ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ವೈದ್ಯರು, ಸಿಬ್ಬಂದಿ ಗೊನೂರಿನ ಭಿಕ್ಷುಕರ ಆಶ್ರಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, 297 ಭಿಕ್ಷುಕರ ಆರೋಗ್ಯ ತಪಾಸಣೆ ನಡೆಸಿದರು.
ಚಿತ್ರದುರ್ಗ(ಏ.23): ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ವೈದ್ಯರು, ಸಿಬ್ಬಂದಿ ಗೊನೂರಿನ ಭಿಕ್ಷುಕರ ಆಶ್ರಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, 297 ಭಿಕ್ಷುಕರ ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ , ಕೈಗಳನ್ನು ಸ್ಬಚ್ಛವಾಗಿ ಸಾಬೂನಿನಿಂದ ತೊಳೆದುಕೊಳ್ಳಬೇಕು. ಮಲಗುವ ರೂಂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿನಾಕಾರಣ ಎಲ್ಲೆಂದರಲ್ಲಿ ಉಗಳ ಬೇಡಿ. ನೀಡಿರುವ ಮಾಸ್ಕ್ ಬಳಸಿದ ನಂತರ ಪ್ರತ್ಯೇಕವಾಗಿ ಸಂಗ್ರಹಿಸಿ ಸರಿಯಾದ ಸ್ಥಳದಲ್ಲಿ ವಿಲೇವಾರಿಮಾಡಿದಲ್ಲಿ ಸೋಂಕು ಹರಡುವುದನ್ನ ನಿಯಂತ್ರಿಸಬಹುದು. ಜ್ವರ, ತಲೆನೋವು, ನಗಡಿ ಕೆಮ್ಮು, ಉಸಿರಾಟದ ತೊಂದರೆ, ಭೇದಿ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕು ಎಂದರು.
undefined
ಮುಸ್ಲಿಮರಲ್ಲಿ ಭರವಸೆ ಮೂಡಿಸಿತಂತೆ ಮೋದಿಯ ಆ ಮಾತು, ಪ್ರಧಾನಿಗೆ ಮೆಚ್ಚುಗೆ ಪತ್ರ
ತಾಲೂಕು ಆರೋಗ್ಯ ಶಿಕ್ಚಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕೆಮ್ಮು ನೆಗಡಿ ಇತ್ಯಾದಿ ಲಕ್ಷಣಗಳು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ. ಬಿಸಿ ಆಹಾರ, ಬಿಸಿ ನೀರು ಸಂಪೂರ್ಣ ಬೇಯಿಸಿದ ಆಹಾರ ಸೇವಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದರು.
297 ಬಿಕ್ಷುಕರನ್ನು ನೋಡಿಕೊಳ್ಳಲು 17 ಜನ ಸೇವಾ ಸಿಬ್ಬಂದಿ ಇರುವುದರಿಂದ, ಅಗತ್ಯಕ್ಕೆ ಅನುಗುಣವಾಗಿ ಇವರಿಗೆ ಹೈಡ್ರಾಕ್ಸಿ ಕ್ಲೋರಕ್ವಿನ್ ಮಾತ್ರೆ ನೀಡಲಾಗುತ್ತದೆ. ವೈದ್ಯರ ಸಲಹೆಯಂತೆ ನುಂಗಬೇಕೆಂದು ಸೂಚಿಸಲಾಯಿತು.
ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!
ಗೋನೂರು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಹದೇವಯ್ಯ ಎಮ್, ಎಮ್. ಖಾಸಿಮ್ ಸಾಬ್, ಎಂ.ಬಿ. ಹನುಮಂತಪ್ಪ, ಬಿ.ಮೂಗಪ್ಪ, ಡಾ.ಸುಪ್ರೀತಾ, ಡಾ.ವಾಣಿ, ಪೂಜ ಉಪಸ್ಥಿತರಿದ್ದರು.