ಕಾರ್ಮಿಕ ಮಹಿಳೆ ಬಾಯಲ್ಲಿ ಮೋದಿ ಹೆಸರು... ಉತ್ತರ ಕೇಳಿ ದಂಗಾದ ದೇಶಪಾಂಡೆ

By Web DeskFirst Published Jul 3, 2019, 6:19 PM IST
Highlights

ಬರ ಮತ್ತು ನಿಸರ್ಗ ವಿಕೋಪ ಅಧ್ಯಯನ ಪ್ರವಾಸದಲ್ಲಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆಗೆ ಕಾರ್ಮಿಕ ಮಹಿಳೆಯೊಬ್ಬರು ಶಾಕ್ ನೀಡಿದ್ದಾರೆ.

ಯಾದಗಿರಿ [ಜು. 03]  ನಾನು ಮೋದಿಗೆ ವೋಟ್ ಹಾಕಿದ್ದೇನೆ ಎಂದು ಕಾರ್ಮಿಕ ಮಹಿಳೆಯ ಕಡೆಯಿಂದ ಥಟ್ಟನೆ ಬಂದ ಉತ್ತರಕ್ಕೆ ಸಚಿವ ದೇಶಪಾಂಡೆ ದಂಗಾಗಿ ಹೋಗಿದ್ದಾರೆ.

 ಸಚಿವ ದೇಶಪಾಂಡೆಯೆದುರು ಉದ್ಯೋಗ ಖಾತ್ರಿ ಕಾರ್ಮಿಕರರು ಮೋದಿ ಮಂತ್ರ ಪಠಿಸಿದ್ದಾರೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಸಚಿವ ದೇಶಪಾಂಡೆಗೆ ಇರಿಸುಮುರಿಸಿಗೆ ಒಳಗಾಗಬೇಕಾದ ಸನ್ನಿವೇಶ ನಿರ್ಮಾಣ ಆಯಿತು.

ಕೂಲಿ ಹೆಚ್ಚಳ ಮಾಡುವಂತೆ ಕಾರ್ಮಿಕರು ಸಚಿವರಿಗೆ ಕೇಳಿದ್ದ ಸಂದರ್ಭದಲ್ಲಿ, ಅದನ್ನು ಭಾರತ ಸರ್ಕಾರ ಅಂದರೆ ಮೋದಿ ಸರಕಾರ ಹೆಚ್ಚಳ ಮಾಡಬೇಕು ಎಂದು ಸಚಿವರು ಕಾರ್ಮಿಕರಿಗೆ ಪ್ರತಿಕ್ರಿಯಿಸಿದರು. ಈ ವೇಳೆ, 'ಮೋದಿ ಗೊತ್ತು' ಎಂದು ಕಾರ್ಮಿಕರಿಂದ ಪ್ರತಿಕ್ರಿಯೆಗಳು ಬಂದಾಗ ಅಚ್ಚರಿಗೊಳ್ಳಬೇಕಾದ ಸ್ಥಿತಿ ದೇಶಪಾಂಡೆ ಅವರದ್ದಾಗಿತ್ತು.

ಕ್ರೀಡಾ ಸಾಮಗ್ರಿಗಳನ್ನು ಎಸೆದ ದೇಶಪಾಂಡೆ

ರಾಜಕೀಯ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದೇನೆ. ಮೈತ್ರಿ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಮತ್ತೆ ಕೆಲವು ಶಾಸಕರು ರಾಜೀನಾಮೆ ಕೊಡುತ್ತಾರೆ ಅಂತಲ್ಲ ಎಂಬ ಕುರಿತು ಪ್ರಶ್ನೆಗೆ ಗರಂ  ಆಸ ಸಚಿವರು ಶಾಸಕ ಮಹಾದೇವು ಅವರ ಆರೋಪ ನಾನು ನಂಬುವುದಿಲ್ಲ.  ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ. ಪುರಾವೆ ಇಟ್ಟುಕೊಂಡು ಮಾತನಾಡಬೇಕು ಎಂದರು.

ಇನ್ನು ಸಚಿವ ಸ್ಥಾನದಿಂದ ದೇಶಪಾಂಡೆ ಅವರನ್ನು ಕೈ ಬಿಡಲಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ‘ನಾನು ಸಚಿವ ಸ್ಥಾನಕ್ಕಾಗಿ ಸಿಎಂ ಹತ್ತಿರ ಹೋಗಿ ಕೇಳಿಲ್ಲ’ ಎಂದು ಹೇಳಿ ಮುಂದೆ ನಡೆದರು.

click me!