ನೂತನ ವಧು ಹಸೆಮಣೆಯಿಂದ ಸೀದಾ ಪರೀಕ್ಷಾ ಕೊಠಡಿಗೆ..!

Published : Nov 18, 2018, 04:14 PM IST
ನೂತನ ವಧು ಹಸೆಮಣೆಯಿಂದ ಸೀದಾ ಪರೀಕ್ಷಾ ಕೊಠಡಿಗೆ..!

ಸಾರಾಂಶ

ಮದುವೆ ನಂತ್ರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಕಾಮನ್​​​​.  ಆದ್ರೆ, ಹಾಸನದ ನವವಿವಾಹಿತೆ ಕಲ್ಯಾಣ ಮಂಟಪದಿಂದ ನೇರವಾಗಿ ಹೋಗಿದ್ದೇಲ್ಲಿಗೆ ಗೊತ್ತಾ?

ಹಾಸನ, [ನ.18]: ಮದುವೆ ನಂತ್ರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಕಾಮನ್​​​​. 

ಆದ್ರೆ, ನವವಿವಾಹಿತೆ ಕಲ್ಯಾಣ ಮಂಟಪದಿಂದ ನೇರವಾಗಿ ಎಕ್ಸಾಂ ಹಾಲ್​​​ ತೆರಳಿದ ಘಟನೆ ಇಂದು [ಭಾನುವಾರ] ಹಾಸನದಲ್ಲಿ ನಡೆದಿದೆ. 

ಮಾಂಗಲ್ಯಧಾರಣೆ ನಂತರ ಅಲಂಕಾರ ಸಮೇತ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಸ್ವಾತಿ, ಪರೀಕ್ಷೆ ಬರೆದ ನವವಿವಾಹಿತೆ. ಹಾಸನದ ಮಹಿಳಾ ಪದವಿ ಕಾಲೇಜು ಕೇಂದ್ರದಲ್ಲಿ ಸ್ವಾತಿ ಪರೀಕ್ಷೆ ಬರೆದ್ರು.  ಗಂಡ ಹಾಗೂ ಕುಟುಂಬಸ್ಥರು ಕಾಲೇಜು ಹೊರಗಡೆ ಕಾಯುತ್ತಿದ್ದರು. 

ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ನವೀನ್​​ ಮತ್ತು ಹಾಸನದ ಜಯನಗರ ಬಡಾವಣೆಯ ಶ್ವೇತಾ ಎಂಬುವವರ ಮದುವೆ ಇಂದು ನಿಶ್ಚಯವಾಗಿತ್ತು. 

ಇನ್ನು, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾಗೆ ಇಂದು ಬಿಕಾಂ ಪರೀಕ್ಷೆ ಬರೆಯಬೇಕಾಗಿತ್ತು. ಇತ್ತ ಮದುವೆಯ ಕಾರ್ಯಕ್ರಮಗಳ ಜೊತೆಗೆ ಶ್ವೇತಾ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ. 

PREV
click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ