* ನೀರು ಪಾಲಾದ ಭತ್ತ, ಕಬ್ಬು ಮತ್ತು ಸೋಯಾ ಬೆಳೆ
* ಭಾರೀ ಮಳೆಯಿಂದ ಕಂಗಾಲಾದ ರೈತ ಸಮುದಾಯ
* ಅಕಾಲಿಕ ಮಳೆಗೆ 166 ಮನೆಗಳಿಗೆ ಹಾನಿ
ಧಾರವಾಡ(ನ.19): ಬುಧವಾರ ರಾತ್ರಿ ಸೇರಿದಂತೆ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ(Rain) ಮಲೆನಾಡು(Malenadu) ರೈತರು ತತ್ತರಿಸಿ ಹೋಗಿದ್ದಾರೆ. ಇನ್ನೇನು ಪೈರು ಕೈಗೆ ಬಂತು ಎನ್ನುವಷ್ಟರಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತ ಸಮುದಾಯ ಮತ್ತೇ ಕಂಗಾಲಾಗಿದೆ. ಅದರಲ್ಲೂ ಬತ್ತ, ಕಬ್ಬು, ಸೋಯಾ ಬೆಳೆದ ರೈತರು(Farmers) ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಧಾರವಾಡ(Dharwad)ತಾಲೂಕಿನ ಮುಗದ, ದೇವರಹುಬ್ಬಳ್ಳಿ, ಅಂಬ್ಲಿಕೊಪ್ಪ, ನಿಗದಿ, ಹೊಲ್ತಿಕೋಟಿ ಹಾಗೂ ಅಳ್ನಾವರ ಮತ್ತು ಕಲಘಟಗಿ ತಾಲೂಕಿನ ರೈತರು ಎರಡು ದಿನಗಳ ಮಳೆಯಿಂದ ನಲುಗಿ ಹೋಗಿದ್ದಾರೆ. ಬಹುತೇಕ ಭಾಗಗಳಲ್ಲಿ ಬತ್ತ(Paddy) ಕಟಾವು ಮಾಡಿ ಇಡಲಾಗಿದ್ದು ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಸುರಿದ ಮಳೆ ಭತ್ತವನ್ನು ಸಂಪೂರ್ಣ ನಾಶ ಮಾಡಿದೆ. ಜಿಲ್ಲೆಯಲ್ಲಿ ಬೆಳೆಯಲಾಗಿದ್ದ 8 ಸಾವಿರ ಹೆಕ್ಟೇರ್ ಪ್ರದೇಶ ಬತ್ತ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಬತ್ತದ ಕಟಾವು ಸಮಯವಿದು. ಇನ್ನೊಂದು ವಾರದಲ್ಲಿ ಬತ್ತದ ರಾಶಿಯಾಗಿ ರೈತರ ಮನೆ ಸೇರುತ್ತಿದ್ದವು. ಅಷ್ಟರೊಳಗೆ ಭೀಕರವಾಗಿ ಸುರಿದ ಮಳೆಯಿಂದಾಗಿ ಎಲ್ಲವೂ ನೀರು ಪಾಲಾಗಿದೆ. ಕಟಾವು ಆಗದ ಬತ್ತ ನೆಲ್ಲಕ್ಕೆ ಉರುಳಿದ್ದರೆ, ಕಟಾವು ಆಗಿ ಹೊಲದಲ್ಲಿದ್ದ ಬತ್ತ ನೀರಿನಲ್ಲಿ ನೆನೆದು ಹೋಗಿದೆ. ಇದೀಗ ಏನೇ ಮಾಡಿದರೂ ಬತ್ತ ಉಪಯೋಗಕ್ಕೆ ಬರೋದಿಲ್ಲ. ಇದು ಕೇವಲ ಬತ್ತಕ್ಕೆ ಬಂದಿರುವ ಸಮಸ್ಯೆಯಲ್ಲ. ಕಬ್ಬು, ಸೋಯಾಬೀನ್ ಬೆಳೆಯೂ(Crop) ಸಂಪೂರ್ಣವಾಗಿ ನೆಲಕಚ್ಚಿವೆ ಎಂದು ದೇವರಹುಬ್ಬಳ್ಳಿಯ ಶಿವರುದ್ರಪ್ಪ ಬೇಸರ ವ್ಯಕ್ತಪಡಿಸಿದರು.
Karnataka| ಭಾರೀ ಮಳೆಗೆ 7.31 ಲಕ್ಷ ಹೆಕ್ಟೇರ್ ಬೆಳೆ ಹಾನಿ
ಇನ್ನು, ಲಾಕ್ಡೌನ್‌ನಿಂದ(Lockdown) ಸಾಕಷ್ಟು ಯುವ ಪದವೀಧರರು ನೌಕರಿ(Job) ಕಳೆದುಕೊಂಡು ತಮ್ಮೂರಿಗೆ ಬಂದು ಕೃಷಿ(Agriculture) ಮಾಡಿಕೊಂಡಿದ್ದರು. ಈ ಪೈಕಿ ಅಳ್ನಾವರ(Alnavar) ತಾಲೂಕಿನ ಕೋಗಿಲೆಗೆರೆ ಗ್ರಾಮದ ಪರಶುರಾಮ್ ಎಂಬುವರು ಸ್ವಂತ ಊರಲ್ಲಿ ಬತ್ತದ ಕೃಷಿ ಮಾಡಿದ್ದರು. ಅಪಾರ ಮಳೆಯಿಂದ ಬತ್ತ ಸಂಪೂರ್ಣ ನೆಲಕಚ್ಚಿದ್ದು ಪರಶುರಾಮ ಕಂಗಾಲಾಗಿದ್ದಾರೆ. ಇದೇ ರೀತಿ ಅನೇಕ ರೈತರು ಮಳೆಯಿಂದಾಗಿ ಮಮ್ಮುಲ ಮರಗುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಎರಡು ದಿನಗಳ ಕಾಲ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದಲ್ಲದೇ ಗುರುವಾರ ಬೆಳಗ್ಗೆ ಸಹ ಮತ್ತೇ ಧಾರವಾಡ ಸುತ್ತಮುತ್ತಲೂ ಮಳೆಯಾಗಿದೆ. ಏಕಾಏಕಿ ಮೋಡ ಕವಿದು ಮಳೆಯಾಗುತ್ತಿದ್ದು ಚಳಿಗಾಲದಲ್ಲಿ(Winter) ಈ ರೀತಿಯಲ್ಲಿ ವಾತಾವರಣದಿಂದ ರೈತರು ಸೇರಿದಂತೆ ಸಾಮಾನ್ಯ ಜನರೂ ಕಂಗಾಲಾಗಿದ್ದಾರೆ.
ಅಕಾಲಿಕ ಮಳೆಗೆ 166 ಮನೆಗಳಿಗೆ ಹಾನಿ
ಹಾವೇರಿ: ಜಿಲ್ಲೆಯಲ್ಲಿ ಬುಧವಾರ ಸುರಿದ ಅಕಾಲಿಕ ಮಳೆಯಿಂದ(Premature Rain) 166 ಮನೆಗಳಿಗೆ ಹಾನಿಯಾಗಿದೆ. 230 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದೆ(Horticulture Crop). ಕೃಷಿ ಜಮೀನಿನಲ್ಲಿಯ(Land) ಬೆಳೆಹಾನಿಯ ಸಮೀಕ್ಷೆ(Surbey) ಇನ್ನು ಚಾಲ್ತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!
ಬುಧವಾರದ ಮಳೆಗೆ ಸವಣೂರು ತಾಲೂಕಿನಲ್ಲಿ ಅತಿಹೆಚ್ಚು 98, ಶಿಗ್ಗಾಂವಿ 31, ಬ್ಯಾಡಗಿ 28, ರಟ್ಟಿಹಳ್ಳಿ 5, ಹಿರೇಕೆರೂರ 2 ಹಾಗೂ ಹಾವೇರಿ, ರಾಣಿಬೆನ್ನೂರ ತಾಲೂಕಿನಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ 112.4 ಹೆಕ್ಟೇರ್, ರಟ್ಟಿಹಳ್ಳಿ ತಾಲೂಕಿನಲ್ಲಿ 91, ಸವಣೂರ ತಾಲೂಕಿನಲ್ಲಿ 15, ಬ್ಯಾಡಗಿ 8.4, ರಾಣಿಬೆನ್ನೂರ 3.8 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಮತ್ತು ಹಾನಿ ಪ್ರದೇಶ ಹೆಕ್ಟೇರ್‌ಗಳಲ್ಲಿ
ಜೋಳ:
ಬಿತ್ತನೆ 35395
ಹಾನಿ 3000
ನಷ್ಟ 7 ಕೋಟಿ ರುಪಾಯಿ
ಗೋಧಿ:
ಬಿತ್ತನೆ 20715
ಹಾನಿ 200
ನಷ್ಟ 42 ಲಕ್ಷ ರುಪಾಯಿ
ಮೆಕ್ಕೆಜೋಳ
ಬಿತ್ತನೆ 2998
ಹಾನಿ 1200
ನಷ್ಟ 13 ಕೋಟಿ ರುಪಾಯಿ
ಕಡಲೆ
ಬಿತ್ತನೆ 1,17,013
ಹಾನಿ 300
ನಷ್ಟ 14 ಕೋಟಿ ರುಪಾಯಿ
ಸೋಯಾಬೀನ್
ಬಿತ್ತನೆ 3700
ಹಾನಿ 600
ನಷ್ಟ 10 ಕೋಟಿ ರೂಪಾಯಿ
ಬತ್ತ
ಬಿತ್ತನೆ 11000
ಹಾನಿ 459
ನಷ್ಟ 5 ಕೋಟಿ ರುಪಾಯಿ
ಮೆಣಸಿನ ಕಾಯಿ
ಬಿತ್ತನೆ 21663
ಹಾನಿ 1200
ನಷ್ಟ 10 ಕೋಟಿ ರುಪಾಯಿ
ಕಬ್ಬು
ಬಿತ್ತನೆ 11300
ಹಾನಿ 300
ನಷ್ಟ 2.5 ಕೋಟಿ ರುಪಾಯಿ
ಜಿಲ್ಲೆಯಲ್ಲಿ 61.92 ಕೋಟಿ ರುಪಾಯಿ ಅಂದಾಜು ನಷ್ಟ