Haveri; ಬಹುಮಾನ ಖಾಯಂ ಮಾಡಿಕೊಂಡಿದ್ದ ಬಲಾಡ್ಯ ಹೋರಿ 'ಹಠವಾದಿ' ಸಾವು, ಗ್ರಾಮಸ್ಥರ ಕಣ್ಣೀರು

By Suvarna NewsFirst Published Sep 23, 2022, 4:48 PM IST
Highlights

ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ  ನೀರವ ಮೌನ ಆವರಿಸಿತ್ತು. ಗ್ರಾಮಸ್ಥರಿಗೆ ತಮ್ಮ ನೆಚ್ಚಿನ ವ್ಯಕ್ತಿಯನ್ನೇ ಕಳೆದುಕೊಂಡ ಬೇಸರವಾಗಿತ್ತು. ಹೋದಲ್ಲೆಲ್ಲಾ ಬಹುಮಾನ ಖಾಯಂ ಮಾಡಿಕೊಂಡಿದ್ದ ಬಲಾಡ್ಯ ಹೋರಿ 'ಹಠವಾದಿ' ಮೃತಪಟ್ಟಿದ್ದೆ ಇದಕ್ಕೆ ಕಾರಣ.

ಹಾವೇರಿ (ಸೆ.23): ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ  ನೀರವ ಮೌನ ಆವರಿಸಿತ್ತು. ಗ್ರಾಮಸ್ಥರಿಗೆ ತಮ್ಮ ನೆಚ್ಚಿನ ವ್ಯಕ್ತಿಯನ್ನೇ ಕಳೆದುಕೊಂಡ ಬೇಸರವಾಗಿತ್ತು. ಅಲ್ಲದೇ ಸುರೇಶ ಯಲ್ಲಪ್ಪ ಸೋಮನಕಟ್ಟಿ ಅವರ ಮನೆಯವರಿಗಂತೂ ತಮ್ಮ ಮನೆಯ ಸದಸ್ಯನ ಕಳೆದುಕೊಂಡ ದುಃಖವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಸುರೇಶ್​ ಅವರು ಕಳೆದ ಹಲವು ವರ್ಷಗಳಿಂದ ಸಾಕಿಕೊಂಡು ಬಂದಿದ್ದ ನೆಚ್ಚಿನ ಕೊಬ್ಬರಿ ಹೋರಿ ಹಠವಾದಿ ಸಾವನ್ನಪ್ಪಿದ್ದು. ಸುರೇಶ್​ ಅವರ ಮನೆಯ ಸದಸ್ಯನಂತಿದ್ದ ಕೊಬ್ಬರಿ ಹೋರಿ ಹಠವಾದಿ ಮಂಗಳವಾರ ಅಸುನೀಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಹಠವಾದಿಗೆ ಬೀಳ್ಕೋಡುಗೆ ನೀಡಿದ್ದಾರೆ.ನೆಚ್ಚಿನ ಹಠವಾದಿ ಹೋರಿಗೆ ಕಣ್ಣೀರ ವಿದಾಯ ಹೇಳಿದ ಗ್ರಾಮಸ್ಥರು ದನ ಬೆದರಿಸುವ ಸ್ಪರ್ಧೆಯಲ್ಲಿ ಹಠವಾದಿ ಫೀಫಿ ಹೋರಿ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು.ಹಾವೇರಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ತನ್ನ ಸಲಹಿದ್ದ ಸುರೇಶ ಕುಟುಂಬಕ್ಕೆ ಬೈಕ್, ಟಿವಿ, ಚಿನ್ನದ ಉಂಗುರ, ಸೈಕಲ್ ಸೇರಿದಂತೆ ವಿವಿಧ ಬಹುಮಾನಗಳನ್ನ ಗೆದ್ದುಕೊಟ್ಟಿತ್ತು. ಅಖಾಡದಲ್ಲಿ ಹಠವಾದಿ ಎಂದರೇ ಸಾಕು ಹೋರಿ ಹಿಡಿಯುವ ಪೈಲ್ವಾನರ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು.

ಹಠವಾದಿ ಗತ್ತಿಗೆ ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದರು. ಹಠವಾದಿ ಅಖಾಡಕ್ಕಿಳಿದರೆ ಜಯಘೋಷ ಮುಗಿಲು ಮುಟ್ಟುತ್ತಿತ್ತು. ಜೊತೆಗೆ ಅಭಿಮಾನಿಗಳು ಹಠವಾದಿ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಪಡುತ್ತಿದ್ದರು. 22 ವರ್ಷದ ಹಠವಾದಿ ವಯೋಸಹಜ ಖಾಯಲೆಗಳಿಂದ ಸಾವನ್ನಪ್ಪಿದ್ದು, ಸುರೇಶ್​ ಅವರು ಹಿಂದೂ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನಡೆಸಿದ್ದಾರೆ.

ಕಳೆದ ಬುಧವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಹಠವಾದಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೂರ ದೂರದ ಊರುಗಳಿಂದ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ಹಠವಾದಿಯ ಅಂತಿಮ ದರ್ಶನ ಪಡೆದರು. ಪುಷ್ಪಾರ್ಪಣೆ ಮಾಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ವೇಗದ ಸರದಾರ ಈ ಹೋರಿ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿ!

ನಂತರ ನಡೆದ ಅಂತಿಮ ಯಾತ್ರೆ ಸುರೇಶ ಮನೆಯಿಂದ ಆರಂಭಗೊಂಡು ಚಿಕ್ಕಲಿಂಗದಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಹಠವಾದಿಯ ಶವವಿಟ್ಟು ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಅಭಿಮಾನಿಗಳು ಗ್ರಾಮಸ್ಥರು ಹಠವಾದಿಗೆ ಅಂತಿಮ ನಮನ ಸಲ್ಲಿಸಿದರು. ಪಟಾಕಿ ಸಿಡಿಸಿ ಅರ್ಕೆಸ್ಟ್ರಾದೊಂದಿಗೆ ಹಠವಾದಿಯ ಅಂತಿಮಯಾತ್ರೆ ನಡೆಸಲಾಯಿತು. ಬಳಿಕ ಸುರೇಶ ತಮ್ಮ ಜಮೀನಿನಲ್ಲಿ ಹಠವಾದಿಯನ್ನು ಮಣ್ಣು ಮಾಡಲಾಯಿತು.

Vijayapuraದಲ್ಲಿ ಬೆಚ್ಚಿಬೀಳಿಸುವ ಕರಿ ಹೋರಿಗಳ ಓಟ!

ತಲವಾರು ತೋರಿಸಿ ಜಾನುವಾರು ಕಳವು ಮಾಡಿದ್ದ ಮೂವರ ಬಂಧನ
ಉಳ್ಳಾಲ: ಮಾಡೂರು ಸೈಟ್‌ನಲ್ಲಿ ತಲವಾರು, ದೊಣ್ಣೆ ತೋರಿಸಿ ಜೀವಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಎಸಿಪಿ ದಿನಕರ್‌ ಶೆಟ್ಟಿಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸಂದೀಪ್‌ ಜಿ.ಎಸ್‌. ನೇತೃತ್ವದ ಪೊಲೀಸ್‌ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಟ್ವಾಳ ಕಸಬಾ ಗ್ರಾಮದ ಟಿಪ್ಪುನಗರದ ಜಾಬೀರ್‌ (24), ಫರಂಗಿಪೇಟೆ ಅಮ್ಮೆಮ್ಮಾರ್‌ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ ಮುಹಮ್ಮದ್‌ ಆರೀಫ್‌(30) ಬಂಧಿತರು.

ಮಾಡೂರು ಸೈಟ್‌ ನಿವಾಸಿ ಸತೀಶ್‌ ಎಂಬವರಿಗೆ ಸೇರಿದ 30,000 ರು. ಬೆಲೆಬಾಳುವ 4 ವರ್ಷ ಪ್ರಾಯದ ಹೋರಿ ಎತ್ತನ್ನು ಆರೋಪಿಗಳು ಕಳವು ನಡೆಸಿದ್ದರು. ಆ.22ರಂದು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿ ಕಟ್ಟಿಹಾಕಲಾಗಿದ್ದ ಹೋರಿಯನ್ನು ನಸುಕಿನ 4.25ಕ್ಕೆ ಇಬ್ಬರು ಆರೋಪಿಗಳು ಬಲಾತ್ಕಾರವಾಗಿ ಹಿಂಸಾತ್ಮಕವಾಗಿ ಎಳೆದೊಯ್ಯುವಾಗ ಜೋರಾಗಿ ಕೂಗುವುದನ್ನು ಗಮನಿಸಿ ಮಾಲಕ ಸತೀಶ್‌ ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು, ಅಡ್ಡಿಪಡಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್‌ ತಂಡ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆಯುತ್ತಿದೆ.

click me!