ಹಾಸನದ ಮಲೆನಾಡಿಗೆ ಆನೆಗಳ ಆತಂಕ, ಬಯಲು ಸೀಮೆಗೆ ಚಿರತೆಗಳ ಕಾಟ; ಹಾಡಹಗಲೇ ಜನರಿಗೆ ಸಂಕಟ!

Published : Nov 27, 2026, 02:22 PM IST
Hassan elephant and Leopard

ಸಾರಾಂಶ

ಹಾಸನ ಜಿಲ್ಲೆಯ ನಿಡುಡಿ ಗ್ರಾಮದಲ್ಲಿ ಹಾಡಹಗಲೇ ರಸ್ತೆಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಈಗಾಗಲೇ ಹಲವು ಸಾಕುಪ್ರಾಣಿಗಳನ್ನು ಬಲಿಪಡೆದಿರುವ ಈ ಚಿರತೆಗಳನ್ನು ತಕ್ಷಣ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಹಾಸನ (ನ.27): ಹಾಸನ ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರಿದ್ದು, ಒಂದು ಕಡೆ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಮುಂದುವರಿದಿದ್ದರೆ, ಮತ್ತೊಂದು ಕಡೆ ಬಯಲುಸೀಮೆ ಭಾಗದಲ್ಲಿ ಚಿರತೆಗಳ ಆತಂಕ ಹೆಚ್ಚಾಗಿದೆ. ಹಾಸನ ತಾಲೂಕಿನ ನಿಡುಡಿ ಗ್ರಾಮದಲ್ಲಿ ಹಾಡಹಗಲೇ ರಸ್ತೆಯಲ್ಲಿಯೇ ಎರಡು ಚಿರತೆಗಳು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ರಸ್ತೆಯಲ್ಲಿ ಕುಳಿತ ಚಿರತೆಗಳ ವಿಡಿಯೋ ಸೆರೆ

ನಿಡುಡಿ ಗ್ರಾಮದ ಓಡಾಡುವ ರಸ್ತೆಯಲ್ಲಿಯೇ ಜೋಡಿ ಚಿರತೆಗಳು ಆರಾಮವಾಗಿ ಕುಳಿತಿದ್ದ ದೃಶ್ಯ ಕಂಡುಬಂದಿದೆ. ಕಾರಿನಲ್ಲಿ ತೆರಳುತ್ತಿದ್ದ ವಾಹನ ಸವಾರರಿಗೆ ರಸ್ತೆಯಲ್ಲಿ ಕುಳಿತಿದ್ದ ಚಿರತೆಗಳು ಎದುರಾಗಿದ್ದು, ಸವಾರರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಹಗಲು ಹೊತ್ತಿನಲ್ಲೇ ಜನಸಂಚಾರವಿರುವ ರಸ್ತೆಯಲ್ಲಿ ಚಿರತೆಗಳು ಕಾಣಿಸಿಕೊಂಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ.

ಸಾಕುಪ್ರಾಣಿಗಳ ಮೇಲೆ ದಾಳಿ, ಸೆರೆಗೆ ಆಗ್ರಹ

ಹೆಚ್ಚಿದ ಚಿರತೆ ಕಾಟ: ನಿಡುಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಜನರು ಓಡಾಡಲು ಹಿಂಜರಿಯುವಂತಾಗಿದೆ.

ಸಾಕುಪ್ರಾಣಿಗಳ ಬಲಿ: ಈಗಾಗಲೇ ಹಸು ಮತ್ತು ನಾಯಿ ಸೇರಿದಂತೆ ಹಲವು ಸಾಕುಪ್ರಾಣಿಗಳನ್ನು ಚಿರತೆಗಳು ಕೊಂದು ಹಾಕಿವೆ.

ಅರಣ್ಯ ಇಲಾಖೆಗೆ ಒತ್ತಾಯ: ಜನರು ಮತ್ತು ಸಾಕುಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಕರ್ನಾಟಕಕ್ಕೆ, ಇಲ್ಲಿನ ಸಂಸ್ಕೃತಿಗೆ ಕಂಟಕವಾದರಾ ಕೇರಳಿಗರು? ಪ್ರತಾಪ್ ಸಿಂಹ ಸ್ಫೋಟಕ ಹೇಳಿಕೆ!
ಹಿಟ್ನಾಳ ಕುಟುಂಬದ ಅದ್ದೂರಿ ಮದುವೆಗೆ ಜನಸಾಗರ, ಪಕ್ಷಬೇಧ ಮರೆತು ಬಂದ ರಾಜಕೀಯ ನಾಯಕರು, ಆರ್‌ಕೆ ಸಂಗೀತಕ್ಕೆ ಜನರ ಕೇಕೆ!