ರಾಜ್ಯ ಸರ್ಕಾರ ನೀಡಿರೋ ಪ್ಯಾಕೇಜ್ ಇನ್ಯಾರದೋ ಜೇಬು ಸೇರುತ್ತಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1600 ಕೋಟಿ ಪ್ಯಾಕೇಜ್ ಬಗ್ಗೆ ಎಚ್‌ಡಿಕೆ ಏನ್ ಹೇಳಿದ್ರು..? ಇಲ್ಲಿ ಓದಿ
ಬೆಂಗಳೂರು(ಮೇ 19): ರಾಜ್ಯ ಸರ್ಕಾರ ನೀಡಿರೋ ಪ್ಯಾಕೇಜ್ ಇನ್ಯಾರದೋ ಜೇಬು ಸೇರುತ್ತಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1600 ಕೋಟಿ ಪ್ಯಾಕೇಜ್ ಬಗ್ಗೆ ಎಚ್‌ಡಿಕೆ ಮಾತನಾಡಿದ್ದಾರೆ.
ರಾಜ್ಯ ಸರ್ಕಾರದ 1600 ಕೋಟಿ ರೂಪಾಯಿ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ 1600 ಕೋಟಿ ಪ್ಯಾಕೇಜ್ ಚಾಲಕರಿಗೆ ಘೋಷಿಸಿದ್ದಾರೆ. ಈ ಪ್ಯಾಕೇಜ್ ಗೆ ಕಾಂಗ್ರೆಸ್ ನಾಯಕರು ಕೂಡ ಹೊಗಳಿದ್ರು ಎಂದಿದ್ದಾರೆ.
undefined
ಲಾಲ್‌ಬಾಗ್ ಓಪನ್: ವಾಕಿಂಗ್‌ಗೆ ದೌಡಾಯಿಸಿದ ಉದ್ಯಾನನಗರಿಯ ಜನ
ರಾಜ್ಯದಲ್ಲಿ 7.5 ಲಕ್ಷ ಆಟೋ,ಕ್ಯಾಬ್ ಚಾಲಕರಿದ್ದಾರೆ. 20 ಕೋಟಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ತಲಾ 5 ಸಾವಿರದಂತೆ ಘೋಷಿಸಿದ್ದಾರೆ. 5 ಸಾವಿರದಂತೆ ಎಷ್ಟು ಮಂದಿಗೆ 20 ಕೋಟಿ ನೀಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಆಟೋ ಡ್ರೈವರ್ ಗಳಿಗೆ ಇವತ್ತು ಪ್ಯಾಸೆಂಜರ್ ಗಳಿಲ್ಲ. ಖಾಲಿ ಖಾಲಿ ಓಡ್ತಿವೆ ಆಟೋ ಅಂತ ಮಾಧ್ಯಮಗಳಲ್ಲೇ ಬರ್ತಿದೆ. ಆಟೋ ಚಾಲಕರಿಗೆ ಇನ್ನೇನು ಕೊಡ್ತೀರಾ..? ಇವತ್ತು ಬಿಎಂಟಿಸಿ,ಕೆಎಸ್ ಆರ್ ಟಿ ಚಾಲನೆ ನೀಡಿದ್ದೀರಾ..? ಬಸ್ ನಲ್ಲಿ ಸ್ಯಾನಿಟೈಸರ್ ಇಲ್ಲ ಅಂತ ಮಾದ್ಯಮಗಳೇ ಸುದ್ದಿಮಾಡ್ತಿವೆ. ಹಾಗದ್ರೆ ಕೊಟ್ಟ ಹಣ ಇನ್ಯಾರ ಜೇಬು ಸೇರ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.