ಹಾಸನ : ಜಿಲ್ಲೆಯಲ್ಲಿ 5268 ಬಿಪಿಎಲ್ ಕಾರ್ಡುಗಳ ರದ್ದು

Suvarna News   | Asianet News
Published : May 26, 2021, 12:55 PM IST
ಹಾಸನ : ಜಿಲ್ಲೆಯಲ್ಲಿ 5268 ಬಿಪಿಎಲ್ ಕಾರ್ಡುಗಳ ರದ್ದು

ಸಾರಾಂಶ

1 ಲಕ್ಷದ 20 ಸಾವಿರ ಆದಾಯದ ಮೇಲಿನ ಅಕ್ರಮ ಬಿಪಿಎಲ್ ಕಾರ್ಡುಗಳ ರದ್ದು ಕೊರೋನಾ ಸಂಕಷ್ಟದಲ್ಲೇ ಹಾಸನದಲ್ಲಿ ಬಿಪಿಎಲ್ ಕಾರ್ಡುಗಳ ರದ್ದು ಕಾರ್ಯ ಇದವರೆಗೆ 5268 ಅಕ್ರಮ ಬಿಪಿಎಲ್ ಕಾರ್ಡು ರದ್ದು

ಹಾಸನ (ಮೇ.26):  ಒಂದು ಕಡೆ ಕೊರೋನಾ ಮಹಾಮಾರಿ ಆವರಿಸಿ ಜಿಲ್ಲೆಯ ಜನರು ಸಂಕಷ್ಟದಲ್ಲಿ ಸಮಸ್ಯೆ ಎದುರಿಸುತ್ತಿರುವಾಗ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್  ಪಡೆದಿದ್ದವರ  ಕಾರ್ಡನ್ನು ರದ್ದು ಮಾಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಇದುವರೆಗೆ 5268 ಬಿಪಿಎಲ್ ಕಾರ್ಡುಗಳನ್ನು ರದ್ದುಮಾಡಲಾಗಿದೆ. 

ಕೊರೋನಾ ಎರಡನೆ ಅಲೆ ಬಂದ ಮೇಲೆ ಪ್ರತಿದಿನ ಸಾವು ನೋವುಗಳು ಹೆಚ್ಚಾಗುತ್ತಿದೆ.  ಇನ್ನು ಲಾಕ್‌ಡೌನ್ ಜಾರಿಗೆ ಬಂದು ಕೆಲಸಕ್ಕೂ ಬ್ರೇಕ್ ಬಿದ್ದಿದೆ.  ದುಡಿಮೆ ಇಲ್ಲದೆ ಜನರು ಒಂದು ಹೊತ್ತು ಊಟಕ್ಕು ಪರದಾಡುವ ಸ್ಥಿತಿ ಇರುವಾಗ ದಿಢೀರನೇ ಸಾವಿರಾರು ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಇನ್ನಷ್ಟು ಸಂಕಷ್ಟಕ್ಕೆ ನೂಕಿದಂತಾಗಿದೆ.

ಸಿಟಿ ಸ್ಕ್ಯಾನ್‌: ಬಡವರಿಗೆ 1500, ಇತರರಿಗೆ ಜಾಸ್ತಿ ...

ಇದೇ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಪುಟ್ಟಸ್ವಾಮಿ ಮಾತನಾಡಿ ವಾರ್ಷಿಕ 1 ಲಕ್ಷದ 20 ಸಾವಿರ ಆದಾಯದ ಒಳಗೆ ಇದ್ದವರ ಕಾರ್ಡ್ ರದ್ದಾಗುವುದಿಲ್ಲ. ಅದಕ್ಕಿಂತ ಮೀರಿದ ಆದಾಯವಿರುವವರ ಕಾರ್ಡ್ ರದ್ದಾಗಲಿದೆ. 

ಆದಾಯ ತೆರಿಗೆ ಕಟ್ಟುವ ಸುಮಾರು 3492 ಕಾರ್ಡನ್ನು ಜಿಲ್ಲೆಯಲ್ಲಿ ತಡೆ ಮಾಡಲಾಗಿದೆ. ಇನ್ನು ಆದಾಯ ದೃಢೀಕರಣದಲ್ಲಿ ಯಾರಾದರೂ 1 ಲಕ್ಷದ 20 ಸಾವಿರಕ್ಕಿಂತ ಹೆಚ್ಚು ನಮೂದಿಸಿದ್ದವರ 1776 ಕಾರ್ಡನ್ನು  ತೆಗೆದು ಎಪಿಎಲ್ ಕಾರ್ಡಿಗೆ ಸಿಗುವ ಸೌಲಭ್ಯ ಸಿಗಲಿದೆ ಎಂದರು.

ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡು ಇರುವವರು 4 ಲಕ್ಷ 53 ಸಾವಿರ ಜನರು. ಇವರಿಗೆ ಮೇ ತಿಂಗಳ ಪಡಿತರವನ್ನು  ಶೇಕಡಾ 78ರಷ್ಟು ಈಗಾಗಲೇ ಕೊಡಲಾಗಿದೆ. ಆಯಾ ತಿಂಗಳಲ್ಲಿ ತಿಂಗಳ ಅಂತ್ಯದವರೆಗೂ ಆಹಾರ ಧಾನ್ಯ ಕೊಡಬೇಕೆಂದು ಸೂಚಿಸಲಾಗಿದೆ ಎಂದರು. 

PREV
click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!