ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿದ್ದು, ಐಶಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
ಮಡಿಕೇರಿ(ಜೂ.13): ಕೊಡಗು ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಆಗಮಿಸಿದ್ದು, ಐಶಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದಾರೆ.
ಶುಕ್ರವಾರ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದು, ಮೂರು ದಿನಗಳ ಕಾಲ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ರೆಸಾರ್ಟ್‌ಗಳನ್ನು ತೆರೆಯಲಾಗಿದ್ದು, ಕುಮಾರಸ್ವಾಮಿ ಅವರು ಲಾಕ್‌ಡೌನ್ ತೆರವು ಬಳಿಕ ಮೊದಲ ಅತಿಥಿಯಾಗಿದ್ದಾರೆ.
ತಾತನಿಗೆ ಮನತುಂಬಿದ ಅಭಿನಂದನೆಗಳು ಹೇಳಿದ ನಿಖಿಲ್ ಕುಮಾರಸ್ವಾಮಿ: ಕಾರಣ?
ಕುಮಾರಸ್ವಾಮಿ ಅವರೊಂದಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ, ಎಚ್‌ಡಿಕೆ ಸಹೋದರಿಯರಾದ ಅನುಸೂಯ, ಶೈಲಜಾ ಸೇರಿದಂತೆ ಹತ್ತು ಮಂದಿ ವಾಸ್ತವ್ಯಹೂಡಿದ್ದು, ಭಾನುವಾರ ಹಿಂತಿರುಗಲಿದ್ದಾರೆ ಎನ್ನಲಾಗಿದೆ.
ಎಲೆಕ್ಷನ್ ಇಲ್ಲದೇ ದೇವೇಗೌಡ ಸೇರಿದಂತೆ 4 ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆ
ನಿಖಿಲ್ ಅವರ ವಿವಾಹದ ಬಳಿಕ ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ಮಾರ್ಗವಾಗಿ ಈ ಖಾಸಗಿ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಖಾಸಗಿ ಭೇಟಿಯಾಗಿರುವುದರಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ಕುಮಾರಸ್ವಾಮಿ ನಿರಾಕರಿಸಿದ್ದಾರೆ. ರೆಸಾರ್ಟ್‌ನಲ್ಲಿ ಬ್ಯಾರಿಕೇಡ್‌ನೊಂದಿಗೆ ಬಿಗಿ ಪೊಲೀಸ್ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದೆ. 2019ರ ಮೇ ತಿಂಗಳಲ್ಲಿಯೂ ಕುಟುಂಬ ಸಮೇತರಾಗಿ ಮಡಿಕೇರಿಯ ಹೊರ ವಲಯದ ರೆಸಾರ್ಟ್‌ವೊಂದರಲ್ಲಿ ಎಚ್‌ಡಿಕೆ ತಂಗಿದ್ದರು.