ಬಿಜೆಪಿ ಸರ್ಕಾರ ಆಡಳಿತಕ್ಕೆ ಬೇಸತ್ತ ಜನ: ಶಾಸಕ ತುಕಾರಾಂ

Kannadaprabha News   | Asianet News
Published : Jul 22, 2021, 09:42 AM IST
ಬಿಜೆಪಿ ಸರ್ಕಾರ ಆಡಳಿತಕ್ಕೆ ಬೇಸತ್ತ ಜನ: ಶಾಸಕ ತುಕಾರಾಂ

ಸಾರಾಂಶ

* ಒಗ್ಗಟ್ಟಿನಿಂದ ಸೈನಿಕರ ತರಹ ಕೆಲಸ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ  * ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೇವಲ ಪ್ರಣಾಳಿಕೆ ಸರ್ಕಾರ  * ಕರ್ನಾಟಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ   

ಹರಪನಹಳ್ಳಿ(ಜು.22): ಬಿಜೆಪಿ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಬರುವ ಚುನಾವಣೆಗೆ ಹರಪನಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಒಳ್ಳೆಯ ಅಭ್ಯರ್ಥಿಯನ್ನು ಹೈಕಮಾಂಡ್‌ ಕೊಡುತ್ತದೆ. ಎಲ್ಲರೂ ಬೆಂಬಲಿಸಿ ಎಂದು ಸಂಡೂರು ಕಾಂಗ್ರೆಸ್‌ ಶಾಸಕ ತುಕಾರಾಂ ಮನವಿ ಮಾಡಿದ್ದಾರೆ. 

ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿ ಸಂತೋಷ ಲಾಡ್‌ ಅವರು ಬಡವರಿಗೆ ಕೊಡಮಾಡಿರುವ ಪ್ರತಿದಿನ ಉಚಿತ ಉಪಾಹಾರ ಮತ್ತು ಊಟದ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಒಗ್ಗಟ್ಟಿನಿಂದ ಸೈನಿಕರ ತರಹ ಕೆಲಸ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಎಂದ ಅವರು, ಇಲ್ಲಿಯ ಅಭಿವೃದ್ಧಿ ಕಾರ್ಯಗಳಿಗೆ ಸಂಡೂರಿನಿಂದಲೂ ಸಹಾಯಹಸ್ತ ಇರುತ್ತದೆ ಎಂದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೇವಲ ಪ್ರಣಾಳಿಕೆ ಸರ್ಕಾರ ಎಂದು ಟೀಕಿಸಿದರು. ದೇಶದಲ್ಲಿ 44 ಲಕ್ಷ ಜನರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಆದರೆ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತ ಕಾಪಾಡುವಲ್ಲಿ ವಿಫಲಗೊಂಡಿವೆ ಎಂದು ದೂರಿದರು.

'ಹಣ ಕೊಡಿ ಅಂದ್ರೆ ಬರಬೇಕಾದ್ದು ಬರಲಿ ಅಂತಾರಂತೆ ಈಶ್ವರಪ್ಪ'

ಮಾಜಿ ಸಚಿವ ಸಂತೋಷ ಲಾಡ್‌ ಮಾತನಾಡಿ, ಜಿಲ್ಲೆ ಸೇರಿದಂತೆ ಕರ್ನಾಟಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದ ಅವರು, ಈ ಭಾಗದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠವಾಗಿ ಬೆಳೆಸುತ್ತೇವೆ ಎಂದರು.

ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಂ. ಶಿವಯೋಗಿ, ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ. ಶುಭಾಶ್ಚಂದ್ರ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಆಶಾಲತಾ, ತಾಲೂಕು ಅಧ್ಯಕ್ಷೆ ಪುಷ್ಪಾ ದಿವಾಕರ, ಯುವ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಮತ್ತೂರು, ಯುವ ಮುಖಂಡರಾದ ಇರ್ಫಾನ್‌ ಮುದುಗಲ್‌, ಶಿವಕುಮಾರನಾಯ್ಕ, ಚಿಗಟೇರಿ ಯುವ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ, ತೆಲಿಗಿ ಉಮಾಕಾಂತ, ತೆಲಿಗಿ ಮಂಜುನಾಥ, ಜಿಷಾನ್‌, ಪುರಸಭಾ ಸದಸ್ಯ ಲಾಟಿ ದಾದಾಪೀರ, ಹೊಸಪೇಟೆ ಬ್ಲಾಕ್‌ ಅಧ್ಯಕ್ಷ ಇಮಾಮ್‌ ಯಾಜಿ ಇತರರು ಪಾಲ್ಗೊಂಡಿದ್ದರು.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ