ಮರಾಠಿ ಮಾತನಾಡುವಂತೆ ತುಮಕೂರು ಚಾಲಕನ ಬೆತ್ತಲೆಗೊಳಿಸಿ ಹಲ್ಲೆ

Kannadaprabha News   | Asianet News
Published : Feb 07, 2021, 07:34 AM ISTUpdated : Feb 07, 2021, 07:48 AM IST
ಮರಾಠಿ ಮಾತನಾಡುವಂತೆ ತುಮಕೂರು ಚಾಲಕನ ಬೆತ್ತಲೆಗೊಳಿಸಿ ಹಲ್ಲೆ

ಸಾರಾಂಶ

ತುಮಕೂರಿನ ಲಾರಿ ಚಾಲಕರೋರ್ವರನ್ನು ಅಡ್ಡಗಟ್ಟಿ ಥಳಿಸಿ ಮರಾಠಿ ಮಾತನಾಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಆತನ ಮೇಲೆ ಮನಸಿಗೆ ಬಂದಂತೆ ಹಲ್ಲೆ ಮಾಡಿದ್ದಾರೆ. 

ಬೆಳಗಾವಿ (ಫೆ.07):  ಕರ್ನಾಟಕದ ಲಾರಿ ಚಾಲಕನಿಗೆ ಮರಾಠಿ ಮಾತನಾಡುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಸಾತಾರಾ ಟೋಲ್  ಬಳಿ ಶುಕ್ರವಾರ ರಾತ್ರಿ ನಡೆದಿದೆ.

 ತುಮಕೂರು ತಾಲೂಕಿನ ಶಿರಾ ಲಾರಿ ಚಾಲಕ ಗೋವಿಂದ ಎಂಬುವರು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ, ಲಾರಿಯನ್ನು ಅಡ್ಡಗಟ್ಟಿದ ಮಹಾರಾಷ್ಟ್ರ ಪುಂಡರು ಮರಾಠಿ ಮಾತನಾಡುವಂತೆ ಗೋವಿಂದ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ಅವರನ್ನು ಅರೆ ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ್ದಾರೆ.

ಉದ್ಧವ್ ಉದ್ಧಟತನಕ್ಕೆ ಮರಾಠಿಗರಿಂದಲೇ ವಿರೋಧ: ಮೊದ್ಲು ಮಹಾರಾಷ್ಟ್ರದ ಸಮಸ್ಯೆ ಪರಿಹರಿಸಿ ಎಂದ ಜನ ..

 ಈ ಕುರಿತಂತೆ ಚಾಲಕ ಗೋವಿಂದ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ. ಈಗ ಪ್ರಕರಣ ಕುರಿತಂತೆ ಬೆಳಗಾವಿ ಪೊಲೀಸರು ಮಾಹಿತಿ ಪಡೆದಿದ್ದು, ಚಾಲಕನನ್ನು ಬೆಳಗಾವಿಗೆ ಕರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಜೊತೆಗೆ ಬೆಂಗಳೂರಿನ ಲಾರಿ ಮಾಲೀಕ ಕುಮಾರ ಎಂಬುವವರು ಪೊಲೀಸ್‌ ಜೊತೆಗೆ ಮಾತನಾಡಿದ್ದಾರೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ