ಹಳ್ಳ ಹಿಡಿತಾ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ?

By Ravi JanekalFirst Published Nov 17, 2022, 1:33 PM IST
Highlights
  • ಹಳ್ಳ ಹಿಡಿಯಿತೇ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ?
  • ಬಳ್ಳಾರಿಯಲ್ಲಿ ಬೆಳೆವಿಮೆ ಹೆಸರಲ್ಲಿ ನಡೆದಿದೆಯಾ ದೊಡ್ಡ ಮಟ್ಟದ ಫ್ರಾಡ್
  • ಕೃಷಿ ವಿಮೆಗೆ ಹಣ ಕಟ್ಟಿದ್ದರೂ ಫ್ಯೂಚರ್ ಜನರಲ್ ಕಂಪನಿಯಿಂದ ವಂಚನೆ

ವರದಿ : ನರಸಿಂಹ ಮೂರ್ತಿ ಕುಲದ

ಬಳ್ಳಾರಿ (ನ.17) : ಆ ರೈತರು ಸಾಲ ಸೋಲ ಮಾಡಿ ಕಳೆದ ವರ್ಷ ಸಾವಿರಾರು ಎಕರೆ ಪ್ರದೇಶದಲ್ಲಿ ಕಡಲೆ ಬೆಳೆ ಬೆಳೆದಿದ್ರು. ಆದರೆ ಅತಿಯಾದ ಮಳೆ ಮತ್ತು (ಕುಂಕುಮ ರೋಗ ) ರೋಗ ಬಂದ ಪರಿಣಾಮ ಬೆಳೆಯೆಲ್ಲ ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. 

ಬೆಳೆ ಬಿತ್ತೋ ಮುನ್ನ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ರೈತರು  ಬೆಳೆ ವಿಮೆ ಮಾಡಿಸಿದ್ರು. ಇದೀಗ ಬೆಳೆ ನಷ್ಟವಾಗಿ ಒಂದು ವರ್ಷ ಕಳೆಯುತ್ತಾ ಬಂದ್ರೂ ಅತ್ತ ವಿಮೆ ಕಂಪನಿ ಕೊಟ್ಟರು. ಇತ್ತ ಕೃಷಿ ಇಲಾಖೆ ಅಧಿಕಾರಿಗಳೂ ಕೈಕೊಟ್ಟ ಪರಿಣಾಮ ಬಳ್ಳಾರಿ ತಾಲೂಕಿನ ನೂರಾರು  ಅನ್ನದಾತರು ಕಂಗಾಲಾಗಿದ್ದಾರೆ.

ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಡಿಸೆಂಬರ್‌ ಗಡುವು: ಸಚಿವ ಬಿ.ಸಿ.ಪಾಟೀಲ್‌

ಫ್ಯೂಚರ್ ಜನರಲ್ ವಿಮೆ ಕಂಪನಿಯಿಂದ ವಂಚನೆ ಆರೋಪ

ಬೆಳೆ ವಿಮೆ ಮಾಡಿಸಿದ್ರೂ ಬಿಡಿಗಾಸು ನೀಡದ ವಿಮೆ ಕಂಪನಿ ವಿರುದ್ಧ ರೈತರ ಆಕ್ರೋಶ.  ತೋರಿಸಲು ಬೆಳೆಯಿಲ್ಲ ನಷ್ಟವಾದ ಬಗ್ಗೆ ಸಾಕ್ಷಿಯೇ ಇಲ್ಲವಾಗಿದೆ. ಹೌದು, ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ವೇಳೆ ರೂಪನಗುಡಿ ಹೊಬಳಿಯ ಹತ್ತಕ್ಕೂ ಹೆಚ್ಚು ಹಳ್ಳಿಯ ಸಾವಿರಕ್ಕೂ ಹೆಚ್ಚು ರೈತರು ಹತ್ತು ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಕಡಲೆ ಬೆಳೆಯನ್ನು ಬೆಳೆದಿದ್ರು. ಜನೆವರಿ ವೇಳೆಗೆ ಬರಬೇಕಾದ ಬೆಳೆ, ರೋಗ ಮತ್ತು ಅತಿಯಾದ ಅಕಾಲಿಕ ಮಳೆಯಿಂದ ಬೆಳೆ ಹಾಳಾಗಿದೆ. ಎಕರೆಗೆ 178 ರೂಪಾಯಿ ಕಟ್ಟಿಸಿಕೊಂಡಿದ್ದ ವಿಮೆ ಕಂಪನಿ ನಷ್ಟವಾದ ಬೆಳೆಗೆ ಹೆಕ್ಟೇರ್ 36 ಸಾವಿರ ರೂಪಾಯಿ ಕೊಡಬೇಕು. ಆದರೆ ಕಳೆದ ಫೆಬ್ರವರಿ ತಿಂಗಳಲ್ಲಿ ಕಾಟಾಚಾರಕ್ಕೆ ಬಂದ ವಿಮೆ ಕಂಪನಿಯವರು ಕೆಲವು ಹೊಲಗಳನ್ನು ಮಾತ್ರ ಪರಿಶೀಲಿಸಿ ಪರಿಹಾರ ನೀಡೋದಾಗಿ ಹೇಳಿ ಹೋಗಿದ್ದಾರೆ.  

ಆದರೆ ಪರಿಶೀಲನೆ ಮಾಡಿ ವರ್ಷ ಕಳೆಯುತ್ತಾ ಬಂದ್ರೂ ಈವರೆಗೂ ವಿಮೆ ಕಂಪನಿಯವರು ಮತ್ತೆ ಬಂದಿಲ್ಲ. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದರೆ, ಯಾವುದೇ ಸ್ಪಷ್ಟ ಉತ್ತರವನ್ನು ನೀಡ್ತಿಲ್ಲ ಹೀಗಾಗಿ ಕಂಗಾಲಾಗಿರೋ ರೈತರು ವಿಮೆ ಕಂಪನಿಯ ಜೊತೆ ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
  
ಸರ್ಕಾರದಿಂದ ಪರಿಹಾರ ಬಂದಿದೆ ವಿಮೆ ಕಂಪನಿಯಿಂದ ಬರುತ್ತಿಲ್ಲ
 
ಬೆಳೆ ವಿಮೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಇಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎನ್ನುತ್ತಿದ್ದಾರೆ ರೈತರು.  ಇನ್ನೂ ಫ್ಯೂಚರ್ ಜನರಲ್ ವಿಮೆ ಕಂಪನಿಯವರು ವಂಚನೆ ಮಾಡುತ್ತಿದ್ದರೂ, ಅಧಿಕಾರಿಗಳು ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಅಧಿಕಾರಿಗಳು ವಿಮೆ ಕಂಪನಿಯವರ ಜೊತೆ ಸೇರಿಕೊಂಡಿದ್ದಾರೆಯೇ ಅನ್ನೋ ಅನುಮಾನ ರೈತರನ್ನು ಕಾಡುತ್ತಿದೆ.  ಇನ್ನೂ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿದ ರಾಜ್ಯ ಸರ್ಕಾರ ಒಂದಷ್ಟು ಪರಿಹಾರ ನೀಡಿದೆ. ಆದರೆ ವಿಮೆಯಿಂದ ಬರೋ ಹಣ ಬಂದಿಲ್ಲ ಎಂದು ರೈತರಾದ ಬಸವನಗೌಡ,  ಎರಿಯಣ್ಣ, ಮಹೇಶ್ವರ ಸ್ವಾಮಿ  ಆರೋಪಿಸಿದ್ದಾರೆ.

ಮೋದಿ ಸರ್ಕಾರ ರೈತರಿಗೆ ಮೋಸ ಮಾಡಿದೆ: ಆನೆಗುಂದಿ

ಅಧಿಕಾರಿಗಳು ಏನು ಮಾಡ್ತಿದ್ದಾರೆ?
 
 ದೇಶದ ಬೆನ್ನೆಲಬು ಅನ್ನದಾತ ಎನ್ನುತ್ತಾರೆ. ಒಮ್ಮೆ ಅತಿವೃಷ್ಟಿ ಮತ್ತೊಮ್ಮೆ ಅನಾವೃಷ್ಟಿಯಿಂದ ಬೆಳೆ ಹಾನಿಯಾದ್ರೂ ಇಲ್ಲಿ ಕೇಳೋರೇ ಇಲ್ಲವಾಗಿದೆ. ಇನ್ನೂ ಬೆಳೆ ನಷ್ಟಕ್ಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಮೆ ಮಾಡಿಸಿ ಎಂದು ಹೇಳುತ್ತದೆ. ಆದರೆ ಇಲ್ಲಿ ವಿಮೆ ಕಂಪನಿಯ ಹೆಸರಲ್ಲಿ ಅನ್ನದಾತನನ್ನು ಮೋಸ ಮಾಡುತ್ತಿದ್ರೂ. ಕೃಷಿ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಕ್ರಮಕ್ಕೆ ಮುಂದಾಗ್ತಿಲ್ಲ.

click me!