ಬಸವನಬಾಗೇವಾಡಿ: ಮೂವರ ಪ್ರಾಣ ರಕ್ಷಿಸಿದ ಹೆಡ್‌ಕಾನ್‌ಸ್ಟೆಬಲ್‌ ಇಬ್ರಾಹಿಂ..!

By Kannadaprabha News  |  First Published Apr 18, 2023, 9:00 PM IST

ಮೂವರ ಪ್ರಾಣ ರಕ್ಷಿಸಿದ ಬಸವನಬಾಗೇವಾಡಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಇಬ್ರಾಹಿಂ ಅವಟಿ ಅವರ ಸಮಯಪ್ರಜ್ಞೆ ಹಾಗೂ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು, ಪೊಲೀಸ್‌ ಇಲಾಖೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಬಸವನಬಾಗೇವಾಡಿ(ಏ.18):  ಪಟ್ಟಣದಲ್ಲಿ ಟ್ರಾಫಿಕ್‌ ಕರ್ತವ್ಯದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಸಮಯಪ್ರಜ್ಞೆ ಮೆರದು ಮೂರೂ ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಬಸವೇಶ್ವರ ವೃತ್ತದಲ್ಲಿ ಕಡಿ ತುಂಬಿದ ಟಿಪ್ಪರ್‌ ಚಾಲಕನೊಬ್ಬ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಬಸ್‌ನಿಲ್ದಾಣದ ಕಡೆ ಹೋಗುತ್ತಿದ್ದನು. ಈ ಸಂದರ್ಭದಲ್ಲಿ ವೃದ್ಧ ದಂಪತಿ ಹಾಗೂ ಮಹಿಳೆಯೊಬ್ಬರು ರಭಸವಾಗಿ ಬರುತ್ತಿದ್ದ ಟಿಪ್ಪರ್‌ ವಾಹನವನ್ನು ಗಮನಿಸದೇ ರಸ್ತೆ ದಾಟುವ ಧಾವಂತದಲ್ಲಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್‌ ಇಬ್ರಾಹಿಂ ಅವಟಿ ಅವರು ಇದನ್ನು ಗಮನಿಸಿ ಕೂಡಲೇ ಮುನ್ನುಗ್ಗಿ ವೃದ್ಧ ದಂಪತಿ ಹಾಗೂ ಹೆಣ್ಣುಮಗಳು ಮೂವರನ್ನು ರಸ್ತೆ ಬದಿಗೆ ನೂಕಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. 

Tap to resize

Latest Videos

undefined

ಬಿಜೆಪಿ ಲಿಂಗಾಯತ ವಿರೋಧಿಯಲ್ಲ: ಶೆಟ್ಟರ್‌ ವಿರುದ್ಧ ಗುಡುಗಿದ ಬಸನಗೌಡ ಯತ್ನಾಳ

ಇದೇ ಸಂದರ್ಭದಲ್ಲಿ ಟಿಪ್ಪರ್‌ ವಾಹನದ ಹಿಂದಿನ ಟಯರ್‌ ಸ್ಫೋಟವಾಗಿ ಅದರ ಒಂದು ತುಣುಕು ಇಬ್ರಾಹಿಂ ಅವರ ಬಲಗಾಲಿಗೆ ಬಡಿದು ಅವರು ಗಾಯಗೊಂಡಿದ್ದಾರೆ. ನಂತರ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. 

ಘಟನೆ ಆಕಸ್ಮಿಕವಾದರೂ ಮೂವರ ಪ್ರಾಣ ರಕ್ಷಿಸಿದ ಬಸವನಬಾಗೇವಾಡಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಇಬ್ರಾಹಿಂ ಅವಟಿ ಅವರ ಸಮಯಪ್ರಜ್ಞೆ ಹಾಗೂ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು, ಪೊಲೀಸ್‌ ಇಲಾಖೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!