ಶಿರೂರು ಗುಡ್ಡ ಕುಸಿತ: ಕಣ್ಮರೆಯಾದ ವ್ಯಕ್ತಿಯ ಪುತ್ರಿಗೆ ನೌಕರಿ ಕೊಡಿಸಿದ ಕುಮಾರಸ್ವಾಮಿ

By Kannadaprabha News  |  First Published Sep 11, 2024, 6:15 AM IST

ಜಗನ್ನಾಥ ನಾಯ್ಕ ಅವರ ಪುತ್ರಿ ಕೃತಿಕಾಗೆ ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಚ್ಇಎಲ್ ಕಂಪನಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಈ ವಿಷಯವನ್ನು ಕುಮಾರಸ್ವಾಮಿ ಖಚಿತಪಡಿಸಿದ್ದು, ಕಂಪನಿ ಸಹ ನೌಕರಿ ಕೊಟ್ಟ ಬಗ್ಗೆ ದೃಢಪಡಿಸಿದೆ. 

ಕಾರವಾರ(ಸೆ.11):  ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ ಪುತ್ರಿಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೈಗಾದ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸಿದ್ದಾರೆ. 

ಜಗನ್ನಾಥ ನಾಯ್ಕ ಅವರ ಪುತ್ರಿ ಕೃತಿಕಾಗೆ ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಚ್ಇಎಲ್ ಕಂಪನಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಈ ವಿಷಯವನ್ನು ಕುಮಾರಸ್ವಾಮಿ ಖಚಿತಪಡಿಸಿದ್ದು, ಕಂಪನಿ ಸಹ ನೌಕರಿ ಕೊಟ್ಟ ಬಗ್ಗೆ ದೃಢಪಡಿಸಿದೆ. 

Tap to resize

Latest Videos

ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ಲಾರಿ ಜಾಕ್‌ ಪತ್ತೆ

ಶಿರೂರು ಗುಡ್ಡಕುಸಿತ ವೀಕ್ಷಣೆಗೆ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿದಾಗ ಜಗನ್ನಾಥ ನಾಯ್ಕ ಪುತ್ರಿಗೆ ಉದ್ಯೋಗದ ಭರವಸೆ ನೀಡಿದ್ದರು. ಜಗನ್ನಾಥ ನಾಯ್ಕ ಅವರ ಇನ್ನೊಬ್ಬ ಪುತ್ರಿಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯ ಸರ್ಕಾರ ಉದ್ಯೋಗ ಕಲ್ಪಿಸಿತ್ತು.

click me!