ವಿಮ್ಸ್ ಆಸ್ಪತ್ರೆ ರೋಗಿಗಳ ಸಾವಿನ ಪ್ರಕರಣ: ಸಚಿವ ಶ್ರೀರಾಮುಲು-ಸುಧಾಕರ್ ಜಟಾಪಟಿ

By Govindaraj SFirst Published Sep 18, 2022, 10:01 PM IST
Highlights

ಬಡವರ ಪಾಲಿನ ಸಂಜೀವಿನಿಯಾಗಬೇಕಿದ್ದ ವಿಮ್ಸ್ ಆಸ್ಪತ್ರೆ ಇದೀಗ ಸಾವಿನ ಮನೆಯಾಗಿದೆ. ವಿಮ್ಸ್ ಆವರಣದಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದ ವೆಂಟಿಲೇಟರ್ ಆಫ್ ಆಗೋ ಮೂಲಕ ಮೂವರು ಸಾವನ್ನಪ್ಪಿರೋ ಪ್ರಕರಣ  ವತ್ತು ಮತ್ತೊಂದು ತಿರುವು ಪಡೆದುಕೊಂಡಿದೆ. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ 

ಬಳ್ಳಾರಿ (ಸೆ.18): ಬಡವರ ಪಾಲಿನ ಸಂಜೀವಿನಿಯಾಗಬೇಕಿದ್ದ ವಿಮ್ಸ್ ಆಸ್ಪತ್ರೆ ಇದೀಗ ಸಾವಿನ ಮನೆಯಾಗಿದೆ. ವಿಮ್ಸ್ ಆವರಣದಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದ ವೆಂಟಿಲೇಟರ್ ಆಫ್ ಆಗೋ ಮೂಲಕ ಮೂವರು ಸಾವನ್ನಪ್ಪಿರೋ ಪ್ರಕರಣ  ವತ್ತು ಮತ್ತೊಂದು ತಿರುವು ಪಡೆದುಕೊಂಡಿದೆ. ಹೌದು! ಘಟನೆಯಲ್ಲಿ ಶ್ರೀರಾಮುಲು ಮೂರು ಸಾವಾಗಿದೆ ಅಂದ್ರೇ, ಸಚಿವ ಸುಧಾಕರ ಎರಡೇ ಸಾವಾಗಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ವಿಮ್ಸ್‌ನಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರಷ್ಟೇ ಅನ್ನೋ ಸತ್ಯ ಇವತ್ತು ಕೂಡ ಹೊರಬಂದಿಲ್ಲ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವದ್ವಯರು: ನಿನ್ನೆ (ಶನಿವಾರ) ಶ್ರೀರಾಮುಲು ಇಂದು ಸಚಿವ ಸುಧಾಕರ್ ಅವರಿಂದ ವಿಮ್ಸ್ ಆಸ್ಪತ್ರೆಯಲ್ಲಿ ಸಭೆ ನಡೆಸಿ ಐಸಿಯು ವಾರ್ಡ್ ಪವರ್ ಕೇಬಲ್ ಬ್ಲಾಸ್ಟ್ ಆಗಿರೋ ಸ್ಥಳ ವಿಕ್ಷಣೆ ಮಾಡದ ಸಚಿವದ್ವಯರು ಇನ್ನೂ ಮುಗಿಯದ ಸಾವಿನ ಲೆಕ್ಕಾಚಾರ  ಹೌದು! ಕಳೆದ ಹದಿನಾಲ್ಕನೇ ತಾರಿಖು ನಡೆದ ಘಟನೆಯ ಸತ್ಯಾಸತ್ಯತೆ ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ ಅಂದ್ರು ತಪ್ಪಾಗಲಿಕ್ಕಿಲ್ಲ. ಯಾಕಂದ್ರೇ, ಮೊನ್ನೆ ಸರ್ಕಾರ ರಚನೆ ಮಾಡಿದ ತನಿಖಾ ತಂಡ ಬಂದು ಹೋಯ್ತು, ನಿನ್ನೆ ತಡರಾತ್ರಿವರೆಗೂ ಸಚಿವ ಶ್ರೀರಾಮುಲು ಸಭೆ ಮಾಡಿದ್ರೇ, ಇಂದು ಶ್ರೀರಾಮುಲು ಜೊತೆ ಸಚಿವ ಸುಧಾಕರ ವಿಮ್ಸ್ ಆಸ್ಪತ್ರೆಯಲ್ಲಿ ಸಭೆ ಜೊತೆ ಸ್ಥಳ ಪರಿಶೀಲನೆ ಮಾಡಿದರು.

Bengaluru: ಡ್ಯಾಗರ್, ಚಾಕು ಹಿಡಿದು ಸೆಲಬ್ರೇಷನ್: ಸ್ಥಳೀಯರು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!

ಆದ್ರೇ, ಎಲ್ಲರದ್ದೂ ಒಂದೇ ಸಿದ್ಧ ಉತ್ತರ ವಿದ್ಯುತ್ ಅವಘಡದಿಂದ ಸಾವಾಗಿಲ್ಲ. ಆದ್ರೇ, ಸಾವಿಗೆ ರೋಗಿಗಳ ಅನಾರೋಗ್ಯ ಮತ್ತು ಆಸ್ಪತ್ರೆಗೆ ಬರೋ ಮುಂಚೆಯೇ ವಿವಿಧ ರೀತಿಯಲ್ಲಿ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನುವದಾಗಿದೆ . ನಿನ್ನೆ ತಡರಾತ್ರಿ ಸಭೆ ಮಾಡಿದ ಶ್ರೀರಾಮುಲು ಕಿಡ್ನಿ ಫೇಲ್ಯೂವರ್ ಸೇರಿದಂತೆ ಇನ್ನಿತರ ಖಾಯಿಲೆಯಿಂದ ಮೌಲಾ ಹುಸೇನ್, ಹಾವು ಕಚ್ಚಿದ್ರಿಂದ ಚಿಟ್ಟೆಮ್ಮ ಸಾವನ್ನಪ್ಪಿದ್ದಾರೆ. ಆದ್ರೇ, ಚಂದ್ರಮ್ಮ ಎನ್ನುವವರರು ವೆಂಟಿಲೇಟರ್‌ನಲ್ಲಿ ಇರಲಿಲ್ಲ ಆದ್ರೇ ಬೇರೆ ಖಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ. ಹೀಗಾಗಿ ಮೂವರಿಗೂ ಮಾನವೀಯಯತೆ ಆಧಾರದಲ್ಲಿ ಇವರಿಗೆಲ್ಲ ಪರಿಹಾರ ಕೊಡ್ತಿದ್ದೇವೆ ಎಂದರು.

ಸಾವಿನ ಲೆಕ್ಕದಲ್ಲಿ ಮತ್ತೆ ಗೊಂದಲ: ಇನ್ನೂ ಇಂದು ವಿಮ್ಸ್ ಆಸ್ಪತ್ರೆಗೆ ಸಚಿವ ಶ್ರೀರಾಮುಲು ಜೊತೆ ಬಂದ ಆರೋಗ್ಯ ಸಚಿವ ಸುಧಾಕರ ಸುದೀರ್ಘವಾಗಿ ಮೂರು ಗಂಟೆಗಳ ಕಾಲ ಸಭೆ ಮಾಡಿದ್ರು. ಬಳಿಕ ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿರೋ ಸ್ಥಳ ಮತ್ತು ಐಸಿಯೂ ಸ್ಥಳಕ್ಕೆ ಭೇಟಿ ನೀಡಿದ್ರು. ನಂತರ ಮಾತನಾಡಿದ ಅವರು, ಎರಡೇ ಸಾವಾಗಿದೆ ಎನ್ನುವ ಮೂಲಕ ಮತ್ತೊಮ್ಮೆ ಗೊಂದಲ ಮೂಡಿಸಿದರು. ಅಂದು ಬೆಳಿಗ್ಗೆ ಎಂಟುವರೆಯಿಂದ ಒಂಭತ್ತುವರೆಯೊಳಗೆ ಮೌಲಾ ಹುಸೇನ್ ಮತ್ತು ಚಿಟ್ಟೆಮ್ಮೆ ಮಾತ್ರ ಸಾವನ್ನಪ್ಪಿದ್ದಾರೆ. ಉಳಿದದ್ದು, ಈ ಘಟನೆಗೆ ಸಂಬಂಧವೇ ಇಲ್ಲವೆಂದ್ರು. ಇನ್ನೂ ಸರ್ಕಾರದ ತನಿಖಾ ತಂಡ ಇನ್ನೂ ವರದಿ ನೀಡಿಲ್ಲ. ವರದಿಯಲ್ಲಿ ಯಾರು ತಪ್ಪು ಮಾಡಿದ್ದಾರೆಂದು ಉಲ್ಲೇಖ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆವೆಂದ್ರು.  ಅಲ್ಲದೇ ವಿಮ್ಸ್ ಆಸ್ಪತ್ರೆಯಲ್ಲಿ ನಿರ್ದೇಶಕರ ವಿರುದ್ಧ ನಡೆಯುತ್ತಿರೋ ಷಡ್ಯಂತ್ರ ಕುರಿತಂತೆ ಮಾತನಾಡಿದ ಶ್ರೀರಾಮುಲು ಈ ಬಗ್ಗೆ ತನಿಖೆಗೆ ಆದೇಶ ಮಾಡಿದ್ದೆವೆಂದರು.

ಟೋಯಿಂಗ್‌ ವ್ಯವಸ್ಥೆ ಮತ್ತೆ ಜಾರಿಗೊಳಿಸುವ ಪ್ರಸ್ತಾವ ಇಲ್ಲ: ಗೃಹ ಸಚಿವ

ನಿರ್ದೇಶಕರ ವಿರುದ್ಧ ಷಡ್ಯಂತ್ರ ಮಾಡಿದ್ರೇ ಕ್ರಮ: ಸಾವಿನ ಸಂಖ್ಯೆಯಲ್ಲಿ ಇನ್ನೂ ಕೂಡ ನಿಖರವಾದ ಮಾಹಿತಿ ನೀಡುವಲ್ಲಿ ಸಚಿವರಿಂದ ಹಿಡಿದು ವಿಮ್ಸ್ ಆಡಳಿತ ಮಂಡಳಿಯ ಅಧಿಕಾರಿಗಳು ವಿಫಲವಾಗಿರೋದು ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೇ ವಿಮ್ಸ್‌ನಲ್ಲಿ ನಡೆದ ಆಡಳಿತ ವೈಫಲ್ಯ ಇಡೀ ವ್ಯವಸ್ಥೆ ಪ್ರಶ್ನಿಸುವಂತೆ ಮಾಡಿದೆ.

click me!