ನೀರು ನುಗ್ಗಿ ಜಲಾವೃತವಾಗಿದೆ. ಇನ್ನು ನೆಲಮಂಗಲ ಡಾಬಸ್ ಪೇಟೆಯಲ್ಲಿ ಧಾರಕಾರ ವರುಣನ ಆರ್ಭಟವಂತು ಹೇಳತಿರದು ತಗ್ಗು ಪ್ರದೇಶದಲ್ಲಿ ಮನೆಗಳಿಗೆ, ಅಂಗಡಿಗಳಿಗೆ ಒಂದು ಅಡಿಗೂ ಹೆಚ್ಚು ನೀರು ನುಗ್ಗಿ ಜನ ಪರೆದಾಡುತ್ತಿದ್ದಾರೆ. ಶಿವಗಂಗೆ ಡಾಬಸ್ ಪೇಟೆ ರಸ್ತೆಯಲ್ಲೂ ಕೂಡ  ಮಳೆಯ ನೀರು ನುಗ್ಗಿ ವಾಹನ ಸವಾರರ ಪರದಾಡಿದರು. ನೆಲಮಂಗಲ ತಾಲೂಕಿನ ತೊರೆ ಮೂಡಲಪಾಳ್ಯದ ಶಿವಗಂಗೆ ನೆಲಮಂಗಲ ರಸ್ತೆಯಲ್ಲಿ ಭೂಮಿ ನೆನೆದು ರಸ್ತೆಗೆ ಅಡ್ಡವಾಗಿ ಮರವೇ ಉರುಳಿತ್ತು. ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಬೇಸತ್ತು ಹೋಗಿದ್ದರು. ನಂತರ ಸ್ಥಳಿಯರು ಸೇರಿ ಮರ ತೆರವಿಗೆ ಸಿದ್ದತೆ ಮಾಡಿಕೊಂಡರು.

Karnataka Rains: ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: 3 ಬಲಿ

ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಭಾರತಕ್ಕೆ ನಿಗದಿತ ಸಮಯಕ್ಕೂ ಮೊದಲೇ ಮುಂಗಾರು ಪ್ರವೇಶವಾಗಿದೆ. ಇದರ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಅಬ್ಬರ ಆರಂಭಗೊಂಡಿದೆ. ಇದೀಗ ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಮುಳುಗಡೆಯಾಗಿದೆ. ಬೊಬ್ಬೆಕೇರಿ ಭಾಗದಲ್ಲಿ ನೆರೆ ನೀರು ಏರಿದ ಪರಿಣಾಮ ತಾಸುಗಟ್ಟಲೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಪರದಾಡಿದರು. ರಸ್ತೆ ಕಾಮಗಾರಿ ಹಿನ್ನೆಲೆ ಚರಂಡಿಗಳಲ್ಲಿ ಮಳೆನೀರು ಹರಿಯಲು ಸ್ಥಳಾವಕಾಶವಿಲ್ಲದೇ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಮರಗಳು ರಸ್ತೆಗಳುರುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. 

click me!