ಮಕ್ಕಳ ಯಶಸ್ವಿಗೆ ಪೋಷಕರ, ಶಿಕ್ಷಕರ ಕೊಡುಗೆ ಅಪಾರ: ಶಾಂತಲಾ ರಾಜಣ್ಣ

By Kannadaprabha News  |  First Published Jan 7, 2024, 10:10 AM IST

ಮಕ್ಕಳ ಯಶಸ್ವಿಗೆ ಪೋಷಕರ ಸಹಕಾರ ಮತ್ತು ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಮ ವಹಿಸಿ ಅಧ್ಯಯನ ಮಾಡುವ ಮೂಲಕ ತಂದೆ ತಾಯಿಗಳಿಗೆ ಗೌರವ ತರುವ ಜತೆಗೆ ಪಾಠ ಪ್ರವಚನ ಹೇಳಿ ಕೊಟ್ಟ ಗುರುಗಳಿಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಕರೆ ನೀಡಿದರು.


 ಮಧುಗಿರಿ: ಮಕ್ಕಳ ಯಶಸ್ವಿಗೆ ಪೋಷಕರ ಸಹಕಾರ ಮತ್ತು ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಮ ವಹಿಸಿ ಅಧ್ಯಯನ ಮಾಡುವ ಮೂಲಕ ತಂದೆ ತಾಯಿಗಳಿಗೆ ಗೌರವ ತರುವ ಜತೆಗೆ ಪಾಠ ಪ್ರವಚನ ಹೇಳಿ ಕೊಟ್ಟ ಗುರುಗಳಿಗೆ ಕೀರ್ತಿ ತರಬೇಕು ಎಂದು ಜಿಲ್ಲಾ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಕರೆ ನೀಡಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಮೌಂಟ್‌ ವೂ ವಿರಾಸತ್ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

undefined

ಅಂಕಗಳಿಗೆ ಮಹತ್ವ ನೀಡಿ, ಆದರೆ ಜ್ಞಾನ ವಿಸ್ತರಣೆಯಾಗದೇ ಪ್ರಸ್ತುತ ಸಮಾಜದ ಒಳಿತು ಕೆಡುಕನ್ನು ತಿಳಿಯುವ ಅರಿವು ಬೆಳಸಿಕೊಳ್ಳಬೇಕು. ಜೀವನ ಅತ್ಯಂತ ಸುಂದರ, ಈ ಸಂಮಯದಲ್ಲಿ ಶಿಸ್ತು ಸಂಯಮ ಮೈಗೂಡಿಸಿಕೊಳ್ಳಬೇಕು. ವಿದ್ಯೆ ಎಲ್ಲ ಸಂಪತ್ತನ್ನು ತಂದು ಕೊಡುತ್ತದೆ. ಓದಿದ ಸಂಸ್ಥೆಗೆ ಕೀರ್ತಿ ತರಬೇಕು. ವಿದ್ಯೆ ಜೊತೆಗೆ ಕ್ರೀಡೆ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ತೋರಬೇಕು ಎಂದರು.

ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮೊಬೈಲ್‌,ಟಿವಿ ನೋಡುವುದು ಬೇಡ, ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಸಿದ ದಿ.ಜಿ.ಎಸ್‌. ಸಿದ್ದಗಂಗಪ್ಪ ಅವರು ಶಿಕ್ಷಕರಾಗಿ ನಿವೃತ್ತಿ ನಂತರ ಮೌಂಟ್‌ ವೂ ಶಾಲೆ ಪ್ರಾರಂಭಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಶ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.

ಇಸಿಒ ಪ್ರಾಣೇಶ್‌, ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ಉಪನ್ಯಾಸಕ ನಾ. ಮಹಾಲಿಂಗೇಶ್‌, ಡಾ. ಅನಿಲ್‌, ಖಾಸಗಿ ಒಕ್ಕೂಟಗಳ ಅಧ್ಯಕ್ಷತ್ರ ಎಂ.ಎಸ್‌. ಶಂಕರನಾರಾಯಣ್, ಮೆಡುಮಾ ಮಾಜಿ ಉಪಾಧ್ಯಕ್ಷ ಭಾಸ್ಕರರೆಡ್ಡಿ,ಪುರಸಭೆ ಸದಸ್ಯ ಆರ್‌. ನಾರಾಯಣ್‌, ಎಸ್‌ಬಿಟಿ ಮಂಜು, ಎಸ್‌ಎಂ. ಶಾಲೆ ಕಾರ್ಯದರ್ಶಿ ವಾಸೀಂ, ಪ್ರಭಾರ ಬಿಇಒ ಹನುಮಂತರಾಯಪ್ಪ, ಜಿ.ಎಸ್‌. ನಟರಾಜು, ಮುಖ್ಯ ಶಿಕ್ಷಕಿ ವಾಸಂತಿ, ಸಿಬ್ಬಂದಿ ವರ್ಗ, ಶಿಕ್ಷಕರು ಹಾಗೂ ಪೋಷಕರು ಇದ್ದರು.

click me!