ಮಡಿಕೇರಿಯಲ್ಲಿ ಮೊತ್ತೊಬ್ಬ ವ್ಯಕ್ತಿಗೆ ಕೊರೋನಾ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ

By Suvarna News  |  First Published Mar 19, 2020, 11:29 AM IST

ಕೊರೋನಾ ಭೀತಿ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಮಡಿಕೇರಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅಭುದಾಬಿಯಿಂದ ಬಂದಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.


ಮಡಿಕೇರಿ(ಮಾ.9): ಕೊರೋನಾ ಭೀತಿ ಹೆಚ್ಚಾಗುತ್ತಿರುವ ಬೆನ್ನಲ್ಲಿಯೇ ಮಡಿಕೇರಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅಭುದಾಬಿಯಿಂದ ಬಂದಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಕೊಡಗಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅಭುದಾಬಿಯಿಂದ ಬಂದಿದ್ದ ಶಂಕಿತನಿಗೆ ಸೋಂಕು ದೃಢವಾಗಿದೆ. ಮಡಿಕೇರಿಯಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ವರದಿಯಿಂದ ಕೇಸ್ ಕನ್ಫರ್ಮ್ ಆಗಿದೆ.

Latest Videos

ಮಡಿಕೇರಿ: ಮೆಡಿಕಲ್‌ಗಳಲ್ಲಿ ಮಾಸ್ಕ್ ಮಾರಾಟ ಸ್ಥಗಿತ

ಆರೋಗ್ಯ ಇಲಾಖೆಯಿಂದ ವರದಿ ಪ್ರಕಟವಾಗಿದ್ದು, ಕೊಡಗಿನ ಜನತೆ ಕಟ್ಟೆಚ್ಚರದಿಂದ ಇರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸೋಂಕಿತ ವ್ಯಕ್ತಿ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಸೋಂಕಿತ ವ್ಯಕ್ತಿಯ ಮಾಹಿತಿಗಾಗಿ ಜಿಲ್ಲಾಡಳಿತ ಪರದಾಡುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ವೈದ್ಯರ ನಿಗಾದಲ್ಲಿದ್ದು,  ನಾಲ್ವರಲ್ಲಿ ‌ಯಾರಿಗೆ ಸೋಂಕು ಇದೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಗೊಂದಲವಿದೆ.

"

click me!