'ಬಿಎಸ್‌ವೈ ಕೈ ಬಿಟ್ಟರೆ ಬಿಜೆಪಿ ಎದುರಾಗಲಿದೆ ಬಹುದೊಡ್ಡ ನಷ್ಟ'

Kannadaprabha News   | Asianet News
Published : Jul 22, 2021, 11:31 AM IST
'ಬಿಎಸ್‌ವೈ ಕೈ ಬಿಟ್ಟರೆ ಬಿಜೆಪಿ ಎದುರಾಗಲಿದೆ ಬಹುದೊಡ್ಡ ನಷ್ಟ'

ಸಾರಾಂಶ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇನ್ನು ಎರಡು ವರ್ಷಗಳ ಕಾಲ ಮುಂದುವರೆಯಬೇಕು ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರ ಆಗ್ರಹ

 ಅರಸೀಕೆರೆ (ಜು.22): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇನ್ನು ಎರಡು ವರ್ಷಗಳ ಕಾಲ ಮುಂದುವರೆಯಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಬಿ ಗುರುಸಿದ್ದೇಶ್ ಅಗ್ರಹಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆಂಬ ವದಂತಿ ಹರಡಿದ್ದು ದಕ್ಷಿಣ ಭಾರತದಲ್ಲೇ ಬಿಜೆಪುಯನ್ನು ಅಧಿಕಾರಕ್ಕೆ ತಂದು 4 ಭಾರಿ ಸಿಎಂ ಆದ ವೇಳೆಯಲ್ಲಿ  ಉತ್ತಮ ಆಡಳಿತ ನಡೆಸಿದ್ದು ವೀರಶೈವ ಸೇರಿದಂತೆ ಅನೆಕ ಸಮಾಜಗಳು ಬಿಜೆಪಿಯನ್ನು ಬೆಂಬಲಿಸಿರುವ ಹಿನ್ನೆಲೆಯಲ್ಲಿ  ಅತ್ಯುತ್ತಮವಾದ ಆಡಳಿತ ನೀಡಿ ಕೋವಿಡ್ ಅತಿವೃಷ್ಠಿಅನಾವೃಷ್ಟಿ ಸಮದರ್ಭವನ್ನು ಸಮರ್ಥವಾಗಿ ಎದುರಿಸಿದ್ದಾರೆ. 

'ಅಧಿಕಾರಕ್ಕೆ ಬಂದ ದಿನದಿಂದಲೂ ಹೈಕಮಾಂಡ್‌ ಬಿಎಸ್‌ವೈಗೆ ಬೆಂಬಲ ನೀಡಲಿಲ್ಲ'

ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಅವಧಿ ಮುಗಿಯುವವರೆಗೆ ಅವರಿಗೆ ಸಿಎಂ ಅಗಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ವಿನಂತಿಸಿದರು. 

ಸಂಕೋಡನಹಳ್ಳಿ ಶೇಖರ್ ಮಾತನಾಡಿ ಕೋರೊನಾದಂತ ಮಾರಣಾಂತಿಕ ಸೋಂಕನ್ನು  ಎದುರಿಸುತ್ತಿರುವ ಸಂದರ್ಭದಲ್ಲ ನಾಯಕತ್ವ ಬದಲಾವಣೆ ಅಪ್ರಸ್ತುತ. ಯಡಿಯೂರಪ್ಪನವರನ್ನು ಕಡೆಗಣಿಸಿದೆ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ ಎಂದರು. 

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ