* ಚಿಂಚೋಳಿ ಮತ್ತು ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ
* ಮತ್ತೆ ಭೂಮಿ ಕಂಪಿಸಲು ಆರಂಭಿಸಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ
* ಮನೆಯಿಂದ ಹೊರಗೋಡಿ ಬಂದ ಜನರು
ಕಲಬುರಗಿ/ವಿಜಯಪುರ(ಅ.21): ಕಲಬುರಗಿ(Kalaburagi) ಜಿಲ್ಲೆಯ ಚಿಂಚೋಳಿ(Chincholi) ಮತ್ತು ವಿಜಯಪುರ(Vijayapura) ಜಿಲ್ಲೆಯ ತಿಕೋಟಾ(Tikota) ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಬೆಳಗ್ಗಿನ ಹೊತ್ತು ಸಂಭವಿಸಿದ ಈ ಕಂಪನದಿಂದ ಭೀತಿಗೊಂಡ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ತಿಕೋಟಾದಲ್ಲಿ ರಿಕ್ಟರ್ ಮಾಪಕದಲ್ಲಿ(Richter Scale) 3.6ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ.
ಚಿಂಚೋಳಿ ತಾಲೂಕಿನ ಗಡಿಕೇಶ್ವರ, ಹಲಚೇರಾ, ಕುಪನೂರ್ ಮತ್ತಿತರ ಕಡೆ ಭಾರೀ ಸದ್ದಿನೊಂದಿಗೆ ಬೆಳಗಿನ ಜಾವ 4.31 ಮತ್ತು 6.52ರ ಹೊತ್ತಿಗೆ ಎರಡು ಬಾರಿ ಭೂಮಿ ಕಂಪಿಸಿದೆ. ಈ ವೇಳೆ ನಿದ್ದೆಯಲ್ಲಿದ್ದ ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಭೂಕಂಪದೂರಲ್ಲಿ ಪ್ರತಿ ಮನೆ ಮುಂದೆ ಶೆಡ್ ನಿರ್ಮಾಣ: ಸಚಿವ ಅಶೋಕ
ಇನ್ನು ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಬೆಳಗ್ಗೆ 10.32ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸೋಮವಾರ ಸಂಜೆ ಕೂಡ ಇಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು.
ಪದೇ ಪದೆ ಸಂಭವಿಸುತ್ತಿರುವ ಭೂಕಂಪದಿಂದಾಗಿ(Earthquake) ಈಗಾಗಲೇ ಗಡಿಕೇಶ್ವರದಲ್ಲಿ ಅನೇಕರು ಮನೆ, ಮಠ ತೊರೆದಿದ್ದಾರೆ. ಇದೀಗ ಮತ್ತೆ ಭೂಮಿ ಕಂಪಿಸಲು ಆರಂಭಿಸಿದ್ದರಿಂದ ಗ್ರಾಮಸ್ಥರಲ್ಲಿ(Villagers) ಆತಂಕದ(Anxiety) ವಾತಾವರಣ ಮನೆ ಮಾಡಿದೆ.