ಧಾರವಾಡ: ಮಗು ಮಾರಿದಳು ನಂತರ ಸುಮ್ಮನಿರಬೇಕಲ್ಲ ಹೆತ್ತ ತಾಯಿ ಕರುಳು

Published : Jul 03, 2019, 07:43 PM IST
ಧಾರವಾಡ: ಮಗು ಮಾರಿದಳು ನಂತರ ಸುಮ್ಮನಿರಬೇಕಲ್ಲ ಹೆತ್ತ ತಾಯಿ ಕರುಳು

ಸಾರಾಂಶ

ಮಗು ಮಾರಾಟ ಮಾಡಿ ಮತ್ತೇ ಬೇಕೆಂದ ಮಹಾತಾಯಿ! 25 ಸಾವಿರ ರೂ.ಗೆ ನವಜಾತ ಗಂಡು ಶಿಶು ಮಾರಾಟ ಮಾಡಿದ್ದ ತಾಯಿ.

ಧಾರವಾಡ[ಜು. 03]   ಹೆತ್ತ ಮಗುವಿನ ಮೇಲಿನ ಮಮತೆ ತಾಯಿಗೆ ಮರೆಯಾಗಲು ಸಾಧ್ಯವೇ? ಅನಾರೋಗ್ಯದ ಕಾರಣಕ್ಕೆ ಸ್ವಂತ ಮಗು ಮಾರಾಟ ಮಾಡಿಕೊಂಡಿದ್ದ ತಾಯಿಯ ಕರುಳು ಇದೀಗ ಮಗುವಿಗಾಗಿ ಪರಿತಪಿಸುತ್ತಿದೆ.

ಅನಾರೋಗ್ಯದ ಕಾರಣದಿಂದ ಹೆತ್ತ ಮಗುವನ್ನು ಮಾರಾಟ ಮಾಡಿ ನಂತರ ಮಗುವಿನ ನೆನಪಾಗಿ ನನ್ನ ಮಗು ಮರಳಿ ಕೊಡಿಸಿ ಎಂದು ತಾಯಿಯೊಬ್ಬರು ಮಕ್ಕಳ ರಕ್ಷಣಾ ಘಟಕಕ್ಕೆ ಮೊರೆ ಹೋಗಿದ್ದಾರೆ.

ಗೌಳಿಗಲ್ಲಿಯ ನಿವಾಸಿಯೊಬ್ಬರಗೆ ಜುಲೈ 2ರಂದು ಹೆರಿಗೆಯಾಗಿದ್ದು ತನ್ನ ನವಜಾತ ಗಂಡು ಶಿಶುವನ್ನು ಅನಾರೋಗ್ಯದ ಕಾರಣದಿಂದ ಮಧ್ಯವರ್ತಿಗಳಿಂದ ಸೈದಾಪುರದವರೊಬ್ಬರಿಗೆ  25 ಸಾವಿರ ರೂ. ಗೆ ಮಾರಾಟ ಮಾಡಿದ್ದರು. ನಂತರ ಬುಧವಾರ ಮಗುವಿನ ಮೇಲೆ ಪ್ರೀತಿ ಬಂದು ತನ್ನ ಮಗುವನ್ನು ಮರಳಿ ಕೊಡಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವಿನಂತಿಸಿಕೊಡಿದ್ದಾಳೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!