ಬೆಂಗಳೂರು: ಕೆಂಪೇಗೌಡ ಉದ್ಯಾನವನ ತಡೆಗೋಡೆ ಕುಸಿತ, ಪಿಎಂ, ಸಿಎಂಗೆ ಶಾಸಕ ಪತ್ರ

By Kannadaprabha NewsFirst Published Oct 20, 2021, 12:22 PM IST
Highlights

*  ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಶಾಸಕ ಮಂಜುನಾಥ್‌ ಆಗ್ರಹ
*  ಟೆಂಡರ್‌ ಕರೆಯದೆ ಉದ್ಯಾನ ನಿರ್ಮಾಣ
*  ಅ.16ರಂದು ಸುರಿದ ಮಳೆಗೆ ಉದ್ಯಾನದ ಕೋಟೆ ಗೋಡೆ ಕುಸಿತ 
 

ಬೆಂಗಳೂರು(ಅ.20): ದಾಸರಹಳ್ಳಿ ವಲಯದ ಮಲ್ಲಸಂದ್ರ ವಾರ್ಡಿನ ನಾಡಪ್ರಭು ಕೆಂಪೇಗೌಡ ಉದ್ಯಾನದ(Kempegowda Park) ಪಶ್ಚಿಮ ದಿಕ್ಕಿನ ಕೋಟೆ ಗೋಡೆ ಕುಸಿತ ಪ್ರಕರಣದ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದಾಸರಹಳ್ಳಿ ಕ್ಷೇತ್ರದ ಶಾಸಕ(MLA) ಆರ್‌.ಮಂಜುನಾಥ್‌(R Manjunath) ಆಗ್ರಹಿಸಿದ್ದಾರೆ.

ಕೋಟೆ ಗೋಡೆ ಕುಸಿತ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆ(BBMP) ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಯಾವ ಭಾಗದಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುದನ್ನು ಗುರುತಿಸಿ, ಆ ಜಾಗವನ್ನು ತೆರವುಗೊಳಿಸಿ ಮರು ನಿರ್ಮಿಸಬೇಕು. ಇನ್ನು ಟೆಂಡರ್‌(Tender) ಕರೆಯದೆ ಉದ್ಯಾನ ನಿರ್ಮಿಸಲಾಗಿದೆ. ಕೋಟೆ ಗೋಡೆ(Fort Wall) ನಿರ್ಮಾಣಕ್ಕೆ ಮಲ್ಲಸಂದ್ರ ಬಂಡೆಕಲ್ಲನ್ನೇ ಬಳಸಿ ಕಾಮಗಾರಿ ಮಾಡಲಾಗಿದೆ. ಈ ಕಳಪೆ ಕಾಮಗಾರಿಗೆ ಹಿಂದಿನ ಶಾಸಕರು ಹಾಗೂ ಪಾಲಿಕೆ ಮಾಜಿ ಸದಸ್ಯರೇ ಕಾರಣ ಎನ್ನಲಾಗಿದೆ. ಈ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರಧಾನ ಮಂತ್ರಿ(Prime Minister) ಹಾಗೂ ಮುಖ್ಯಮಂತ್ರಿಗೆ(Chief Minister) ಪತ್ರ ಬರೆಯುವುದಾಗಿ ಹೇಳಿದರು.

ಬೆಂಗಳೂರು: ಕೆಂಪೇಗೌಡ ಲೇಔಟಲ್ಲಿ ಮನೆ ಕಟ್ಟಲು ಬಿಡಿಎ ಅಡ್ಡಿ..!

ಈ ಉದ್ಯಾನ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ತಪ್ಪಿತಸ್ಥರ ಪತ್ತೆಗೆ ಕಾನೂನು ಮೊರೆ ಹೋಗಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಕರ್ನಾಟಕ(Karnataka) ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಸುಮಾರು ಏಳು ಎಕರೆ ಜಾಗದಲ್ಲಿ ಮೂರು ವರ್ಷದ ಹಿಂದೆ ಸುಮಾರು 24 ಕೋಟಿ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಲಾಗಿತ್ತು. ಅಂದಿನ ಪಾಲಿಕೆ ಸದಸ್ಯ ಲೋಕೇಶ್‌ ಅವರು ಟೆಂಡರ್‌ ಕರೆಯದೇ ಅಭಿವೃದ್ಧಿ ಕಾಮಗಾರಿ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ನಡುವೆ ಕಳೆದ ಆಗಸ್ಟ್‌ನಲ್ಲಿ ಸಂಸದ ಡಿ.ವಿ.ಸದಾನಂದ ಗೌಡರನ್ನು(DV Sadanand Gowda) ಕರೆಸಿ ತರಾತುರಿಯಲ್ಲಿ ಉದ್ಯಾನವನ್ನು ಉದ್ಘಾಟಿಸಲಾಗಿತ್ತು. ಇದೀಗ ಅ.16ರಂದು ಸುರಿದ ಮಳೆಗೆ ಉದ್ಯಾನದ ಕೋಟೆ ಗೋಡೆ ಕುಸಿತವಾಗಿದೆ.
 

click me!