ಜೀವನ ವಿಕಾಸಕ್ಕೆ ಆರೋಗ್ಯ ಮತ್ತು ಅಧ್ಯಯನಗಳೆರಡೂ ಮುಖ್ಯವಾಗಿದ್ದು, ಹಲವು ಖಿನ್ನತೆಗೊಳಗಾಗಿ ವಿದ್ಯಾರ್ಥಿಗಳು ಓದನ್ನು ಕಡೆಗಣಿಸುವ ಸಂದರ್ಭಗಳನ್ನು ಆಪ್ತ ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ. ದೀಪಾಲಿ ಕರೆ ನೀಡಿದರು.
ಕೊರಟಗೆರೆ : ಜೀವನ ವಿಕಾಸಕ್ಕೆ ಆರೋಗ್ಯ ಮತ್ತು ಅಧ್ಯಯನಗಳೆರಡೂ ಮುಖ್ಯವಾಗಿದ್ದು, ಹಲವು ಖಿನ್ನತೆಗೊಳಗಾಗಿ ವಿದ್ಯಾರ್ಥಿಗಳು ಓದನ್ನು ಕಡೆಗಣಿಸುವ ಸಂದರ್ಭಗಳನ್ನು ಆಪ್ತ ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ. ದೀಪಾಲಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸಮಿತಿ, ರೆಡ್ ರಿಬ್ಬನ್ ಸಮಿತಿ, ಕಾಲೇಜಿನ ಎನ್‌ಎಸ್ಎಸ್ ವಿಭಾಗ ಮತ್ತು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ಋತು ಚಕ್ರ ನೈರ್ಮಲ್ಯ ಜಾಗೃತಿ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
undefined
ಬದುಕಿನಲ್ಲಿ ಸಮಸ್ಯೆಗಳು ಸಾಲು ಸಾಲಾಗಿ ಬರುತ್ತವೆ, ಆದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರಗಳು ಇವೆ, ಕೆಲವು ಸಮಸ್ಯೆಗಳು ಬಂದು ಹೋಗುತ್ತವೆ, ಇನ್ನು ಕೆಲವು ನಮ್ಮ ಅರಿವಿನ ಕೊರೆತಯಿಂದಾಗಿ ಮನಸ್ಸಿನಲ್ಲಿ ನೆಲೆಯೂರಿ ಮಾನಸಿಕ, ಶಾರೀರಿಕವಾಗಿ ಆರೋಗ್ಯವನ್ನು ಖಿನ್ನಗೊಳಿಸುತ್ತವೆ, ಇತ್ತೀಚಿನ ಸಂದರ್ಭಗಳಲ್ಲಿ ಆಪ್ತರು, ಅರಿವು ಉಳ್ಳವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು, ನಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವೇ ಮುಂದಾದರೆ ಮಾತ್ರ ಪರಿಹಾರ ಸಾಧ್ಯ, ವಿದ್ಯಾರ್ಥಿನಿಯರು ಋತು ಚಕ್ರದ ಸಮಯದಲ್ಲಿ ಎಚ್ಚರಿಕೆಗಳನ್ನು ತೆಗೆದುಕೊಳ್ಳುಬೇಕು, ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗುವ ಮೊದಲೇ ತೆಗದುಕೊಳ್ಳಬೇಕಾಗಿರುವ ಎಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ. ಜ್ಯೋತಿ ಕೆ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿತ-ಮಿತ ಜೀವನದ ಜೊತೆ ಜೊತೆಗೆ ಅಹಿತಕರ ಘಟನೆಗಳು ನಮ್ಮನ್ನು ಘಾಸಿಗೊಳಿಸಿ ಅಂತಃಶಕ್ತಿಯನ್ನು ನಾಶ ಮಾಡುತ್ತವೆ, ಇಂಥ ಸಂದರ್ಭದಲ್ಲಿ ಹಿರಿಯರ ಪಾಲ್ಗೊಳ್ಳುವಿಕೆ, ಮಾರ್ಗದರ್ಶನ ಪರಿಹಾರ ಒದಗಿಸಬಲ್ಲವು. ಜೀವನ ವಿಕಾಸದ ಹಾದಿಯಲ್ಲಿ ಸಮಸ್ಯೆಗಳು ಸಹಜ. ಆದರೆ ಪರಿಹರಿಸಿಕೊಳ್ಳುವ ಮನಸ್ಸು ಬಹುಮುಖ್ಯ ಎಂದರು.
ಡಾ. ಗಾಯಿತ್ರಿ ಅವರು ಋತು ಚಕ್ರದ ವೇಳೆಯಲ್ಲಿ ಋತು ಚಕ್ರದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಿದರು. ದೇವರಾಜು ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂಬಂಧಿಸಿದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಈವೇಳೆ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ವೆಂಕಟೇಶ್ ಬಿ.ಜಿ., ರಂಗನಾಥಮೂರ್ತಿ, ವೀಣಾ, ಡಾ. ಅಮಿತಾ ಕೆ.ವಿ., ಡಾ. ಸಿದ್ಧಗಂಗಯ್ಯ, ಡಾ. ರೂಪಾ, ರಂಗನಾಥ ಮೂರ್ತಿ, ಪಾಷಾ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು.
ಫೋಟೊ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಋತು ಚಕ್ರ ನೈರ್ಮಲ್ಯ ಜಾಗೃತಿ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮವನ್ನು ಹಿರಿಯ ವೈದ್ಯಾಧಿಕಾರಿ ಡಾ. ದೀಪಾಲಿ ಉದ್ಘಾಟಿಸಿ ಮಾತನಾಡಿದರು.