ಯಾದಗಿರಿಯಲ್ಲಿ ಶಾಲಾ‌ ಮಕ್ಕಳನ್ನ ಸಾಗಿಸುತ್ತಿದ್ದ ಟಂಟಂ ವಾಹನ ಪಲ್ಟಿ: ನಾಲ್ಕು ವಿದ್ಯಾರ್ಥಿಗಳಿಗೆ ಗಾಯ

Published : Sep 10, 2024, 11:23 AM IST
ಯಾದಗಿರಿಯಲ್ಲಿ ಶಾಲಾ‌ ಮಕ್ಕಳನ್ನ ಸಾಗಿಸುತ್ತಿದ್ದ ಟಂಟಂ ವಾಹನ ಪಲ್ಟಿ: ನಾಲ್ಕು ವಿದ್ಯಾರ್ಥಿಗಳಿಗೆ ಗಾಯ

ಸಾರಾಂಶ

ಶಾಲಾ‌ ಮಕ್ಕಳನ್ನ ಸಾಗಿಸುತ್ತಿದ್ದ ಟಂಟಂ ವಾಹನ ಪಲ್ಟಿಯಾದ ಪರಿಣಾಮ ನಾಲ್ಕು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ ನಗರದ ತಹಶಿಲ್ದಾರ ಕಚೇರಿ ಬಳಿ ನಡೆದಿದೆ. ವೇಗವಾಗಿ ಮುಂದೆ ಬೈಕ್ ಬಂದಿದ್ದರಿಂದ ನಿಯಂತ್ರಣ ತಪ್ಪಿದ ಟಂಟಂ ವಾಹನ ಪಲ್ಟಿಯಾಗಿದೆ.   

ಯಾದಗಿರಿ(ಸೆ.10): ಇತ್ತೀಚೆಗಷ್ಟೇ ರಾಯಚೂರು ಜಿಲ್ಲೆಯ ಮಾನ್ವಿ ಬಳಿ ನಡೆದ ಶಾಲಾ ಬಸ್‌ ದುರಂತದ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತಹುದೇ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಇಂದು(ಮಂಗಳವಾರ) ನಡೆದಿದೆ. 

ಶಾಲಾ‌ ಮಕ್ಕಳನ್ನ ಸಾಗಿಸುತ್ತಿದ್ದ ಟಂಟಂ ವಾಹನ ಪಲ್ಟಿಯಾದ ಪರಿಣಾಮ ನಾಲ್ಕು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ‌ ನಗರದ ತಹಶಿಲ್ದಾರ ಕಚೇರಿ ಬಳಿ ನಡೆದಿದೆ. ವೇಗವಾಗಿ ಮುಂದೆ ಬೈಕ್ ಬಂದಿದ್ದರಿಂದ ನಿಯಂತ್ರಣ ತಪ್ಪಿದ ಟಂಟಂ ವಾಹನ ಪಲ್ಟಿಯಾಗಿದೆ. 

ರಾಯಚೂರಲ್ಲಿ ಭೀಕರ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೇ ಇಬ್ಬರು ವಿದ್ಯಾರ್ಥಿಗಳು ದುರ್ಮರಣ!

ಗಾಯಗೊಂಡ ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಂತ್ರಣ ತಪ್ಪಿದ್ದಕ್ಕೆ ರಸ್ತೆಯ ಪಕ್ಕಕ್ಕೆ ಟಂಟಂ ವಾಹನ ಪಲ್ಟಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಶಹಾಪುರ‌ ನಗರದ ಟಂಟಂ ವಾಹನದಲ್ಲಿದ್ದ ಮಕ್ಕಳು ಡಿಡಿಯು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶಹಾಪುರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

PREV
Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕಿಸಿದ ವಿಪಕ್ಷಗಳಿಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ