ಪ್ರತಿಭಟನೆ ವೇಳೆ ಅನ್ನದಾತನಿಗೆ ಜೈಕಾರ ಕೂಗಿದ ಹಾಸನ ಎಸ್ಪಿ

Published : Feb 07, 2021, 07:55 AM ISTUpdated : Feb 07, 2021, 08:05 AM IST
ಪ್ರತಿಭಟನೆ ವೇಳೆ ಅನ್ನದಾತನಿಗೆ ಜೈಕಾರ  ಕೂಗಿದ ಹಾಸನ ಎಸ್ಪಿ

ಸಾರಾಂಶ

ರೈತ ಪ್ರತಿಭಟನೆ ಸಂದರ್ಭದಲ್ಲಿ ಎಸ್ಪಿ ಶ್ರೀನಿವಾಸಗೌಡರೂ ‘ಅನ್ನದಾತನಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಅವರ ಜೊತೆಯಿದ್ದ ಪೊಲೀಸ್‌ ಸಿಬ್ಬಂದಿಯೂ ಇದಕ್ಕೆ ದನಿಗೂಡಿಸಿದರು.

ಹಾಸನ (ಫೆ.07): ರಸ್ತೆ ತಡೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವೊಲಿಸುವ ವೇಳೆ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರು ಅನ್ನದಾತನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. 

ಹೆಚ್ಚುಕಾಲ ಹೆಚ್ಚು ಕಾಲ ರಸ್ತೆತಡೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಬೇಗನೆ ನಿಲ್ಲಿಸುವಂತೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು. 

ರೈತ ಹೋರಾಟದಲ್ಲಿ ವಿದೇಶಿ ಪಿತೂರಿ ಬಟಾ ಬಯಲು; ತನಿಖಾ ಸಂಸ್ಥೆಗಳಿಂದ ಮಾಹಿತಿ! ...

ಆದರೆ ರೈತ ಸಂಘದ ಕಾರ್ಯಕರ್ತರು ಮಧ್ಯಾಹ್ನ ರಸ್ತೆ ಮಧ್ಯೆಯೇ ಕುಳಿತು ಮುದ್ದೆ ಊಟ ಮಾಡಿದ ನಂತರವೇ ತಮ್ಮ ಹೋರಾಟ ನಿಲ್ಲಿಸುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಎಸ್ಪಿ ಶ್ರೀನಿವಾಸಗೌಡರೂ ‘ಅನ್ನದಾತನಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಅವರ ಜೊತೆಯಿದ್ದ ಪೊಲೀಸ್‌ ಸಿಬ್ಬಂದಿಯೂ ಇದಕ್ಕೆ ದನಿಗೂಡಿಸಿದರು.

PREV
click me!

Recommended Stories

ಜೆಪ್ಟೋ, ಬ್ಲಿಂಕಿಟ್ ಬೆನ್ನಲ್ಲೇ 'ಜೋಮ್ಯಾಟೋ ಹೈಪರ್‌ಪ್ಯೂರ್' ಗೋದಾಮು ಮೇಲೆಯೂ ದಾಳಿ! 146 kg ಚಿಕನ್ ಸೇರಿ 40 ಆಹಾರ ಧಾನ್ಯ ಜಪ್ತಿ!
Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್‌ನ್ಯೂಸ್