ರಾಷ್ಟ್ರೀಯ ಹೆದ್ದಾರಿ 169ರ (ಹಳೆಯ ಸಂಖ್ಯೆ-13) ಕುದುರೆಮುಖ ವನ್ಯಜೀವಿ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ 4 ಕಿರುಸೇತುವೆಗಳು ಶಿಥಿಲವಾಗಿದ್ದು ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 4 ಕಿರುಸೇತುವೆಗಳ ಮರುನಿರ್ಮಾಣ ಮಾಡಬೇಕಾಗಿದ್ದು, ಈ ದಾರಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ.
ಚಿಕ್ಕಮಗಳೂರು(23): ರಾಷ್ಟ್ರೀಯ ಹೆದ್ದಾರಿ 169ರ (ಹಳೆಯ ಸಂಖ್ಯೆ-13) ಕುದುರೆಮುಖ ವನ್ಯಜೀವಿ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ 4 ಕಿರುಸೇತುವೆಗಳು ತುಂಬಾ ಶಿಥಿಲವಾಗಿದ್ದು, ಮರುನಿರ್ಮಾಣ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ.
ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳ ಮುಖ್ಯ ಅಭಿಯಂತರರು ಪ್ರಸ್ತಾವನೆ ಪರಿಶೀಲಿಸಿ ಎನ್‌ಎಚ್ 169 ಭಾರಿ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ- 169ರ ಕಿ.ಮೀ 654.830, ಕಿ.ಮೀ 655.930, ಕಿ.ಮೀ 660.030, ಕಿ.ಮೀ 663.300 ವ್ಯಾಪ್ತಿಯಲ್ಲಿ ಬರುವ ಭಾರಿ ವಾಹನಗಳ ಸಂಚಾರವನ್ನು ಕಿರುಸೇತುವೆಯ ಮೇಲೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಕೊಡಗಿನಲ್ಲಿ ಮಳೆಗಾಲದಲ್ಲಿ ಈ ವಾಹನಗಳಿಗೆ ನಿಷೇಧ
ಯಾವ್ಯಾವ ವಾಹನ ಹೋಗುವಂತಿಲ್ಲ:
undefined
ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್ ಮತ್ತು ಎಲ್ಲ ಬಗೆಯ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಮಾರ್ಗದಲ್ಲಿ ಕಾರು, ಜೀಪು, ದ್ವಿಚಕ್ರ ವಾಹನ, ರಾಜಹಂಸ ಹಾಗೂ ಸಾರ್ವಜನಿಕರು ಪ್ರಯಾಣಿಸುವ ಲಘು ವಾಹನಗಳನ್ನು ಸಂಚರಿಸಬಹುದು.
ಪರ್ಯಾಯ ಮಾರ್ಗ:
ಪರ್ಯಾಯ ಮಾರ್ಗವಾಗಿ ಚಿಕ್ಕಮಗಳೂರಿನಿಂದ ಬರುವ 15 ಟನ್‌ಗಳಿಗಿಂತ ಕಡಿಮೆ ತೂಕದ ವಾಹನಗಳು ಬಾಳೆಹೊನ್ನೂರು -ಮಾಗುಂಡಿ-ಕಳಸ-ಕುದುರೆಮುಖ- ಎಸ್.ಕೆ. ಬಾರ್ಡರ್ ಮುಖಾಂತರ ಹಾಗೂ ನರಸಿಂಹರಾಜಪುರ ಕಡೆಯಿಂದ ಬರುವ ವಾಹನಗಳು ಕೊಪ್ಪ- ಹರಿಹರಪುರ- ಬಿದಗೋಡು- ಆಗುಂಬೆ ಮಾರ್ಗವಾಗಿ ಸಂಚರಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.