ಹೃದಯಾಘಾತದಿಂದ ರಫಿಕ್ ನಿಧನ,  ನೆಚ್ಚಿನ ಒಡೆಯನ ಕಳೆದುಕೊಂಡ 'ಭೀಮ'

By Suvarna NewsFirst Published Oct 21, 2021, 5:39 PM IST
Highlights

* ಜಾನುವಾರುಗಳಿಗೆ ಆಸರೆಯಾಗಿದ್ದ ಇನ್ಸ್ಪೆಕ್ಟರ್ ಸಾವು 

* ಬೆಂಗಳೂರಿನಲ್ಲಿ ಹೃದಯಾಘಾತದಿಂದ ಇನ್ಸ್ ಪೆಕ್ಟರ್ ಸಾವು

* ಪೊಲೀಸ್ ಅಧಿಕಾರಿ ಮಹಮ್ಮದ್ ರಫಿಕ್ ಸಾವು

* ಗುರುವಾರ ಬೆಳಗ್ಗೆ ಸ್ನಾನಕ್ಕೆ ತೆರಳಿದ್ದಾಗ ಉಸಿರಾಟದ ತೊಂದರೆ

ಬೆಂಗಳೂರು(ಅ. 21)  ಪೊಲೀಸ್ ಅಧಿಕಾರಿಯಾಗಿದ್ದುಕೊಂಡು(Bengaluru Police) ಜಾನುವಾರುಗಳಿಗೆ (Cow) ಆಸರೆಯಾಗಿದ್ದ ಇನ್ಸ್ ಪೆಕ್ಟರ್ ಹೃದಯಾಘಾತದಿಂದ(Heart Attack) ನಿಧನರಾಗಿದ್ದಾರೆ.

ಗುರುವಾರ ಬೆಳಗ್ಗೆ ಸ್ನಾನಕ್ಕೆ ತೆರಳಿದ ಸಂದರ್ಭ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೆ ವೈದ್ಯರನ್ನ ಕರೆಸಲಾಗಿದೆ. ಆದರೆ ಅಷ್ಟರಲ್ಲೆ ಮಹಮ್ಮದ್ ರಫೀಕ್ ಅಸುನೀಗಿದ್ದರು.

ನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದ ಮಹಮ್ಮದ್  ರಫಿಕ್ ಬೈಯಪ್ಪನಹಳ್ಳಿ ಇನ್ಸ್ ಪೆಕ್ಟರ್ ಆಗಿದ್ದರು.  ಇತ್ತೀಚೆಗೆ ಜೀ ಕನ್ನಡದ ಸರಿಗಮಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಸುಬ್ರಹ್ಮಣಿ ಜೊತೆ ಕಾಣಿಸಿಕೊಂಡು ಪ್ರೋತ್ಸಾಹದ ಮಾತುಗಳನ್ನು ಆಡಿದ್ದರು.

ಲಾಕ್ ಡೌನ್ (Lockdown) ಸಂಧರ್ಭದಲ್ಲಿ ಗೋವುಗಳಿಗೆ ರಕ್ಷಣೆ ನೀಡಿ ಆಹಾರ ನೀಡುತ್ತಾ ಬಂದಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನಾಥ ಕರುವೊಂದನ್ನು ಸಾಕಿದ್ದರು.  ಟ್ರಾನ್ಸಫರ್ ಆಗಿದ್ರೂ ಕರುವನ್ನ ಜೊತೆಯಲ್ಲೇ ಕರೆದೊಯ್ಯುತ್ತಿದ್ದರು.

ನಾಲೆಗೆ ಬಿದ್ದ ಹಸುಗಳ ರಕ್ಷಣೆ..ಸಾಹಸದ ಸ್ಟೋರಿ

ಮೈಸೂರು (Mysuru) ಮೂಲದ ಮಹಮದ್ ರಫಿಕ್  ಠಾಣೆ ಮೆಟ್ಟಿಲು ಹತ್ತಿದವರಿಗೆ ಸಾಂತ್ವನ ಹೇಳುವ ಮೂಲಕ ಸ್ಪಂದಿಸುತ್ತಿದ್ದರು. ಇಲಾಖೆಯಲ್ಲಿ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದರು ಕೊರೊನಾ ಲಾಕ್ ಡೌನ್ ವೇಳೆ ತನ್ನ ವೇತನದ ಒಂದು ಭಾಗವನ್ನು ಗೋವುಗಳಿಗೆ ಆಹಾರ ನೀಡುವುದಕ್ಕೆ ಮೀಸಲು ಇಟ್ಟಿದ್ದರು.  

ಸರಿಗಮಪದಲ್ಲಿ ಕಾಣಿಸಿಕೊಂಡಿದ್ದ ವೇಳೆ ಗೆಳೆಯ ವಿಜಯ್ ಪ್ರಕಾಶ್ ಜತೆ ಎನ್‌ ಸಿಸಿ ದಿನಗಳನ್ನು ಸ್ಮರಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಮತ್ತು ರಫಿಕ್ ಒಂದೇ ಕಡೆ ತರಬೇತಿ ಪಡೆದುಕೊಂಡವರು. 

ಭೀಮನ ಜತೆ ಒಡನಾಟ; ಕರು ಭೀಮನ ಜತೆ ರಫಿಕ್ ಬಾಂಧವ್ಯ  ಬೆಳೆಸಿಕೊಂಡಿದ್ದರು. ಅಧಿಕಾರಿ ಮಾತು ಕೇಳಿದ ತಕ್ಷಣ ಭೀಮ ಹಾಜರಾಗುತ್ತಿದ್ದ. ನೆಚ್ಚಿನ ಮಾಲೀಕನ ಕಳೆದುಕೊಂಡ ಭೀಮನಿಗೆ ಈಗ ಅನಾಥಭಾವ!

click me!