ಪ್ರೀತಿಸಿ ವಿವಾಹವಾಗಿದ್ದಾಕೆ ಅನುಮಾನಾಸ್ಪದ ಸಾವು!

Published : May 13, 2019, 03:20 PM IST
ಪ್ರೀತಿಸಿ ವಿವಾಹವಾಗಿದ್ದಾಕೆ ಅನುಮಾನಾಸ್ಪದ ಸಾವು!

ಸಾರಾಂಶ

ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದ ಸಾವು| ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ ಆರೋಪ| ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹಾಸನ[ಮೇ.13]: ಮೂರೂವರೆ ವರ್ಷದ ಹಿಂದೆ ಪ್ರೀತಿಸಿದ್ದ ಹುಡುಗನನ್ನು ಮದುವೆಯಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಾಸನ ನಗರದ ಶಂಕರೀಪುರಂನಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. 

ಆದಿತ್ಯ ಎಂಬುವವರನ್ನು ಪ್ರೀತಿಸಿದ್ದ ಅಶ್ವಿನಿ ಮೂರೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಬ್ಯುಸಿನೆಸ್ ನಲ್ಲಿ ಲಾಸ್ ಆಗಿದ್ದ ಆದಿತ್ಯ ಅಶ್ವಿನಿಗೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕಾಗಿ ದಂಪತಿ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಇದೇ ಕಾರಣದಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಆದಿತ್ಯನೇ ಮಗಳ ಸಾವಿಗೆ ಕಾರಣ ಎಂದು ಅಶ್ವಿನಿ ತಂದೆ ಕೃಷ್ಣಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. 

ಹಾಸನ ಮಹಿಳಾ ಪೊಲೀಸ್​ ಠಾಣೆಯಲ್ಲಿ ದುರು ದಾಖಲಾಗಿದ್ದು, ಅಶ್ವಿನಿ ಆತ್ಮಹತ್ಯೆ ಬಳಿಕ ಆದಿತ್ಯ ಹಾಗೂ ಆತನ‌ ತಂದೆ ನಾಗೇಶ್ ನಾಪತ್ತೆಯಾಗಿದ್ದಾರೆ. 

PREV
click me!

Recommended Stories

ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್
ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ