ದೈಹಿಕ ಪರೀಕ್ಷೆ, ಹೈಜಂಪ್ ಮಾಡಿ ಅಭ್ಯರ್ಥಿಗಳ ಹುರಿದುಂಬಿಸಿದ ಎಸ್ಪಿ!

Published : Mar 19, 2020, 11:39 AM ISTUpdated : Mar 19, 2020, 11:59 AM IST
ದೈಹಿಕ ಪರೀಕ್ಷೆ, ಹೈಜಂಪ್ ಮಾಡಿ ಅಭ್ಯರ್ಥಿಗಳ ಹುರಿದುಂಬಿಸಿದ ಎಸ್ಪಿ!

ಸಾರಾಂಶ

ಎಸ್ಪಿ ಹೈಜಂಪ್‌ಗೆ ಪೊಲೀಸರು ಫಿದಾ| ಪೊಲೀಸ್‌ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ 5 ಅಡಿ ಹಾರಿ ತೋರಿಸಿದ ಹಾಸನ ಎಸ್ಪಿ ಶ್ರೀನಿವಾಸಗೌಡ| ಸಮವಸ್ತ್ರದಲ್ಲೇ ಎತ್ತರ ಎತ್ತರ ಜಿಗಿತ

ಹಾಸನ[ಮಾ.19]: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾನ್‌ ಸ್ಟೇಬಲ್‌ಗಳ ನೇಮಕಾತಿಯ ಅಂತಿಮ ಘಟ್ಟವಾದ ದೈಹಿಕ ಪರೀಕ್ಷೆ ವೇಳೆ ಸ್ವತಃ ಎಸ್ಪಿಯವರೇ ಧರಿಸಿದ್ದ ಸಮವಸ್ತ್ರದಲ್ಲೇ ಹೈಜಂಪ್‌ ಮಾಡಿದರು.

ಬೆಳಗ್ಗೆ ದೈಹಿಕ ಪರೀಕ್ಷೆಗೆ ನೂರಾರು ಮಂದಿ ಪುರುಷರು ಮತ್ತು ಮಹಿಳೆಯರು ಆಗಮಿಸಿ, ರನ್ನಿಂಗ್‌ ರೇಸ್‌, ಗುಂಡು ಎಸೆತ, ಹೈಜಂಪ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡರು, ಕ್ರೀಡಾಂಗಣದಲ್ಲಿ ಹಾಕಲಾಗಿದ್ದ 5 ಅಡಿ ಎತ್ತರ ಜಿಗಿತವನ್ನು ತಾವೆ ಜಿಗಿಯುವ ಮೂಲಕ ಪೊಲೀಸ್‌ ಆಯ್ಕೆಗಾಗಿ ಪಾಲ್ಗೊಂಡಿದ್ದವರಿಗೆ ಹುರಿದುಂಬಿಸಿದರು. ಎಸ್ಪಿ ಸ್ಪೂರ್ತಿ ಫಿದಾ ಆದ ಪೊಲೀಸ್ ಅಧಿಕಾರಿಗಳು ಹಾಗೂ ದೈಹಿಕ ಪರೀಕ್ಷೆಗೆ ಬಂದವರು ಚಪ್ಪಾಳೆ ತಟ್ಟಿಅವರನ್ನು ಗೌರವ ಸಲ್ಲಿಸಿದರು.

ಮದುವೆಯಾಗಿ 30 ವರ್ಷದ ಆದ್ಮೇಲೆ ಹೆಂಡ್ತಿ ಹಂಗೆ ಎಂದು ಕೊಂದು ಸೀದಾ ಠಾಣೆಗೆ ಬಂದ ಗಂಡ !

ಸ್ಪೂರ್ತಿ ತುಂಬಲು ಜಂಪ್‌ ಮಾಡಿದೆ

ದೈಹಿಕ ಪರೀಕ್ಷೆಗೆ ಬಂದಿದ್ದವರು ಸರ್‌.. 5 ಅಡಿ ಎತ್ತರ ಜಾಸ್ತಿ ಆಯಿತು ಎಂದು ಹೇಳುತ್ತಿದ್ದರು. ಆಗ ನಾನೇ ಹೈಜಂಪ್‌ ಮಾಡಿ ಅವರಿಗೆ ತೋರಿಸುವ ಮೂಲಕ ಅವರಲ್ಲಿ ಸ್ಪೂರ್ತಿ ತುಂಬುವ ಯತ್ನ ಮಾಡಿದೆ ಅಷ್ಟೇ.!

- ಶ್ರೀನಿವಾಸಗೌಡ, ಎಸ್ಪಿ

PREV
click me!

Recommended Stories

ಅಜೀಂ ಪ್ರೇಮ್‌ಜಿ ಸಂಸ್ಥೆಯಿಂದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ₹4 ಸಾವಿರ ಕೋಟಿ
Government Hospital: ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು!