ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ತಾಯಿ ವಿಧಿವಶ

By Suvarna News  |  First Published Aug 21, 2020, 8:51 AM IST

ಸಚಿವ ಬಿ. ಶ್ರೀರಾಮುಲು ತಾಯಿ ಹೊನ್ನೂರಮ್ಮ ನಿಧನ| ಬಳ್ಳಾರಿಯಲ್ಲಿ ಕೊನೆಯುಸಿರೆಳೆದ ಶ್ರೀರಾಮುಲು ತಾಯಿ| ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿ ನಿನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದ ಹೊನ್ನೂರಮ್ಮ| 


ಬಳ್ಳಾರಿ(ಆ.21): ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ(95) ಅವರು ನಿನ್ನೆ(ಗುರುವಾರ) ರಾತ್ರಿ 11:50 ಕ್ಕೆ ನಿಧನರಾಗಿದ್ದಾರೆ.

95 ವರ್ಷಗಳ ತುಂಬು ಜೀವನ ನಡೆಸಿದ್ದ ಹೊನ್ನೂರಮ್ಮ ಅವರು ಇತ್ತೀಚೆಗಷ್ಟೇ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೊನ್ನೂರಮ್ಮ ಅವರು ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿ ನಿನ್ನೆಯಷ್ಟೆ ಡಿಸ್ಚಾರ್ಜ್ ಆಗಿ ಬಳ್ಳಾರಿಯ ಮನೆಗೆ ಆಗಮಿಸಿದ್ದರು. 

Tap to resize

Latest Videos

ಸಚಿವ ಶ್ರೀರಾಮುಲು ತಾಯಿ, ಸೋದರನಿಗೂ ಕೊರೋನಾ ಪಾಸಿಟಿವ್‌

ಆದರೆ, ನಿನ್ನೆ ರಾತ್ರಿ ವಯೋಸಹಜ ಕಾರಣದಿಂದ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ರಾತ್ರಿ 11:50 ಕ್ಕೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 5:30 ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ.
 

click me!